Site icon Vistara News

Pancharatna Rath Yatra : ಹೊಂಬುಜ ಜೈನ ಮಠದ ಜಗನ್ಮಾತೆ ಪದ್ಮಾವತಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ

Pancharatna Rath Yatra Devendra Keerthi Bhattaraka swamiji Hombuja Jain Mutt HDK

#image_title

ರಿಪ್ಪನ್‌ಪೇಟೆ: ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಅವರು
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಸಮೀಪದ ದಕ್ಷಿಣ ಭಾರತದ ಜೈನರ ಪವಿತ್ರ ಯಾತ್ರಾ ಸ್ಥಳವಾದ ಹೊಂಬುಜ ಜೈನ ಮಠಕ್ಕೆ (Hombuja Jain Mutt ) ಶುಕ್ರವಾರ (ಫೆ.೨೪) ಭೇಟಿ ನೀಡಿ ಜಗನ್ಮಾತೆ ಪದ್ಮಾವತಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ದರ್ಶನಾಶೀರ್ವಾದ ಪಡೆದರು.

ನಂತರ ಮಠದ ಜಗದ್ಗುರು ಡಾ. ಶ್ರೀಮದ್‌ ದೇವೇಂದ್ರ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಶ್ರೀಗಳು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಸನ್ಮಾನಿಸಿ ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಎಂ.ಎಲ್.ಸಿ. ಬೋಜೇ ಗೌಡ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎಂ ಶ್ರೀಕಾಂತ್, ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಆರ್.ಎ.ಚಾಬುಸಾಬ್, ತಾಲೂಕು ಜೆಡಿಎಸ್ ಅಧ್ಯಕ್ಷ ಎನ್.ವರ್ತೇಶ್, ತೀರ್ಥಹಳ್ಳಿ ಕ್ಷೇತ್ರದ ಜೆಡಿಎಸ್ ನಿಯೋಜಿತ ಅಭ್ಯರ್ಥಿ ಯಡೂರು ರಾಜಾರಾಮ್‌ ಇನ್ನಿತರರು ಹಾಜರಿದ್ದರು.

ಬಡಜನರ ಬದುಕಿನಲ್ಲಿ ಬದಲಾವಣೆ ತರಲು ರಥಯಾತ್ರೆ

“ಬಡಜನರ ಬದುಕಿನಲ್ಲಿ ಬದಲಾವಣೆ ತರಲು ರಾಜ್ಯದ 28 ಜಿಲ್ಲೆಗಳಲ್ಲಿ ಪಂಚರತ್ನ ರಥ ಯಾತ್ರೆಯ ಮೂಲಕ ಪ್ರವಾಸ ಕೈಗೊಂಡಿದ್ದೇನೆ. ಇತರೆ ಪಕ್ಷಗಳಲ್ಲಿ ನಾಯಕರ ಗುಂಪೇ ಇದೆ. ಆದರೆ ನನ್ನದು ಏಕಾಂಗಿ ಹೋರಾಟ” ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದರು.

ಇದನ್ನೂ ಓದಿ: IND VS AUS: ಮೂರನೇ ಟೆಸ್ಟ್​ ಪಂದ್ಯ ಗೆಲ್ಲಲು ಪಣ ತೊಟ್ಟ ಆಸ್ಟ್ರೇಲಿಯಾ

ರಿಪ್ಪನ್ ಪೇಟೆ ಸಮೀಪದ ಹುಂಚದ ಕಟ್ಟೆ ಗ್ರಾಮದಲ್ಲಿ ಜೆಡಿಎಸ್ ಪಕ್ಷದ ಪಂಚರತ್ನ ರಥಯಾತ್ರೆ ಸಲುವಾಗಿ ಶುಕ್ರವಾರ (ಫೆ.೨೪) ಆಗಮಿಸಿದ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, “ಇದುವರೆಗೆ 74 ಕ್ಷೇತ್ರಗಳಲ್ಲಿ ಸುತ್ತಾಡಿದ್ದು ದಿನಕ್ಕೆ 35 ರಿಂದ 40 ಹಳ್ಳಿಗಳ ಭೇಟಿ ಮಾಡಿ ಜನರ ಸುಖ-ದುಃಖಗಳನ್ನು ಅರಿಯುವ ಪ್ರಯತ್ನ ಮಾಡುತ್ತಿದ್ದೇನೆ. ಎಲ್ಲಾ ರಾಷ್ಟ್ರೀಯ ಪಕ್ಷಗಳು ಜನರಿಗೆ ದುಡ್ಡು ನೀಡಿ ಜನರನ್ನು ಕರೆಸುತ್ತಾರೆ. ಆದರೆ ನಾನು ಜನರು ಇರುವ ಕಡೆಗೆ ನಾನೇ ಹೋಗುತ್ತಿದ್ದೇನೆ. ಜನರ ನಾಡಿ ಮಿಡಿತ ತಿಳಿಯುತ್ತದೆ. ಜೆಡಿಎಸ್ ಬಗ್ಗೆ ಇಡೀ ರಾಜ್ಯಾದ್ಯಂತ ಒಳ್ಳೆಯ ಒಲವಿದೆ. ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಜಯಭೇರಿ ಬಾರಿಸಲಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಖಾತೆ ತೆರೆಯಲಿದೆ” ಎಂದರು.

ಇದನ್ನೂ ಓದಿ: Tamannaah Bhatia: ತಮನ್ನಾಗೆ ನಟ ವಿಜಯ್ ವರ್ಮಾ ಇಟ್ಟ ಮುದ್ದಾದ ನಿಕ್‌ನೇಮ್‌ ಏನು?

ಅಮಿತ್ ಶಾ ಅವರು ದೇವೇಗೌಡರ ಕುಟುಂಬದಲ್ಲಿ ಎಲ್ಲರೂ ರಾಜಕೀಯ ಮಾಡಿದರೆ ಮನೆ ಕೆಲಸ ಮಾಡುವವರು ಯಾರು? ಎಂದಿದ್ದಾರೆ. ಹಾಗಾದರೆ ಅವರ ಪಕ್ಷದ ಯಡಿಯೂರಪ್ಪ ಕುಟುಂಬದಲ್ಲಿ ಎಲ್ಲರೂ ರಾಜಕೀಯ ಮಾಡುವವರೇ ಇದ್ದಾರೆ. ಹಾಗಾದರೆ ಅವರ ಮನೆ ಕೆಲಸ ಮಾಡುವವರು ಯಾರು? ಎಂದು ಕುಟುಕಿದರು.

ಇದನ್ನೂ ಓದಿ: Actress Waheeda Rehman : ವಾವ್ಹ್‌! ಮುಸ್ಲಿಂ ಹುಡುಗಿಯ ಭರತನಾಟ್ಯ? ವಹೀದಾ ನಾಟ್ಯಕ್ಕೆ ಬೆರಗಾಗಿದ್ದ ವೈಸರಾಯ್ ರಾಜಗೋಪಾಲಾಚಾರಿ

“ಮುಂಬರುವ ಚುನಾವಣೆಯಲ್ಲಿ ತೀರ್ಥಹಳ್ಳಿ ವಿಧಾನ ಸಭಾ ಕ್ಷೇತ್ರದ ನಿಯೋಜಿತ ಅಭ್ಯರ್ಥಿ ರಾಜಾರಾಮ್ ಯಡೂರು ಇವರನ್ನು ಅತ್ಯಧಿಕ ಬಹುಮತದಿಂದ ಗೆಲ್ಲಿಸಬೇಕು” ಎಂದು ಈ ಸಂದರ್ಭದಲ್ಲಿ ಸಾರ್ವಜನಿಕರಲ್ಲಿ, ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ಇದನ್ನೂ ಓದಿ: Karnataka Election 2023: ಪ್ರಚಾರಕ್ಕೆ ಹೋಗಿದ್ದ ಎನ್‌.ಆರ್‌. ಸಂತೋಷ್‌ಗೆ ತರಾಟೆ; ಹಲ್ಲೆಗೆ ಮುಂದಾದರೇ ಗ್ರಾಮಸ್ಥರು?

Exit mobile version