ಬೆಂಗಳೂರು/ದೇವನಹಳ್ಳಿ: ಇಲ್ಲಿನ ದೇವನಹಳ್ಳಿ ತಾಲೂಕಿನ ತರಬಹಳ್ಳಿಯ ಐಟಿಸಿ ಫ್ಯಾಕ್ಟರಿಯಲ್ಲಿ ಚಿರತೆ (Operation Leopard) ಪ್ರತ್ಯಕ್ಷವಾಗಿದೆ. ಕಳೆದ ಎರಡು ದಿನಗಳಿಂದಲೂ ಅರಣ್ಯ ಪ್ರದೇಶದಲ್ಲಿ ಚಿರತೆ ಸಂಚಾರ ಮಾಡುತ್ತಿರುವುದು ಕಂಡುಬಂದಿದೆ. ಚಿರತೆ ಹಿಡಿಯಲು ಅರಣ್ಯಾಧಿಕಾರಿಗಳು ಬೋನ್ ಅಳವಡಿಕೆ ಮಾಡಿದ್ದಾರೆ. ಜತೆಗೆ ಐದು ಜನ ಅರಣ್ಯ ಸಿಬ್ಬಂದಿಯಿಂದ ಚಿರತೆ ಪತ್ತೆಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಸುತ್ತ ಮುತ್ತ ದಟ್ಟವಾದ ಕಾಡು ಪ್ರದೇಶ ಇರುವುದರಿಂದ ಚಿರತೆ ಬಂದಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಒಂದಲ್ಲ ನಾಲ್ಕು ಚಿರತೆ ಪತ್ತೆ
ಸೋಮಪುರ ಸಮೀಪದ ಕೋಡಿಪಾಳ್ಯಕ್ಕೆ ಚಿರತೆಯು ಎಂಟ್ರಿ ಕೊಟ್ಟಿದೆ. ಬಿಡಿಎ ಸಂಪರ್ಕ ನೀಡುವ ರಸ್ತೆಯಲ್ಲಿ ಚಿರತೆಯು ಜಿಂಕೆಯನ್ನು ಬೇಟೆಯಾಡಿದೆ. ಇಲ್ಲಿ ನಾಲ್ಕು ಚಿರತೆಗಳಿದ್ದು, ಮುಖ್ಯ ರಸ್ತೆಗೆ ಚಿರತೆ ನುಗ್ಗಿ ಬೇಟೆ ಆಡಿರುವುದು ಆತಂಕ ಮೂಡಿಸಿದೆ. ಸುತ್ತ ಐದು ಶಾಲೆಗಳಿದ್ದು, ಶಾಲಾ ಮಕ್ಕಳು ರಸ್ತೆಯಲ್ಲಿ ಓಡಾಡುತ್ತಿದ್ದಾರೆ. ಈ ರಸ್ತೆ ಶರ್ಟ್ ಕಟ್ ರೂಟಿನಲ್ಲಿ ವಾಕಿಂಗ್, ಮುಖ್ಯ ರಸ್ತೆಗೆ ಹೋಗಲು ಬರುತ್ತಾರೆ. ಈಗ ಸುರಕ್ಷತೆ ಇಲ್ಲದೇ ಜನರು ಪರದಾಟ ಮಾಡುತ್ತಿದ್ದಾರೆ.
ಇದನ್ನೂ ಓದಿ | Elephant Attack | ಕೊಡಗು, ಹಾಸನದಲ್ಲಿ ತೋಟಕ್ಕೆ ನುಗ್ಗಿ ಬೆಳೆ ನಾಶ ಮಾಡಿದ ಕಾಡಾನೆಗಳು; ರೈತರು ಕಂಗಾಲು