Site icon Vistara News

Karnataka Kala Darshini: ಏ.15, 16ರಂದು ಕೃಷ್ಣಾರ್ಜುನ ಕಾಳಗ, ವೀರ ಅಭಿಮನ್ಯು ಯಕ್ಷಗಾನ

On April 15 and 16, Krishnarjuna Kalaga, Veera Abhimanyu Yakshagana in girinagar at bengaluru

ಬೆಂಗಳೂರು: ಕರ್ನಾಟಕ ಕಲಾ ದರ್ಶಿನಿ ವತಿಯಿಂದ (Karnataka Kala Darshini) ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಗಿರಿನಗರದ ಶ್ರೀ ಮಹಾಗಣಪತಿ ದೇವಾಲಯದ ಸಭಾಂಗಣದಲ್ಲಿ ಯಕ್ಷಗಾನ ಬೇಸಿಗೆ ಶಿಬಿರ-2023 ಸಮಾರಂಭದ ಭಾಗವಾಗಿ ಏಪ್ರಿಲ್‌ 15ರಂದು ಕೃಷ್ಣಾರ್ಜುನ ಕಾಳಗ ಯಕ್ಷಗಾನ ಹಾಗೂ ಏಪ್ರಿಲ್‌ 16ರಂದು ವೀರ ಅಭಿಮನ್ಯು ಯಕ್ಷಗಾನವನ್ನು ಆಯೋಜಿಸಲಾಗಿದೆ.

ಏ.15ರಂದು ಶನಿವಾರ ಸಂಜೆ 5.30ಕ್ಕೆ ಡಾ. ಸುಪ್ರೀತ ಗೌತಮ್‌ ನಿರ್ದೇಶನದಲ್ಲಿ ಶಿಬಿರಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ನಂತರ ಗೌತಮ್‌ ಪಾಸ್ತಾನ್‌ ನಿರ್ದೇಶನದಲ್ಲಿ ಯಕ್ಷಗಾನ ಪೂರ್ವ ಪ್ರದರ್ಶನ ನಡೆಯಲಿದೆ. ಬಳಿಕ ನವ ದೆಹಲಿಯ ಸಿಸಿಆರ್‌ಟಿ ಶಿಷ್ಯವೇತನ ಪಡೆಯುವ ತಂಡದಿಂದ ಕೃಷ್ಣಾರ್ಜುನ ಕಾಳಗ ಯಕ್ಷಗಾನ ಪ್ರದರ್ಶನವಿರಲಿದೆ.

ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಅಶೋಕ್‌ ಎನ್‌. ಛಲವಾದಿ ಉದ್ಘಾಟಿಸಲಿದ್ದು, ಅತಿಥಿಗಳಾಗಿ ಗಿರಿನಗರದ ರಾಧಾಕೃಷ್ಣ ಆಸ್ಪತ್ರೆಯ ಡಾ.ವಿಶ್ವನಾಥ್‌ ಭಟ್‌, ರಾಮಾಶ್ರಮ ಸೇವಾ ಸಮಿತಿ ಅಧ್ಯಕ್ಷ ರಮೇಶ ಹೆಗಡೆ, ಉದ್ಯಮಿ ಹಾಗೂ ಸಮಾಜಸೇವಕ ಕೆ.ವಾದಿರಾಜ ಸಾಮಗ ಉಪಸ್ಥಿತರಿರಲಿದ್ದಾರೆ.

ಇದನ್ನೂ ಓದಿ | Music Program: ಏಪ್ರಿಲ್‌ 7ರಂದು ಹಿಂದುಸ್ಥಾನಿ ಗಾಯಕ ಪಂಡಿತ್‌ ಎಂ. ವೆಂಕಟೇಶ್‌ ಕುಮಾರ್‌ರಿಂದ ʼಸುಸ್ವರ ಸುಧಾʼ ಗಾಯನ

ಏ.16ರಂದು ಭಾನುವಾರ ಸಂಜೆ 5.30ಕ್ಕೆ ಶ್ರೀನಿವಾಸ ಸಾಸ್ತಾನ ನಿರ್ದೇಶನದಲ್ಲಿ ಶಿಬಿರಾರ್ಥಿಗಳು ʼವೀರ ಅಭಿಮನ್ಯುʼ ಯಕ್ಷಗಾನವನ್ನು ಪ್ರದರ್ಶನ ಮಾಡಲಿದ್ದಾರೆ. ಗಣ್ಯರಾದ ಬೆಂಗಳೂರು ಯುವ ವಿಪ್ರವೇದಿಕೆ ಟ್ರಸ್ಟ್‌ ಸಂಸ್ಥಾಪಕ ಅಧ್ಯಕ್ಷ ಕೃಷ್ಣಮೂರ್ತಿ ಅಡಿಗ, ಎಸ್‌ಬಿಎಂ ನಿವೃತ್ತ ಅಧಿಕಾರಿ ಎಂ.ಪಿ.ಆನಂದ್‌, ಸಂಪನ್ಮೂಲ ವ್ಯಕ್ತಿ ಡಾ.ಆನಂದ ರಾಮ ಉಪಾಧ್ಯ ಭಾಗವಹಿಸಲಿದ್ದಾರೆ.

ಹಿಮ್ಮೇಳ ಕಲಾವಿದರಾಗಿ ಭಾಗವತರಾದ ಶಂಕರ ಬಾಳೆಕುದುರು, ಮೃದಂಗ ವಾದಕರಾದ ರಾಘವೇಂದ್ರ ಬಿಡುವಾಳ, ಸಂಪತ್‌ ಆದಾರ್‌, ಗೌತಮ್‌ ಸಾಸ್ತಾನ, ಚಂಡೆ ಕಲಾವಿದ ಸುಬ್ರಹ್ಮಣ್ಯ ಭಾಗವಹಿಸಲಿದ್ದಾರೆ. ಮುಮ್ಮೇಳ ಕಲಾವಿದರಾಗಿ ಅನೀಶ್‌ ಆರ್‌, ಸುದನ್ವ ಭಟ್‌, ಆದರ್ಶ ಶೆಟ್ಟಿ, ಶ್ರೀಹರಿ ಸರಳಾಯ, ಶ್ರೇಯಸ್‌ ಸರಳಾಯ, ರಘುವೀರ ಪಾಂಗಣ್ಣಾಯ, ಚೈತ್ರಾ ಭಟ್‌, ದೀಕ್ಷಾ ಭಟ್‌, ದೃತಿ ಅಮ್ಮೆಂಬಾಳ ಉಪಸ್ಥಿತರಿರಲಿದ್ದಾರೆ. ಸುರೇಶ್‌ ತಂತ್ರಾಡಿ, ರಾಜೇಶ್‌ ಆಚಾರ್‌, ಉಮೇಶ್‌ ರಾಜ್‌ ವೇಷಭೂಷಣ ನಿರ್ವಹಣೆ ಹೊಣೆ ಹೊತ್ತಿದ್ದಾರೆ.

Exit mobile version