Site icon Vistara News

Parking Restrictions: ಜರ್ಮನಿ ಚಾನ್ಸಲರ್ ಭೇಟಿ; ಇಂದು (ಫೆ.26) ಬೆಂಗಳೂರಿನ ವಿವಿಧ ರಸ್ತೆಗಳಲ್ಲಿ ವಾಹನ ಪಾರ್ಕಿಂಗ್‌ ನಿಷೇಧ

Parking Restrictions

#image_title

ಬೆಂಗಳೂರು: ಜರ್ಮನಿ ಚಾನ್ಸಲರ್ ಓಲಾಫ್‌ ಶೋಲ್ಸ್ ಅವರು ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಗಣ್ಯರ ಭದ್ರತೆ ಮತ್ತು ಸುಗಮ ಸಂಚಾರದ ಹಿತದೃಷ್ಟಿಯಿಂದ ಫೆ.26ರಂದು ಬೆಳಗ್ಗೆ 11 ಗಂಟೆಯಿಂದ ಸಂಜೆ 6 ಗಂಟೆವರೆಗೆ ನಗರದ ಕೆಲ ಸ್ಥಳಗಳಲ್ಲಿ ವಾಹನ ನಿಲುಗಡೆಗೆ ನಿಷೇಧ ವಿಧಿಸಿ (Parking Restrictions) ಬೆಂಗಳೂರು ಸಂಚಾರ ಪೊಲೀಸ್‌ ವಿಭಾಗ ಸುತ್ತೋಲೆ ಹೊರಡಿಸಿದೆ.

ನಗರದ ಬಳ್ಳಾರಿ ರಸ್ತೆ, ಮೇಖ್ರಿ ಸರ್ಕಲ್‌, ಕಾವೇರಿ ಥಿಯೇಟರ್ ಜಂಕ್ಷನ್, ರಮಣ ಮಹರ್ಷಿ ರಸ್ತೆ, ಇನ್‌ಫೆಂಟ್ರಿ ರಸ್ತೆ, ಕಬ್ಬನ್ ರಸ್ತೆ, ಹಳೆ ವಿಮಾನ ನಿಲ್ದಾಣ ರಸ್ತೆ, ವೈಟ್‌ ಫೀಲ್ಡ್ ಮುಖ್ಯ ರಸ್ತೆ, ಎಚ್.ಎ.ಎಲ್. ನಿಂದ ಕೆ.ಆರ್. ಪುರದವರೆಗೆ ಹೊರವರ್ತುಲ ರಸ್ತೆ, ದೊಡ್ಡನೆಕ್ಕುಂದಿ ರಸ್ತೆ, ಗ್ರಾಫೈಟ್ ಇಂಡಿಯಾ ರಸ್ತೆ, ಕ್ವೀನ್ಸ್ ರಸ್ತೆ, ರಾಜಭವನ ರಸ್ತೆ, ಎಂ.ಜಿ ರಸ್ತೆ, ಇಂದಿರಾನಗರ 100 ಅಡಿ ರಸ್ತೆ ಹಾಗೂ ಹಳೆ ಮದ್ರಾಸ್ ರಸ್ತೆಯಲ್ಲಿ ವಾಹನಗಳ ಪಾರ್ಕಿಂಗ್‌ಗೆ ಅವಕಾಶವಿರುವುದಿಲ್ಲ ಎಂದು ಬೆಂಗಳೂರು ಸಂಚಾರ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ | EPFO Guidelines: ಅಧಿಕ ಪಿಂಚಣಿಗೆ ಜಂಟಿ ಅರ್ಜಿ, ಆನ್‌ಲೈನ್‌ ವ್ಯವಸ್ಥೆ ಶೀಘ್ರ

Exit mobile version