Site icon Vistara News

Sanskrit Workshop: ಬೆಂಗಳೂರಿನಲ್ಲಿ ಮಾ. 26ರಂದು ಒಂದು ದಿನದ ಸಂಸ್ಕೃತ ಯುವಜನೋತ್ಸವಃ ಕಾರ್ಯಾಗಾರ

One-day Sanskrit Yuvajanotsavah workshop to be held in Bengaluru

One-day Sanskrit Yuvajanotsavah workshop to be held in Bengaluru

ಬೆಂಗಳೂರು: ಸಂಸ್ಕೃತ ಕ್ಷೇತ್ರದಲ್ಲಿ ಕೆಲಸ ಮಾಡಲು ಬಯಸುವ ಯುವಕ, ಯುವತಿಯರಿಗಾಗಿ ಒಂದು ದಿನದ ಸಂಸ್ಕೃತ ಯುವಜನೋತ್ಸವಃ ಕಾರ್ಯಾಗಾರವನ್ನು (Sanskrit WorkShop) ಮಾ.26ರಂದು ಮೈತ್ರಿ ಸಂಸ್ಕೃತ-ಸಂಸ್ಕೃತಿ ಪ್ರತಿಷ್ಠಾನಮ್‌ ಹಮ್ಮಿಕೊಂಡಿದೆ.

ಯುವಕ, ಯುವತಿಯರಿಗಾಗಿ ಒಂದು ದಿನದ ಕಾರ್ಯಾಗಾರವನ್ನು ಮಾರ್ಚ್‌ 26ರ ಭಾನುವಾರ ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಮಲ್ಲೇಶ್ವರದಲ್ಲಿ ನಡೆಸಲಾಗುತ್ತಿದೆ. ಕಾರ್ಯಾಗಾರದಲ್ಲಿ ಭಾಗವಹಿಸಲು ಆಸಕ್ತಿ ಇರುವವರು ಮಾರ್ಚ್‌ 15ರೊಳಗೆ 9448243724 ಈ ಸಂಖ್ಯೆಗೆ ವಾಟ್ಸ್‌ಆ್ಯಪ್‌ ಮೂಲಕ ಹೆಸರು, ವಿಳಾಸ ಕಳಿಸಲು ಮನವಿ ಮಾಡಲಾಗಿದೆ.

ಇದನ್ನೂ ಓದಿ: Kasapa Awards: ಮಾರ್ಚ್‌ 12ರಂದು ಕನ್ನಡ ಸಾಹಿತ್ಯ ಪರಿಷತ್ತಿನ 2021ನೇ ಸಾಲಿನ ವಿವಿಧ ದತ್ತಿ ಪ್ರಶಸ್ತಿ ಪ್ರದಾನ

ಸಂಸ್ಕೃತಕ್ಕಾಗಿ ವಾರದಲ್ಲಿ ಒಂದು ಗಂಟೆ ಸಮಯ ಮೀಸಲಿಟ್ಟು, ಸಂಸ್ಕೃತದ ಮಹತ್ವವನ್ನರಿತು ಇತರರಿಗೂ ತಲುಪಿಸುವ ಉದ್ದೇಶವನ್ನು ಹೊಂದಿರಬೇಕು. ಸ್ವತಃ ಕಲಿತು ಬೇರೆಯವರನ್ನು ಕಲಿಯಲು ಪ್ರೇರೇಪಿಸುವ ಹಂಬಲವಿರುವವರು ಸೇರಿದಂತೆ ಸುತ್ತಮುತ್ತಲಿನ ಜನರಿಗೆ ಸಂಸ್ಕೃತದ ಅರಿವು ಮೂಡಿಸುವ ಮನಸ್ಸು ಇರುವವರು ಈ ಸಂಸ್ಕೃತ ಕಾರ್ಯಾಗಾರದಲ್ಲಿ ಭಾಗವಹಿಸಬಹುದು ಎಂದು ಮೈತ್ರಿ ಸಂಸ್ಕೃತ-ಸಂಸ್ಕೃತಿ ಪ್ರತಿಷ್ಠಾನವು ಪ್ರಕಟಣೆಯಲ್ಲಿ ತಿಳಿಸಿದೆ.

ರಾಜ್ಯದ ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version