Site icon Vistara News

No Cemetery: ಶವ ಸಂಸ್ಕಾರಕ್ಕಿಲ್ಲ ಜಾಗ; ನಡುರಸ್ತೆಯಲ್ಲಿ ಶವವಿಟ್ಟು ಗ್ರಾಮಸ್ಥರಿಂದ ಪ್ರತಿಭಟನೆ

#image_title

ಧಾರವಾಡ: ಶವ ಸಂಸ್ಕಾರಕ್ಕೆ ಜಾಗವಿಲ್ಲ ಎಂಬ ಕಾರಣಕ್ಕೆ (No Cemetery) ನಡುರಸ್ತೆಯಲ್ಲಿಯೇ ಶವ ಇಟ್ಟು ಇಲ್ಲಿನ ಗೋವನಕೊಪ್ಪ ಗ್ರಾಮಸ್ಥರು ಪ್ರತಿಭಟಿಸಿದ್ದಾರೆ.

ನವಲಗುಂದ ರಸ್ತೆ ತಡೆದು ಮಧ್ಯದಲ್ಲಿ ಶವವಿಟ್ಟು ಪ್ರತಿಭಟಿಸಿದ್ದಾರೆ. ಸಂಸ್ಕಾರಕ್ಕೆ ಜಾಗವನ್ನು ನಿಗದಿ ಪಡಿಸುವಂತೆ ಪಟ್ಟು ಹಿಡಿದರು. ಈ ಹಿಂದೆ ಶವಸಂಸ್ಕಾರಕ್ಕೆ ಸ್ಥಳೀಯರು ಜಾಗ ನೀಡಿದ್ದರು, ಆದರೆ ಈಗ ಶವ ಸಂಸ್ಕಾರಕ್ಕೆ ಜಾಗ ನೀಡದ ಕಾರಣ, ಕೂಡಲೇ ಜಾಗ ನಿಗದಿ ಪಡಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದರು.

ರಸ್ತೆ ಬಂದ್‌ ಮಾಡಿ ನಡುರಸ್ತೆಯಲ್ಲಿಯೇ ಶವ ಇಟ್ಟ ಕಾರಣದಿಂದಾಗಿ ವಾಹನ ಸವಾರರು ಗಂಟೆಗಟ್ಟಲೇ ನಿಂತಲೇ ನಿಲ್ಲುವಂತಾಯಿತು. ಕಿಲೋ ಮೀಟರ್‌ ಗಟ್ಟಲೆ ಬಸ್‌ ಸೇರಿ ಇತರೆ ವಾಹನಗಳ ಸಂಚಾರ ಆಗದ ಕಾರಣ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು.

Exit mobile version