ಬೆಂಗಳೂರು: ಆಯುರ್ವೇದಿಕ್ ಔಷಧಿ ಮಾರಾಟ ಮಾಡಲು ಹೋಗಿ ದಕ್ಷಿಣ ಆಫ್ರಿಕಾದ ಸುಡಾನ್ ನಗರದಲ್ಲಿ ಸಿಲುಕಿದ್ದ ಹಕ್ಕಿಪಿಕ್ಕಿ ಜನಾಂಗದವರು (Operation Kaveri) ರಾಜ್ಯಕ್ಕೆ ವಾಪಸ್ ಆಗಿದ್ದಾರೆ. ಸುಡಾನ್ ನಗರದಿಂದ ವಿಮಾನ ನಿಲ್ದಾಣದವರೆಗೂ ತೆರಳಲು ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿತ್ತು.
ದಾವಣಗೆರೆಯ ಚನ್ನಗಿರಿ ತಾಲೂಕಿನ ಗೋಪಾನಹಾಳ್ ಮತ್ತು ಅಸ್ತಾಪನಹಳ್ಳಿ ಸಂತ್ರಸ್ತರು ಸೇರಿದಂತೆ 129 ಜನ ಕನ್ನಡಿಗರು ಇಂಡಿಗೋ ವಿಮಾನದಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. 329 ಜನ ಭಾರತೀಯರಲ್ಲಿ 139 ಮಂದಿ ರಾಜ್ಯದವರಾಗಿದ್ದಾರೆ.
ವಿಮಾನ ನಿಲ್ದಾಣಕ್ಕೆ ಬಂದಿಳಿದ 139 ಜನರಿಗೂ ಆರೋಗ್ಯ ತಪಾಸಣೆ ಮಾಡಲಾಗಿದೆ. ವಿಪತ್ತು ನಿರ್ವಹಣಾ ಪ್ರಾಧಿಕಾರದ ನೋಡಲ್ ಅಧಿಕಾರಿ ಆರ್.ಮನೋಜ್ ನೇತೃತ್ವದಲ್ಲಿ ಸಂತ್ರಸ್ತರನ್ನು ನಾಲ್ಕು ಬಸ್‌ಗಳಲ್ಲಿ ತವರು ಜಿಲ್ಲೆಗಳಿಗೆ ಕಳುಹಿಸಲಾಗಿದೆ.
ಇದನ್ನೂ ಓದಿ: ಡೆತ್‌ನೋಟ್ ಬರೆದಿಟ್ಟು 7ನೇ ಮಹಡಿಯಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ; ಮನನೊಂದಿದ್ದು ಯಾಕೆ?
ಶಿವಮೊಗ್ಗ, ಮೈಸೂರು, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳಿಗೆ ತೆರಳಿದ್ದಾರೆ. ಸುರಕ್ಷಿತವಾಗಿ ತಾಯ್ನಾಡಿಗೆ ಕರೆ ತರುವಲ್ಲಿ ಯಶಸ್ವಿಯಾದ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಅನಿವಾಸಿ ಕನ್ನಡಿಗರು ಧನ್ಯವಾದ ತಿಳಿಸಿದ್ದಾರೆ.