Site icon Vistara News

Wonderla Bengaluru: ಮಾ.8ರಂದು ವಂಡರ್‌ಲಾದಲ್ಲಿ ಮಹಿಳೆಯರಿಗೆ ಮಾತ್ರ ಪ್ರವೇಶ; ಒಂದು ಟಿಕೆಟ್‌ ಖರೀದಿಸಿದರೆ ಮತ್ತೊಂದು ಉಚಿತ

Only women will be allowed in Wonderla on March 8, Buy One Get One FREE offer on entry tickets

#image_title

ಬೆಂಗಳೂರು: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಮಹಿಳೆಯರಿಗೆ ವಂಡರ್‌ಲಾ (Wonderla Bengaluru) ವಿಶೇಷ ಆಫರ್‌ ನೀಡಿದೆ. ಮಾ.8ರಂದು ವಂಡರ್‌ಲಾಗೆ ಆಗಮಿಸಲು ಆನ್‌ಲೈನ್‌ನಲ್ಲಿ ಬುಕ್ಕಿಂಗ್‌ ಮಾಡುವ ಮೊದಲ 1000 ಮಹಿಳೆಯರಿಗೆ ಒಂದು ಟಿಕೆಟ್‌ ಖರೀದಿಸಿದರೆ ಮತ್ತೊಂದು ಟಿಕೆಟ್‌ ಉಚಿತವಾಗಿ ಸಿಗಲಿದೆ.

ಮಹಿಳಾ ದಿನಾಚರಣೆಯಂದು ಕೇವಲ ಮಹಿಳೆಯರಿಗೆ ಮಾತ್ರ ವಂಡರ್‌ಲಾಗೆ ಪ್ರವೇಶವಿರಲಿದೆ. ಈ ದಿನವನ್ನು ಕೇವಲ ಮಹಿಳೆಯರಿಗಾಗಿ ಮೀಸಲಿಡುವ ಉದ್ದೇಶದಿಂದ 10 ವರ್ಷಕ್ಕಿಂತ ಮೇಲ್ಪಟ್ಟ ಗಂಡು ಮಕ್ಕಳಿಗೆ ಆ ದಿನ ಪ್ರವೇಶವಿರುವುದಿಲ್ಲ.

ಇದಷ್ಟೇ ಅಲ್ಲದೆ, ಮಾರ್ಚ್ 8ರಂದು ಬೆಂಗಳೂರಿನಿಂದ ವಂಡರ್‌ಲಾಗೆ ಬರುವ ಮಹಿಳೆಯರಿಗೆ ಬಿಎಂಟಿಸಿ ವೋಲ್ವೊ ಬಸ್‌ ಟಿಕೆಟ್‌ನಲ್ಲಿ ಶೇ. 15 ರಿಯಾಯಿತಿ ದೊರೆಯಲಿದೆ. ಹಾಗೆಯೇ ಹೆಚ್ಚುವರಿಯಾಗಿ ಅದೇ ದಿನ ಪಾರ್ಕ್ ಟಿಕೆಟ್ ಕೌಂಟರ್‌ನಲ್ಲಿ ತಮ್ಮ ಬಿಎಂಟಿಸಿ ವೋಲ್ವೊ ಬಸ್ ಟಿಕೆಟ್ ಅನ್ನು ತೋರಿಸುವ ಮಹಿಳಾ ಪ್ರಯಾಣಿಕರಿಗೆ ವಂಡರ್‌ ಲಾ ಪಾರ್ಕ್ ಟಿಕೆಟ್‌ಗಳ ಮೇಲೆ ಶೇ.15 ರಿಯಾಯಿತಿ ಸಿಗಲಿದೆ.

ಈ ಬಗ್ಗೆ ವಂಡರ್‌ ಲಾ ವ್ಯವಸ್ಥಾಪಕ ನಿರ್ದೇಶಕ ಅರುಣ್ ಕೆ. ಚಿಟ್ಟಿಲಪ್ಪಿಳ್ಳಿ ಮಾತನಾಡಿ, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ವಿಶೇಷವಾಗಿ ಆಚರಿಸುವ ಉದ್ದೇಶದಿಂದ ಮಾರ್ಚ್ 8ರಂದು ವಂಡರ್‌ಲಾ ಪಾರ್ಕ್‌ಗೆ ಕೇವಲ ಮಹಿಳೆಯರಿಗೆ ಮಾತ್ರ ಪ್ರವೇಶ ನೀಡುವುದರ ಮೂಲಕ ಮಹಿಳೆಯರಿಗೆ ಅವಿಸ್ಮರಣೀಯ ದಿನವನ್ನಾಗಿಸಲಿದ್ದೇವೆ ಎಂದರು.

ಇದನ್ನೂ ಓದಿ | ರಾಜ ಮಾರ್ಗ ಅಂಕಣ : ನಿಮ್ಮ ಮಗು ಹೇಗಿರಬೇಕು? ಅದನ್ನು ನಿರ್ಧರಿಸುವ ಹೊಣೆ ಹೆತ್ತವರದ್ದು!

ಬಿಎಂಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಬಿ.ಸಿ.ನಾಗರಾಜ್ ಮೂರ್ತಿ ಮಾತನಾಡಿ, ಬಿಎಂಟಿಸಿ ಈ ಹಿಂದೆಯೂ ವಂಡರ್‌ಲಾ ಹಾಲಿಡೇಸ್‌ನೊಂದಿಗೆ ಸಹಯೋಗ ಹೊಂದಿದ್ದು, ಇದರ ಫಲಿತಾಂಶವು ಪರಿಣಾಮಕಾರಿಯಾಗಿತ್ತು. ಹೀಗಾಗಿ ಸಾರ್ವಜನಿಕರಿಗೆ ಅನುಕೂಲವಾಗುವ ಇಂತಹ ವ್ಯವಸ್ಥೆಯನ್ನು ಮಾಡಲು ಬಿಎಂಟಿಸಿ ಸದಾ ಸಿದ್ಧವಾಗಿರುತ್ತದೆ ಎಂದು ತಿಳಿಸಿದರು.

ಕೊಡುಗೆಯ ಕುರಿತು ಹೆಚ್ಚಿನ ವಿವರಗಳಿಗಾಗಿ, https://www.wonderla.com/offers/womens-day-offer-at-wonderla-parks.html ವೆಬ್‌ಸೈಟ್‌ಗೆ ಭೇಟಿ ನೀಡಿ ಅಥವಾ ಬೆಂಗಳೂರಿನ ವಂಡರ್‌ಲಾ ಪಾರ್ಕ್ ಅನ್ನು ಸಂಪರ್ಕಿಸಿ – 91 8037230333, 91 8035073966 ಹೆಚ್ಚಿನ ಮಾಹಿತಿಗಾಗಿ, www.wonderla.com ಗೆ ಭೇಟಿ ನೀಡಿ ತಿಳಿದುಕೊಳ್ಳಬಹುದಾಗಿದೆ.

Exit mobile version