ಬೆಂಗಳೂರು: ದಾವಣಗೆರೆ ಜಿಲ್ಲೆ ಚೆನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಲಂಚ ಪಡೆದ ಆರೋಪದಡಿ ಈಗಾಗಲೇ ಲೋಕಾಯುಕ್ತ ಅಧಿಕಾರಿಗಳಿಂದ (Lokayukta Raid) ಬಂಧಿತರಾಗಿದ್ದಾರೆ. ಪ್ರಶಾಂತ್ ನಿವಾಸ, ಕಚೇರಿ, ಎಂ.ಸ್ಟುಡಿಯೋಗಳನ್ನೆಲ್ಲ ಲೋಕಾಯುಕ್ತ ಅಧಿಕಾರಿಗಳು ಜಾಲಾಡಿದ್ದಾರೆ. ಶೋಧದ ವೇಳೆ ಪ್ರಶಾಂತ್ ನಿವಾಸದಲ್ಲಿ 6 ಕೋಟಿ ರೂಪಾಯಿ, ಕಚೇರಿಯಲ್ಲಿ 1.62 ಕೋಟಿ ರೂಪಾಯಿ ಸಿಕ್ಕಿದ್ದು, ಇದುವರೆಗೆ ಸುಮಾರು 7.62 ಕೋಟಿ ರೂಪಾಯಿ ಪತ್ತೆಯಾಗಿದ್ದಾಗಿ ವರದಿಯಾಗಿದೆ.
ಬೆಂಗಳೂರು ಜಲಮಂಡಳಿಯಲ್ಲಿ ಮುಖ್ಯಾಧಿಕಾರಿಯಾಗಿರುವ ಪ್ರಶಾಂತ್, 40 ಲಕ್ಷ ರೂಪಾಯಿಗೂ ಅಧಿಕ ಹಣದೊಂದಿಗೆ ರೆಡ್ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ಶಾಸಕ ಮಾಡಾಳು ವಿರೂಪಾಕ್ಷಪ್ಪ ಅಧ್ಯಕ್ಷರಾಗಿರುವ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮ (ಕೆಎಸ್ಡಿಎಲ್) ಕಚ್ಚಾವಸ್ತುಗಳನ್ನು ಪೂರೈಸುವ ಟೆಂಡರ್ ನೀಡಲು ಹಣಕ್ಕೆ ಬೇಡಿಕೆಯಿಡಲಾಗಿತ್ತು. ಹೀಗಾಗಿ ಕೆಎಸ್ಡಿಎಲ್ ಎಂಡಿ ಮಹೇಶ್ ಅವರ ಮನೆಯಲ್ಲೂ ಲೋಕಾಯುಕ್ತ ಅಧಿಕಾರಿಗಳು ಶೋಧ ನಡೆಸಿದ್ದರು. ಅವರ ಮನೆಯಲ್ಲಿ ಅಂಥ ಪ್ರಮುಖ ದಾಖಲೆಗಳಾಗಲಿ, ಹಣವಾಗಲೀ ಸಿಕ್ಕಿಲ್ಲ ಎನ್ನಲಾಗಿದೆ.
ಇದನ್ನೂ ಓದಿ: Lokayukta Raid: ಬಿಜೆಪಿ ಶಾಸಕನ ಪುತ್ರ ಸೇರಿ ಐವರನ್ನು ಬಂಧಿಸಿದ ಲೋಕಾಯುಕ್ತ ಅಧಿಕಾರಿಗಳು; ಶಾಸಕರ ಮನೆಯಲ್ಲಿ ಮುಂದುವರಿದ ಶೋಧ