ಬೆಂಗಳೂರು : ನಗರದ ರಸ್ತೆಗಳ ದುಸ್ಥಿತಿ ಸಾರ್ಜನಿಕ ವಲಯದಲ್ಲಿ ದೊಡ್ಡ ಚರ್ಚೆಗಳು ನಡೆಯುತ್ತಿರುವ ನಡುವೆಯೇ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಅವರು ಬೆಂಗಳೂರು- ಹೊಸೂರು (Bengaluru Road) ರಸ್ತೆಯ ಅಧ್ವಾನದ ಬಗ್ಗೆ ಟ್ವೀಟ್ ಮಾಡಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ಗಮನ ಸೆಳೆದಿದ್ದಾರೆ. ಗಡ್ಕರಿ ಅವರಲ್ಲದೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೂ ಟ್ವೀಟ್ ಟ್ಯಾಗ್ ಮಾಡಿದ್ದಾರೆ. ಕಿರಣ್ ಅವರ ಅಭಿಪ್ರಾಯಕ್ಕೆ ದೊಡ್ಡ ಮಟ್ಟದ ಬೆಂಬಲ ದೊರಕಿದೆ.
ಬೆಂಗಳೂರು ಮತ್ತು ಹೊಸೂರು ನಡುವಿನ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ಈ ಹಿನ್ನೆಲೆಯಲ್ಲಿ ಅವರ ಟ್ವೀಟ್ ಚರ್ಚೆಗೆ ಕಾರಣವಾಗಿದೆ. ನಿತಿನ್ ಗಡ್ಕರಿಯವರೇ ನೀವು ದೇಶದ ಬೇರೆಬೇರೆ ಭಾಗಗಳಲ್ಲಿ ಅತ್ಯುತ್ತಮವಾದ ರಸ್ತೆಗಳನ್ನು ನಿರ್ಮಿಸಿದ್ದೀರಿ ಎಂಬುದು ಗೊತ್ತಿದೆ. ಆದರೆ, ನಮ್ಮ ಈ ರಸ್ತೆಯನ್ನು ಕೇಳುವರರು ಯಾರೂ ಇಲ್ಲ ಎಂಬುದಾಗಿ ಅವರು ಬರೆದುಕೊಂಡಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಕಿರಣ್ ಮಜುಂದಾರ್ ಅವರು ಪಾಲ್ಗೊಂಡಿದ್ದಾರೆ. ಇದೇ ಅವಧಿಯಲ್ಲಿ ಅವರು ಬೆಂಗಳೂರಿ ರಸ್ತೆಯ ಅವ್ಯವಸ್ಥೆ ಬಗ್ಗೆ ಗಮನ ಸೆಳೆದಿರುವುದು ಚರ್ಚೆಯ ಕಾವನ್ನು ಹೆಚ್ಟಿಸಿದೆ.
ಇದನ್ನೂ ಓದಿ | Invest Karnataka Saree Exhibition | ಫ್ಯಾಷನ್ ಪ್ರಿಯರನ್ನು ಸೆಳೆದ ಇನ್ವೆಸ್ಟ್ ಕರ್ನಾಟಕದ ಟ್ರೆಡಿಷನಲ್ ಸೀರೆಗಳ ಪ್ರದರ್ಶನ