Site icon Vistara News

Pancharatna Rath Yatra: ನಾನು ಮುಖ್ಯಮಂತ್ರಿ ಆಗಿ ಬರ್ತೇನೆ, ನಿಮ್ಮೆಲ್ಲ ಕಷ್ಟ ಪರಿಹರಿಸ್ತೇನೆ ಎಂದ ಕುಮಾರಸ್ವಾಮಿ

HD Kumaraswamy Pancharatna Rath Yatra shivamogga

#image_title

ಶಿವಮೊಗ್ಗ: “ಮುಂದಿನ ಮೂರು ತಿಂಗಳು ಮಾತ್ರ ಸುಮ್ಮನಿರಿ. ನಾನೇ ಮುಖ್ಯಮಂತ್ರಿ ಆಗುತ್ತೇನೆ. ಮುಖ್ಯಮಂತ್ರಿ ಆಗಿ ನಿಮ್ಮ ಬವಣೆ ನೀಗಿಸುತ್ತೇನೆʼʼ- ಹೀಗೆಂದು ಭರವಸೆ ನೀಡಿದ್ದಾರೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ.

ಕಳೆದೆರಡು ದಿನಗಳಿಂದ ಶಿವಮೊಗ್ಗದಲ್ಲಿ ಸಂಚರಿಸುತ್ತಿರುವ ಪಂಚರತ್ನ ರಥ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, “ಮತದಾರರ ಬವಣೆ ನೀಗಿಸುವುದೇ ಪಂಚರತ್ನ ಯೋಜನೆಯ ಉದ್ದೇಶ. ಜೆಡಿಎಸ್ ಪಕ್ಷವನ್ನು (JD(S) Party) ಬೆಂಬಲಿಸಿ ನಮ್ಮ ಅಭ್ಯರ್ಥಿಯನ್ನು ಬಹುಮತದಿಂದ ಆಯ್ಕೆ ಮಾಡಿʼʼ ಎಂದು ಮನವಿ ಮಾಡಿದರು. ʻʻಮಹಿಳೆಯರ ಸಂಕಷ್ಟ ದೂರ ಮಾಡಲು ಪಂಚರತ್ನ ಯೋಜನೆ ಜಾರಿ ಮಾಡುತ್ತೇವೆ. ಉಚಿತ ಶಿಕ್ಷಣ ನೀಡುತ್ತೇವೆ” ಎಂದು ಭರವಸೆ ನೀಡಿದರು.

ಇದನ್ನೂ ಓದಿ: Viral Video : ತಪ್ಪು ಟರ್ಮಿನಲ್ ತಲುಪಿ, ಇದಕ್ಕೂ ಮೋದಿ ಕಾರಣ ಎಂದ ನೆಟ್ಟಿಗ! ವೈರಲ್ ಆಯ್ತು ವಿಡಿಯೊ

ಪ್ರಾದೇಶಿಕ ಪಕ್ಷವನ್ನು ಆಡಳಿತಕ್ಕೆ ತರಲೇಬೇಕೆಂಬ ಹಟ ತೊಟ್ಟಿರುವ ದಳಪತಿ ನಾಯಕ ಎಚ್.ಡಿ. ಕುಮಾರಸ್ವಾಮಿ, ಪಂಚರತ್ನ ಯಾತ್ರೆ ಮೂಲಕ ನಾಡಿನ ಉದ್ದಗಲಕ್ಕೂ ಸಂಚಾರ ನಡೆಸಿ, ತಮ್ಮ ಪಕ್ಷದ ಸಾಮರ್ಥ್ಯ ತೋರ್ಪಡಿಸುತ್ತಿದ್ದಾರೆ. ಕಳೆದೆರಡು ದಿನಗಳಿಂದ ಮಲೆನಾಡು ಜಿಲ್ಲೆ ಶಿವಮೊಗ್ಗದಲ್ಲಿ ಸಂಚರಿಸುತ್ತಿರುವ ಪಂಚರತ್ನ ರಥ ಯಾತ್ರೆಗೆ ಭರ್ಜರಿ ಪ್ರತಿಕ್ರಿಯೆ ದೊರೆತಿದೆ.

ಇದನ್ನೂ ಓದಿ: Delhi MCD: ದೆಹಲಿ ಮಹಾನಗರ ಪಾಲಿಕೆಯಲ್ಲಿ ಮತ್ತೆ ಆಪ್​-ಬಿಜೆಪಿ ಮಾರಾಮಾರಿ; ಗುದ್ದಾಡಿ, ತಳ್ಳಾಡಿಕೊಂಡ ಕೌನ್ಸಿಲರ್​​ಗಳು

ಮೊದಲ ದಿನ ಉಕ್ಕಿನ ನಗರಿ ಭದ್ರಾವತಿಯಲ್ಲಿ ಯಾತ್ರೆಯುದ್ದಕ್ಕೂ, ಜನಸಾಗರವೇ ಹರಿದು ಬಂದಿದ್ದರೆ, ಎರಡನೇ ದಿನ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿಯೂ ಅದ್ಧೂರಿ ಸ್ವಾಗತ ಸಿಕ್ಕಿದೆ. ಈ ಪಂಚರತ್ನ ರಥಯಾತ್ರೆಗೆ ದಾರಿಯುದ್ದಕ್ಕೂ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದ್ದು, ಎರಡೂ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳಾದ ಶಾರದಾ ಅಪ್ಪಾಜಿ ಗೌಡ ಮತ್ತು ಶಾರದಾ ಪೂರ್ಯಾ ನಾಯ್ಕ್ ಅವರಲ್ಲಿ ಗೆಲ್ಲುವ ವಿಶ್ವಾಸ ಮೂಡಿದೆ. ಬುಧವಾರ (ಫೆ.೨೨) ಗ್ರಾಮಾಂತರ ಕ್ಷೇತ್ರಕ್ಕೆ ಆಗಮಿಸಿದ ರಥಯಾತ್ರೆಗೆ ಅರೆಬಿಳಚಿ ಕ್ಯಾಂಪ್ ನಲ್ಲಿ ಮಹಾದ್ವಾರ ಮೂಲಕ ಸಾವಿರಾರು ಕಾರ್ಯಕರ್ತರಿಂದ ಅದ್ಧೂರಿ ಸ್ವಾಗತ ದೊರಕಿತು. ನೂರಾರು ಮಹಿಳೆಯರಿಂದ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಅಲ್ಲಲ್ಲಿ ವಿವಿಧ ಬಗೆಯ ಬೃಹತ್ ಹಾರಗಳನ್ನು ಕ್ರೇನ್ ಮೂಲಕ ಹಾಕಿ ಭವ್ಯ ಸ್ವಾಗತ ಕೋರಲಾಯಿತು.

ಇದನ್ನೂ ಓದಿ: ಹೊಸ ಅಂಕಣ: ಪರಿಸರ ಪದ: ಮರಳಿ ಬರುವುದೆ ಊರಿನ ಉಲ್ಲಾಸ?

ರಥಯಾತ್ರೆಯ ಮಾರ್ಗಮಧ್ಯೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ, “ಜೆಡಿಎಸ್ ಮುಖವಾಡ ಕಳಚಿದರೆ ಮೋದಿ ಮುಖ ಕಾಣುತ್ತದೆʼʼ ಎಂಬ ಸುರ್ಜೆವಾಲ ಹೇಳಿಕೆಗೆ ತಿರುಗೇಟು ನೀಡಿದರು. ʻʻಈ ಮಾತು ಹೇಳಲು ಅವರಿಗೆ ನಾಚಿಕೆ ಆಗಬೇಕು. ಅವರಿಗೆ ಮೋದಿ ಮುಖ ಬಿಟ್ಟರೆ ಮತ್ತೇನು ಕಾಣಲು ಸಾಧ್ಯ? ಇಂದು ಕಾಂಗ್ರೆಸ್ ನಾಯಕರಿಗೆ ನಿದ್ದೆಯಲ್ಲೂ ಮೋದಿಯೇ ಕಾಣುತ್ತಾರೆ. ನಾನು ಆಪರೇಷನ್ ಕಮಲದ ಬಳಿಕದ ಮೊದಲ ಚುನಾವಣೆಯಲ್ಲಿ ನಿಮ್ಮ ಪ್ರತಿಪಕ್ಷ ನಾಯಕ ಎಷ್ಟಕ್ಕೆ ಸುಪಾರಿ ಪಡೆದಿದ್ದರು ಎಂಬ ಬಗ್ಗೆ ಸುರ್ಜೆವಾಲ ಬಹಿರಂಗ ಚರ್ಚೆಗೆ ಬರಲಿʼʼ ಎಂದು ಸವಾಲೆಸೆದರು. ಕಾಂಗ್ರೆಸ್ ಬಿಜೆಪಿಯ ಬಿ ಟೀಮೋ ಜೆಡಿಎಸ್ ಬಿ ಟೀಮೋ ಎಂಬ ಬಗ್ಗೆ ಜನ ಮಾತನಾಡಿಕೊಳ್ಳುತ್ತಿದ್ದಾರೆ” ಎಂದರು.

ಇದನ್ನೂ ಓದಿ:Education: ಇನ್ನು ಮಗುವಿಗೆ 6 ವರ್ಷ ಆಗದೆ 1ನೇ ತರಗತಿಗೆ ಸೇರಿಸುವಂತಿಲ್ಲ!

“ಸಚಿವ ಅಶ್ವತ್ಥ ನಾರಾಯಣ ಅವರು ರಾಮನಗರದಲ್ಲಿ ನಡೆದುಕೊಂಡ ರೀತಿ ಸರಿಯಿಲ್ಲ. ಹೋಮ ನಡೆಯುತ್ತಿದ್ದ ಜಾಗಕ್ಕೂ ಹೋಗದೆ ವೇದಿಕೆಯ ಕಾರ್ಯಕ್ರಮ ಉದ್ಘಾಟನೆ ಮಾಡಿದ್ದು ಸರಿಯಲ್ಲ. ವಿಜಯೇಂದ್ರ ಮಂಡ್ಯದಲ್ಲಿ ಮನೆಯನ್ನಾದರೂ ಮಾಡಲಿ. ಅರಮನೆಯನ್ನಾದರೂ ಮಾಡಲಿ ಅಥವಾ ಶಿವಮೊಗ್ಗದಲ್ಲಿ ಕಟ್ಟಿರುವಂತೆ ದೊಡ್ಡ ದೊಡ್ದ ಕಟ್ಟಡವನ್ನಾದರೂ ಕಟ್ಟಲಿ. ಅದರಿಂದ ನಮಗೇನು ತೊಂದರೆ ಇಲ್ಲ. ಸರ್ಕಾರಿ ನೌಕರರಿಂದ ದೊಡ್ದ ದೊಡ್ದ ಸನ್ಮಾನ ಮಾಡಿಸಿಕೊಂಡವರು ಈಗ ಎಲ್ಲಿ ಹೋದರು?” ಎಂದು ಬಿಜೆಪಿ ಮುಖಂಡರನ್ನು ತರಾಟೆಗೆ ತೆಗೆದುಕೊಂಡರು.
ಎಮ್ಮೆಲ್ಸಿ ಭೋಜೇಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್ ಮತ್ತಿತರರು ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಇದನ್ನೂ ಓದಿ: ISSF World Cup: ಶೂಟಿಂಗ್ ವಿಶ್ವಕಪ್‌; ಚಿನ್ನಕ್ಕೆ ಕೊರಳೊಡ್ಡಿದ ಒಲಿಂಪಿಯನ್ ಐಶ್ವರ್ಯ್ ಪ್ರತಾಪ್

Exit mobile version