ಚಿತ್ರದುರ್ಗ: ತಾಲೂಕಿನ ಬೈರಾಪುರ ಮತ್ತು ಚಿಕ್ಕೇರಹಳ್ಳಿ ಮಧ್ಯ ಬರುವ ಹಳೆಯ ಬ್ರಿಡ್ಜ್ ಸಮೀಪದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ (Chhatrapati Shivaji Maharaj) ಕಾಲದ ಹಳೆಯ ನಾಣ್ಯಗಳು (Old Coins) ಪತ್ತೆಯಾಗಿವೆ. ಇವು 1674ನೇ ಇಸವಿಯ ನಾಣ್ಯಗಳಾಗಿದ್ದು, ಒಂದು ನಾಣ್ಯದ ಮುಖದಲ್ಲಿ ಛತ್ರಪತಿ ಶಿವಾಜಿ ಮತ್ತು ಇನ್ನೊಂದು ಮುಖದಲ್ಲಿ ಕತ್ತಿ ಗುರಾಣಿ ಇರುವ ಚಿತ್ರವಿದೆ.
ಮಣ್ಣಿನ ಅವಶೇಷದಲ್ಲಿ ಸಿಲುಕಿರುವ ನಾಣ್ಯಗಳನ್ನು ಹೊರತೆಗೆಯಲು ಯುವಕರು ತಂಡೋಪತಂಡವಾಗಿ ಸ್ಥಳಕ್ಕೆ ಆಗಮಿಸುತ್ತಿದ್ದು ಅಗೆದಷ್ಟು ನಾಣ್ಯಗಳು ಸಿಗುತ್ತಿವೆ. ಈ ನಾಣ್ಯಗಳನ್ನು ಕಂಡ ಸ್ಥಳೀಯರು ನೋಡಲು ಹಾಗೂ ತೆಗೆದುಕೊಂಡು ಹೋಗಲು ಮುಗಿಬೀಳುತ್ತಿದ್ದಾರೆ.
ಸ್ವಾಭಿಮಾನಿ ರಾಷ್ಟ್ರ ನಿರ್ಮಾಣಕ್ಕೆ ಹೋರಾಡಿದ ಛತ್ರಪತಿ ಶಿವಾಜಿ ಮಹಾರಾಜರು ಹಿಂದುಸ್ತಾನವನ್ನು ಒಗ್ಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮಹಾರಾಷ್ಟ್ರದಲ್ಲಿ ತನ್ನ ಮರಾಠ ಸಾಮ್ರಾಜ್ಯದ ಅಧಿಪತ್ಯ ಸ್ಥಾಪಿಸಿದ್ದರೂ ಕರ್ನಾಟಕದ ದಕ್ಷಿಣ ಹಾಗೂ ತಮಿಳುನಾಡಿನ ಕೆಲವು ಭಾಗಗಳ ಮೇಲೆ ಹಿಡಿತ ಸಾಧಿಸಲು ಹವಣಿಸಿದ್ದರು. ಸಂಶೋಧಕರು ಈ ಸ್ಥಳದಲ್ಲಿ ಇನ್ನು ಹೆಚ್ಚಿನ ಉತ್ಕನನ ನಡೆಸಿದರೆ ಐತಿಹಾಸಿಕ ಕುರುಹುಗಳನ್ನು ಪತ್ತೆ ಹಚ್ಚಬಹುದಾಗಿದೆ.
ಇದನ್ನೂ ಓದಿ: Road Accident : ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇಯಲ್ಲಿ ಸರಣಿ ಅಪಘಾತ; ಟ್ರಾಫಿಕ್ ಜಾಮ್
ಮರಾಠರು ಚಿನ್ನ ಮತ್ತು ತಾಮ್ರದ ನಾಣ್ಯಗಳನ್ನು ಚಲಾವಣೆಗೆ ತಂದಿದ್ದರು. ಈಗ ಸಿಕ್ಕಿರುವ ನಾಣ್ಯಗಳು ತಾಮ್ರ ಅಥವಾ ಚಿನ್ನದ ನಾಣ್ಯಗಳೇ ಎಂಬ ಬಗ್ಗೆ ಗೊತ್ತಾಗಬೇಕಿದ್ದು, ಸಂಶೋಧಕರು ಸಹ ಪತ್ತೆ ಹಚ್ಚಬೇಕಿದೆ ಎಂದು ಹೇಳಲಾಗುತ್ತಿದೆ.