Site icon Vistara News

Operation Leopard : ಕನ್ನಾಳ ಬೆಟ್ಟದಲ್ಲಿ ಚಿರತೆ ಕಾಟ; ಕೊನೆಗೂ ಬೋನಲ್ಲಿ ಸೆರೆ

leopard operation ಕೊಪ್ಪಳ ಕನ್ನಾಳ ಬೆಟ್ಟ

ಕೊಪ್ಪಳ: ಕುಷ್ಟಗಿ ತಾಲೂಕಿನ ಕನ್ನಾಳ ಬೆಟ್ಟದಲ್ಲಿ ಚಿರತೆ ಕಾಣಿಸಿಕೊಂಡು ಆತಂಕಕ್ಕೆ ಕಾರಣವಾಗಿತ್ತು. ಹೀಗಾಗಿ ಅಲ್ಲಿ ಚಿರತೆ ಸೆರೆಗಾಗಿ (Operation Leopard) ಇಡಲಾಗಿದ್ದ ಬೋನಿಗೆ ಚಿರತೆಯೊಂದು ಬಿದ್ದಿದ್ದು, ಸುತ್ತಮುತ್ತಲ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

ಕನ್ನಾಳ ಬೆಟ್ಟದಲ್ಲಿ ಚಿರತೆ ಕಾಣಿಸಿಕೊಂಡ ಸುದ್ದಿ ಹರಡಿದ್ದರಿಂದ ಸುತ್ತಮುತ್ತಲು ಓಡಾಟ ನಡೆಸಲೂ ಜನ ಆತಂಕಪಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ಚಿರತೆ ಸೆರೆಗೆ ಅರಣ್ಯ ಇಲಾಖೆ ಅಧಿಕಾರಿಗಳ ಮೊರೆಹೋಗಲಾಗಿತ್ತು.

ಕನ್ನಾಳ ಗುಡ್ಡದಲ್ಲಿ ಚಿರತೆ ಸೆರೆಗೆ ಬೋನು ಇರಿಸಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಪ್ರತಿ ದಿನವೂ ಅತ್ತ ಹೋಗಿ ಪರಿಶೀಲನೆ ನಡೆಸಿ ಬರುತ್ತಿದ್ದರು. ಈಗ ಚಿರತೆಯೊಂದು ಬೋನಿಗೆ ಬಿದ್ದಿರುವುದು ಗೊತ್ತಾಗಿದೆ. ಶನಿವಾರ (ಜ.೧೪) ರಾತ್ರಿ ನಾಲ್ಕು ವರ್ಷದ ಹೆಣ್ಣು ಚಿರತೆಯೊಂದು ಬೋನಿಗೆ ಬಿದ್ದಿದೆ. ಆದರೆ, ಇನ್ನೂ ಚಿರತೆಗಳು ಇವೆಯೇ ಎಂಬ ಆತಂಕ ಸ್ಥಳೀಯರಲ್ಲಿ ಕಾಡುತ್ತಿದೆ.

ಇದನ್ನೂ ಓದಿ | Nitin Gadkari : ಕೇಂದ್ರ ಸಚಿವ ನಿತಿನ್‌ ಗಡ್ಕರಿಗೆ ಜೀವ ಬೆದರಿಕೆ; ಹಿಂಡಲಗಾ ಜೈಲಿನಲ್ಲಿ 2ನೇ ದಿನವೂ ತನಿಖೆ ಮುಂದುವರಿಕೆ

Exit mobile version