Site icon Vistara News

Pancharatna Yatre: ಫೆ. 22, 23ರಂದು ಶಿವಮೊಗ್ಗ ಗ್ರಾಮಾಂತರದಲ್ಲಿ ಕುಮಾರಣ್ಣನ ಪಂಚರತ್ನ ರಥಯಾತ್ರೆ

Pancharatna Yatra JDS shivamogga

#image_title

ಶಿವಮೊಗ್ಗ: ಜೆಡಿಎಸ್‌ನ (JDS) ಅಭಿವೃದ್ಧಿ ಕಾರ್ಯಗಳನ್ನು ಪ್ರತಿ ಗ್ರಾಮಕ್ಕೂ ತಲುಪಿಸುವ ಉದ್ದೇಶವನ್ನಿಟ್ಟುಕೊಂಡ ಜೆಡಿಎಸ್ ಪಂಚರತ್ನ ರಥಯಾತ್ರೆ (Pancharatna Yatre) ಶಿವಮೊಗ್ಗಕ್ಕೆ ಫೆ. 22 ಮತ್ತು 23 ರಂದು ಆಗಮಿಸಲಿದೆ.

ಈ ಬಗ್ಗೆ ಮಾಜಿ ಶಾಸಕಿ ಶಾರದಾ ಪೂರ್ಯಾ ನಾಯ್ಕ ವಿವರ ನೀಡಿದ್ದು, “ಈ ಪಂಚರತ್ನ ಯಾತ್ರೆಯ ನೇತೃತ್ವವನ್ನು ಜೆಡಿಎಸ್ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ, ವಿಧಾನ ಪರಿಷತ್ ಸದಸ್ಯ ಭೋಜೇಗೌಡ ವಹಿಸಲಿದ್ದಾರೆ” ಎಂದು ತಿಳಿಸಿದ್ದಾರೆ.

ಇವರ ಜತೆಗೆ ಜಿಲ್ಲೆಯ ಎಲ್ಲ ಜೆಡಿಎಸ್ ಮುಖಂಡರು ಭಾಗವಹಿಸಲಿದ್ದು, ಫೆ. 22ರಂದು ಅರೆಬಿಳಚಿ ಕ್ಯಾಂಪಿನಿಂದ ಪಂಚರತ್ನ ರಥ ಸಾಗಲಿದೆ. ಅಂದು ಹೊಳೆಹೊನ್ನೂರು, ಆನವೇರಿ, ಮಂಗೋಟೆ, ಹೊಳಲೂರು, ಕೊಮ್ಮನಾಳು, ಕುಂಚೇನಹಳ್ಳಿ, ಆಯನೂರು, ಕುಂಸಿ, ಹಾರನಹಳ್ಳಿ ಮೂಲಕ ಸಾಗಿ ಮಲವಗೊಪ್ಪ ತಲುಪುತ್ತದೆ. ಈ ಮಧ್ಯೆ ಭದ್ರಾವತಿಯ ಕನಕ ಮಂಟಪದಲ್ಲಿ ವೇದಿಕೆ ಕಾರ್ಯಕ್ರಮವನ್ನು ಕೂಡ ಆಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಅಲ್ಲಿ ಗ್ರಾಮ ವಾಸ್ತವ್ಯವಿದ್ದು, ಫೆ. 23ರಂದು ಬೆಳಗ್ಗೆ ಸೂಳೇಬೈಲು ವಾರ್ಡಿನಿಂದ ಯಲವಟ್ಟಿ, ಹಸೂಡಿ, ಶೆಟ್ಟಿಹಳ್ಳಿ, ಕಾಟಿಕೆರೆ, ಬಿ.ಬೀರನಹಳ್ಳಿ, ಪಿಳ್ಳಂಗೆರೆ ಮೂಲಕ ಹೊಳೆಬೆನವಳ್ಳಿ ತಲುಪಲಿದೆ. ಮಧ್ಯಾಹ್ನ 2 ರಿಂದ 3 ಗಂಟೆಯವರೆಗೆ ಎಚ್.ಡಿ. ಕುಮಾರಸ್ವಾಮಿ ಅವರು ಮತ್ತೊಮ್ಮೆ ಶಾರದಮ್ಮ ಎಂಬ ಘೋಷಣೆ ಅಡಿ ಬೂತ್ ಮಟ್ಟದ ಕಾರ್ಯಕರ್ತರನ್ನು ಭೇಟಿ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: GST Council Meeting: ಪೆನ್ಸಿಲ್‌ ಶಾರ್ಪ್‌ನರ್‌, ದ್ರವರೂಪದ ಬೆಲ್ಲದ ಜಿಎಸ್‌ಟಿ ಇಳಿಕೆ, ಸಭೆಯ ಪ್ರಮುಖ ತೀರ್ಮಾನ ಯಾವವು?

ಜಿಲ್ಲೆಯಲ್ಲಿ ಈಗ ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಸ್ಪರ್ಧಿಸುವುದು ಖಚಿತವಾಗಿದೆ. ಸೊರಬದಲ್ಲಿ ಅಭ್ಯರ್ಥಿಗಳ ನಡುವೆ ಸ್ವಲ್ಪ ಗೊಂದಲವಿದೆ. ಇನ್ನುಳಿದಂತೆ ಅಭ್ಯರ್ಥಿಗಳಲ್ಲಿ ಯಾವ ಗೊಂದಲವೂ ಇಲ್ಲ. ಶಿವಮೊಗ್ಗ ಕ್ಷೇತ್ರದ ಬಗ್ಗೆ ಇನ್ನೂ ಅಭ್ಯರ್ಥಿಯ ಘೋಷಣೆ ಆಗಿಲ್ಲ. ಜೆಡಿಎಸ್ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್ ಅವರು ಪಂಚರತ್ನ ರಥಯಾತ್ರೆಯ ಸಿದ್ಧತೆಯಲ್ಲಿ ತೊಡಗಿದ್ದಾರೆ ಎಂದು ಗ್ರಾಮಾಂತರ ಮಾಜಿ ಶಾಸಕಿ ಶಾರದಾ ಪೂರ್ಯಾ ನಾಯ್ಕ ತಿಳಿಸಿದ್ದಾರೆ.

Exit mobile version