Site icon Vistara News

DK Shivakumar| ಡಿಕೆಶಿ ಮನೆಯಲ್ಲೇ ಐಟಿ, ಇ.ಡಿ, ಸಿಬಿಐ ಕಚೇರಿ ತೆಗೆದುಬಿಡಿ: ರಣದೀಪ್‌ ಸುರ್ಜೇವಾಲಾ ಲೇವಡಿ

Randeep Singh Surjewala

ಬೆಳಗಾವಿ: ಡಿ.ಕೆ. ಶಿವಕುಮಾರ್‌ ಅವರ ಮೇಲೆ ಆಗಾಗ ದಾಳಿ ನಡೆಸುವುದಕ್ಕಾಗಿ ಟೀಮ್‌ ಕಳುಹಿಸೋ ಬದಲು ಅವರ ಮನೆಯಲ್ಲೇ ಐಟಿ, ಇ.ಡಿ., ಸಿಬಿಐ ಕಚೇರಿ ತೆಗೆದುಬಿಡಿ.. ಹೀಗೆಂದು ಲೇವಡಿ ಮಾಡಿದ್ದಾರೆ ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ.

ಬೆಳಗಾವಿಯಲ್ಲಿ ಮಾತನಾಡಿದ ಅವರು,ಡಿಕೆಶಿ ಮನೆಯಲ್ಲಿಯೇ ಒಂದು ಐಟಿ, ಇಡಿ, ಸಿಬಿಐ ಕಚೇರಿ ತೆಗೆದುಬಿಟ್ಟರೆ ಯಾವುದೇ ಸಮಸ್ಯೆ ಇರುವುದಿಲ್ಲ. ಆಗಾಗ ದಾಳಿ ಮಾಡುವುದು ತಪ್ಪುತ್ತದೆ ಎಂದರು.

ʻʻಡಿ.ಕೆ ಶಿವಕುಮಾರ್‌ ಅವರ ಮನೆ ಮೇಲೆ ಎಷ್ಟು ಸಾರಿ ರೇಡ್ ಮಾಡ್ತೀರಿ? ಸುಮ್ಮ‌ನೆ ಇವರ ಮನೆಯಲ್ಲಿ ಒಂದು ಇಡಿ, ಸಿಬಿಐ ಕಚೇರಿ ತೆಗೆದುಬಿಡಿ. ಒಂದು ಡಜನ್ ಬಾರಿ ದಾಳಿ ಮಾಡಿದ್ದರೂ ನಿಮಗೆ ಏನೂ ಸಿಕ್ಕಿಲ್ಲʼʼ ಎಂದು ಹೇಳಿದ ಅವರು, ʻʻಕಾಂಗ್ರೆಸ್ ಪಕ್ಷ ಯಾವುದಕ್ಕೂ ಹೆದರಲ್ಲ. ಕಾಂಗ್ರೆಸ್ ಪಕ್ಷ, ಕಾಂಗ್ರೆಸ್ ಕಾರ್ಯಕರ್ತರು ಡಿಕೆಶಿ ಜೊತೆಗೆ ಇದ್ದಾರೆʼʼ ಎಂದರು.

ʻʻಬಿಜೆಪಿ ಹಾಗೂ ಬೊಮ್ಮಾಯಿ ಸರ್ಕಾರ ಏನು ಮಾಡಬೇಕು ಎಂದು ಗೊತ್ತಾಗದೆ ಚಡಪಡಿಸುತ್ತಿದೆ. ಇದು ಅನೈತಿಕ ಮಾರ್ಗದಿಂದ ಬಂದ ಸರ್ಕಾರ. ಜನರ ದೃಷ್ಟಿಯಲ್ಲಿ ಬಿಜೆಪಿಯವರು ನೆಲಕ್ಕೆ ಬಿದ್ದಿದ್ದಾರೆ, ಪ್ರಜಾಪ್ರಭುತ್ವದಲ್ಲಿ ಒಂದು ದಿನವೂ ಇರಲು ಸರ್ಕಾರಕ್ಕೆ ನೈತಿಕತೆ ಇಲ್ಲʼʼ ಎಂದು ಹೇಳಿದರು.

ʻʻಬೊಮ್ಮಾಯಿ ಸರ್ಕಾರದ 40 ಪರ್ಸೆಂಟ್‌ ಹಗರಣದಲ್ಲಿ ಮುಳುಗಿದೆ. ಎರಡು ಕೈಗಳಿಂದ ಜನರನ್ನು ಲೂಟಿ ಮಾಡುತ್ತಿದೆ. ಕರ್ನಾಟಕದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆʼʼ ಎಂದು ರಣದೀಪ್‌ ಸಿಂಗ್ ಸುರ್ಜೇವಾಲಾ ಹೇಳಿದರು.

ಇದನ್ನೂ ಓದಿ | Voter data | ಬೊಮ್ಮಾಯಿ ಅವರೇ ನಿಮ್ಮ ವಿರುದ್ಧ ಯಾಕೆ FIR ಆಗಿಲ್ಲ? 11 ಪ್ರಶ್ನೆ ಕೇಳಿದ ರಣದೀಪ್‌ ಸುರ್ಜೇವಾಲಾ

Exit mobile version