Site icon Vistara News

Master Hirannaiah Birthday: ಫೆ.19ರಂದು ʼನಾನು ಮಾಸ್ಟರ್‌ ಹಿರಣ್ಣಯ್ಯ ನನ್ನ ಕಥೆ ಹೇಳ್ತೀನಿʼ ಕೃತಿ ಲೋಕಾರ್ಪಣೆ, ಪುಣ್ಯ ಸ್ಮರಣೆ

On Feb. 19, Naanu Master Hirannaiah nanna kathe heltini book release in beangalore master Hirannayya will release my story.

#image_title

ಬೆಂಗಳೂರು: ದಿವಂಗತ ನಟ ರತ್ನಾಕರ ಡಾಕ್ಟರ್‌ ಮಾಸ್ಟರ್‌ ಹಿರಣ್ಣಯ್ಯ ಅವರ 89ನೇ ಹುಟ್ಟುಹಬ್ಬದ (Master Hirannaiah Birthday) ಹಿನ್ನೆಲೆಯಲ್ಲಿ ಭಾರತೀಯ ಆಯುರ್ವೇದ ಪ್ರತಿಷ್ಠಾನ, ಸ್ವಸ್ಥ ಸಮೃದ್ಧ ಭಾರತ ಹಾಗೂ ವಿಕ್ರಂ ಪ್ರಕಾಶನ ವತಿಯಿಂದ ಫೆಬ್ರವರಿ 19ರಂದು ಸಂಜೆ 4 ಗಂಟೆಗೆ ʼನಾನು ಮಾಸ್ಟರ್‌ ಹಿರಣ್ಣಯ್ಯ ನನ್ನ ಕಥೆ ಹೇಳ್ತೀನಿʼ ಕೃತಿ ಲೋಕಾರ್ಪಣೆ ಮತ್ತು ಸ್ಮರಣೆ ಕಾರ್ಯಕ್ರಮವನ್ನು ನಗರದ ಬಸವನಗುಡಿಯ ಬಿ.ಪಿ.ವಾಡಿಯಾ ರಸ್ತೆಯ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್‌ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಇದನ್ನೂ ಓದಿ | karnataka budget 2023 : ಉಪನಗರ ರೈಲಿಗೆ ವೇಗ, ನಗರದ ಸಾರಿಗೆ ಸಮಸ್ಯೆಗೆ ವೈಜ್ಞಾನಿಕ ಪರಿಹಾರ

ಸಂಜೆ 6.30ರಿಂದ 8ಗಂಟೆಗೆ ಡ್ರಾಮಾಟ್ರಿಕ್ಸ್‌ ತಂಡದಿಂದ ಎನ್‌.ಸಿ.ಮಹೇಶ್‌ ರಚನೆ, ನಿರ್ದೇಶನದ ʼಬೀಚಿ ರಸಾಯನʼ ನಾಟಕ ಪ್ರದರ್ಶನವಿರಲಿದೆ. ಅಣುಕು ರಾಮನಾಥ್‌ ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಖ್ಯಾತ ರಂಗಭೂಮಿ ಕಲಾವಿದ ಬಾಬು ಹಿರಣ್ಣಯ್ಯ, ಖ್ಯಾತ ಸಾಹಿತಿಗಳಾದ ಎಚ್.ಎಸ್.ವೆಂಕಟೇಶ್ ಮೂರ್ತಿ, ಖ್ಯಾತ ಹಾಸ್ಯ ಸಾಹಿತಿ ಎಂ.ಎಸ್.ನರಸಿಂಹಮೂರ್ತಿ, ಪ್ರಖರ ವಾಗ್ಮಿ ವೈವಿ ಗುಂಡೂರಾವ್, ಭಾರತೀಯ ಆಯುರ್ವೇದ ಪ್ರತಿಷ್ಠಾನ, ಸ್ವಸ್ಥ ಸಮೃದ್ಧ ಭಾರತ ಪ್ರಕಾಶಕ ಹರಿಪ್ರಸಾದ್‌ ಮತ್ತಿತರರು ಉಪಸ್ಥಿತರಿರಲಿದ್ದಾರೆ.

Exit mobile version