ಬೆಂಗಳೂರು: ಇಲ್ಲಿನ ಜಯನಗರದಲ್ಲಿರುವ ಯುವಕ ಸಂಘದ ಬೆಂಗಳೂರು ಆರ್ಟ್ ಗ್ಯಾಲರಿಯಲ್ಲಿ ಕರ್ನಾಟಕ ರಾಜ್ಯೋತ್ಸವ ದಿನದ ಅಂಗವಾಗಿ ವರ್ಣಸಿರಿ ಚಿತ್ರಕಲಾ ಪ್ರದರ್ಶನವನ್ನು ಆಯೋಜಿಸಲಾಗಿದೆ. ನವೆಂಬರ್ 1 ರಿಂದ ಆರಂಭವಾಗಿದ್ದು, ನ. 15 ರವರೆಗೆ ಪ್ರದರ್ಶನ ಇರಲಿದೆ.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನೃಪತುಂಗ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಶ್ರೀನಿವಾಸ್ ಬಳ್ಳಿ ಹಾಗೂ ಹಿರಿಯ ಕಲಾವಿದರಾಗಿರುವ ಕೇಂದ್ರ ಲಲಿತ ಕಲಾ ಅಕಾಡೆಮಿಯ ಮಾಜಿ ಅಧ್ಯಕ್ಷ ಚಿ.ಸು. ಕೃಷ್ಣಯ್ಯ ಶೆಟ್ಟಿ ಪ್ರದರ್ಶನಕ್ಕೆ ಚಾಲನೆ ನೀಡಿದ್ದಾರೆ.
“ಯುವಕ ಸಂಘವು ಕಲೆ, ಸಂಸ್ಕೃತಿ ಮತ್ತು ಯುವಜನತೆಗೆ ಉತ್ತೇಜಿಸುವ ದೃಷ್ಟಿಯಿಂದ ಬೆಂಗಳೂರು ಆರ್ಟ್ ಗ್ಯಾಲರಿಯಲ್ಲಿ ಈ ತರಹದ ಕಲಾ ಪ್ರದರ್ಶನಗಳನ್ನು ಆಯೋಜಿಸುತ್ತಿದೆ. ಈ ಕಾರ್ಯವು ನಿಜಕ್ಕೂ ಶ್ಲಾಘನೀಯ” ಎಂದು ಪ್ರೊ. ಶ್ರೀನಿವಾಸ ಬಳ್ಳಿ ತಿಳಿಸಿದರು.
“ಕಲಾವಿದರಾದ ಮಹದೇವ ಶೆಟ್ಟಿ, ಮಾಧವಿ ಹಾಗೂ ರಚಿತಾ ಎಂ. ಅವರು ಕರ್ನಾಟಕದ ಕಲೆ ಮತ್ತು ಸಂಸ್ಕೃತಿಯನ್ನು ತಮ್ಮ ಚಿತ್ರಕಲೆಯ ಮೂಲಕ ಜನರಿಗೆ ತೋರಿಸುವ ಕೆಲಸ ಮಾಡಿದ್ದಾರೆ” ಎಂದು ಚಿ.ಸು.ಕೃಷ್ಣಯ್ಯಶೆಟ್ಟಿ ಹೇಳಿದರು.
ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಆತ್ಮಹತ್ಯೆ ಮಾಡ್ಕೊಬೇಕು ಅನ್ನೋ ಯೋಚನೆ ಇದ್ದರೆ ಅದಕ್ಕಿಂತ ಮೊದಲು ಒಮ್ಮೆ ಇದನ್ನು ಓದಿ!