ಚಿಕ್ಕಮಗಳೂರು: ಕಾಫಿನಾಡಿನ ಜಿಲ್ಲಾಸ್ಪತ್ರೆ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ. ಬ್ರೈನ್ ಟ್ಯೂಮರ್‌ನಿಂದ ಮೃತಪಟ್ಟ ಮಹಿಳೆಯು ಸೋಮವಾರ ಅಂಗಾಂಗ ದಾನ ಮಾಡಿದ್ದು, ನಗರದಿಂದ ಅಂಗಾಂಗಗಳನ್ನು (Organ Donation) ಬೆಂಗಳೂರು ಹಾಗೂ ಮಂಗಳೂರಿಗೆ ಜೀರೋ ಟ್ರಾಫಿಕ್‌ನಲ್ಲಿ ರವಾನೆ ಮಾಡಲಾಯಿತು.
ಕಾಂಗ್ರೆಸ್ ಮಾಧ್ಯಮ ವಕ್ತಾರ, ನಗರಸಭೆ ಮಾಜಿ ಸದಸ್ಯ ರೂಬಿ ಅವರ ಪತ್ನಿ ಸಹನಾ ಮೊಸೆಸ್ ಅವರು ಬ್ರೈನ್ ಟ್ಯೂಮರ್‌ನಿಂದ ಬಳಲುತ್ತಿದ್ದರು. ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರಿಂದ ಸಹನಾ ಕುಟುಂಬಸ್ಥರು ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಮಹಿಳೆಯ ಕಣ್ಣು, ಕಿಡ್ನಿ ಹಾಗೂ ಲಿವರ್ ಸೇರಿ ಒಟ್ಟು ಐದು ಅಂಗಾಂಗಳನ್ನು ದಾನ ಮಾಡಲಾಗಿದೆ. ಈ ಮೂಲಕ ಮೂಲಕ ಸಾವಿನಲ್ಲೂ ಸಹನಾ ಸಾರ್ಥಕತೆ ಮೆರೆದಿದ್ದಾರೆ. ಸಹನಾ ಅಂಗಾಂಗ ರವಾನೆ ಮಾಡುವ ಮೂಲಕ 2ನೇ ಬಾರಿ ಅಂಗಾಂಗ ರವಾನೆಗೆ ಚಿಕ್ಕಮಗಳೂರು ಜಿಲ್ಲಾಸ್ಪತ್ರೆ ಸಾಕ್ಷಿಯಾಯಿತು. ಸಹನಾ ಅಂಗಾಂಗಳನ್ನು ಬೆಂಗಳೂರಿನ ಅಪೋಲೋ, ಮಂಗಳೂರಿನ ಎ.ಜೆ.ಆಸ್ಪತ್ರೆಗೆ ಮಹಿಳೆಯ ಅಂಗಾಂಗಗಳನ್ನು ರವಾನೆ ಮಾಡಲಾಯಿತು.
ಇದನ್ನೂ ಓದಿ | ಕರೆಂಟ್ ಶಾಕ್; ದಂಪತಿ ಸಾವು, ಮಗು ಅನಾಥ- ವಿಧಿಯ ಕ್ರೂರತೆಗೆ ಶಪಿಸಿದ ಲಕ್ಷ್ಮೀ ಹೆಬ್ಬಾಳ್ಕರ್
9 ತಿಂಗಳ ಹಿಂದೆ ಯುವತಿ ರಕ್ಷಿತಾ ಬಾಯಿ ಅಂಗಾಂಗಗಳನ್ನು ಜಿಲ್ಲಾಸ್ಪತ್ರೆ ರವಾನೆ ಮಾಡಿತ್ತು. ಈ ಮೂಲಕ ಜಿಲ್ಲಾಸ್ಪತ್ರೆಯಿಂದ ಅಂಗಾಂಗ ರವಾನೆ ಮಾಡಿದ ಮೊದಲ ಜಿಲ್ಲೆ ಎಂಬ ಖ್ಯಾತಿಗೆ ಕಾಫಿನಾಡು ಭಾಜನವಾಗಿತ್ತು.
ಇನ್ನು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕಡೂರು ತಾಲೂಕಿನ ಸೋಮನಹಳ್ಳಿ ತಾಂಡಾದ ವಿದ್ಯಾರ್ಥಿನಿ ಸಾರಿಗೆ ಬಸ್‌ನಿಂದ ಇಳಿಯುವಾಗ ಆಯತಪ್ಪಿ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಳು. ತಕ್ಷಣ ಯುವತಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆಕೆಯ ಮೆದುಳು ನಿಷ್ಕ್ರಿಯವಾಗಿತ್ತು. ಹೀಗಾಗಿ ಪಾಲಕರು, ಮಗಳ ಅಂಗಾಂಗ ದಾನ ಮಾಡಿದ್ದರು. ರಕ್ಷಿತಾ, ಚಿಕ್ಕಮಗಳೂರಿನ ಬಸವನಹಳ್ಳಿ ಸರ್ಕಾರಿ ಪಿಯು ಕಾಲೇಜಿನಲ್ಲಿ ಮೊದಲ ವರ್ಷದ ಬಿ.ಕಾಂ ಓದುತ್ತಿದ್ದಳು.
ಓವರ್‌ಟೇಕ್ ಮಾಡಲು ಹೋಗಿ ಫುಟ್ಬಾಲ್‌ನಂತೆ ಉರುಳಿಹೋದ ಕಾರುಗಳು, ವಿಡಿಯೊ ಇಲ್ಲಿದೆ
ಚಿಕ್ಕಮಗಳೂರು: ಮೂಡಿಗೆರೆ ಬಳಿ ಕಾರುಗಳೆರಡು ಅಪಘಾತಕ್ಕೀಡಾಗಿವೆ. ಅತಿವೇಗದಿಂದ ಓವರ್‌ಟೇಕ್ ಮಾಡಲು ಹೋದ ಪರಿಣಾಮ ಎರಡೂ ಕಾರುಗಳು ಫುಟ್‌ಬಾಲ್‌ನಂತೆ ಉರುಳಿಕೊಂಡು ಹೋಗಿ ಕಂದಕಕ್ಕೆ ಉರುಳಿವೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೋಣಿಬೀಡು ಸಮೀಪದ ಜೇನುಕಲ್ ಗ್ರಾಮದ ಬಳಿ ಘಟನೆ ನಡೆದಿದೆ. ಮೂಡಿಗೆರೆಯಿಂದ ಬೇಲೂರು ಕಡೆಗೆ ಹೋಗುತ್ತಿದ್ದ ಎರಡು ಕಾರುಗಳಲ್ಲಿ ಹಿಂದಿನದು ಅತಿವೇಗದಿಂದ ಓವರ್ ಟೇಕ್ ಮಾಡಲು ಹೋದ ಪರಿಣಾಮ ಎರಡೂ ಡಿಕ್ಕಿಯಾಗಿ ನಿಯಂತ್ರಣ ಕಳೆದುಕೊಂಡು ಫುಟ್ಬಾಲ್‌ನಂತೆ ರಸ್ತೆಯ ಬದಿ ಇದ್ದ ಕಂದಕ್ಕೆ ಉರುಳಿಕೊಂಡು ಹೋಗಿವೆ.
ಇದನ್ನೂ ಓದಿ | Contaminated Water : ಕಾವಾಡಿಗರ ಹಟ್ಟಿ ವಿಷಜಲ ದುರಂತಕ್ಕೆ ಇನ್ನೊಂದು ಬಲಿ; ಒಟ್ಟು ಸಾವಿನ ಸಂಖ್ಯೆ 6+1ಕ್ಕೆ ಏರಿಕೆ
ಅಪಘಾತದ ಭೀಕರತೆ ಸ್ಥಳೀಯರು ಬೆಚ್ಚಿಬೀಳುವಂತಿತ್ತು. ಅಪಘಾತದ ದೃಶ್ಯ ರಸ್ತೆ ಬದಿಯ ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಾರಿನಲ್ಲಿದ್ದ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳು ಆಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗೋಣಿಬೀಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.