ತುಮಕೂರು: ಮನೆಯಲ್ಲಿ ಮುದ್ದಾಗಿ ಗಿಳಿಯೊಂದು ಕಾಣೆಯಾಗಿದ್ದು, ಈಗ ಆ ಗಿಳಿಯನ್ನು ಹುಡುಕಿಕೊಡುವಂತೆ ಕುಟುಂಬಸ್ಥರು ಸಾರ್ವಜನಿಕವಾಗಿ ಮೊರೆಯಿಟ್ಟಿದ್ದಾರೆ. ಕಳೆದ ಎರಡೂವರೆ ವರ್ಷದಿಂದ ಗಿಳಿಯನ್ನು ಸಾಕಿದ್ದು, ಮನೆಯ ಸದಸ್ಯರಲ್ಲಿ ಅದೂ ಒಂದು ಎಂದು ನೋಡಿಕೊಂಡಿದ್ದರು. ಆದರೆ, ಈಗ ಏಕಾಏಕಿ ಗಿಳಿ ಕಾಣೆಯಾಗಿದ್ದು, ಹುಡುಕಿ ಕೊಟ್ಟವರಿಗೆ 50 ಸಾವಿರ ರೂಪಾಯಿ ಬಹುಮಾನವನ್ನು ಘೋಷಣೆ ಮಾಡಲಾಗಿದೆ.
ತುಮಕೂರಿನ ಜಯನಗರದ ನಿವಾಸಿ ರವಿ ಎಂಬುವವರ ಕುಟುಂಬವೇ ಈಗ ಗಿಳಿಯನ್ನು ಹುಡುಕಿ ಕೊಡುವಂತೆ ಸಾರ್ವಜನಿಕವಾಗಿ ಮನವಿ ಮಾಡಿದ್ದು, ಎಲ್ಲೆಡೆ ಬ್ಯಾನರ್ ಮತ್ತು ಫೋಟೋಗಳನ್ನು ಹರಿಬಿಟ್ಟಿದ್ದಾರೆ. ಆಫ್ರಿಕನ್ ಗ್ರೇ ಜಾತಿಯ ಗಿಳಿಯು ಕಳೆದ ಜುಲೈ 16ರಂದು ಮನೆಯಿಂದ ನಾಪತ್ತೆಯಾಗಿದ್ದು, ಪ್ರೀತಿಯ ಗಿಳಿಗೆ ರುಸ್ತುಮಾ ಎಂಬ ಹೆಸರಿಟ್ಟಿದ್ದರು. ಆಫ್ರಿಕನ್ ಗ್ರೇ ತಳಿಯ ಎರಡು ಗಿಳಿಗಳನ್ನು ಮನೆಯಲ್ಲಿ ಸಾಕಿದ್ದು ಅದರಲ್ಲಿ ರುಸ್ತುಮಾ ನಾಪತ್ತೆಯಾಗಿದೆ.
ಇತ್ತ ಕಾಣೆಯಾಗಿರುವ ಗಿಳಿಗಾಗಿ ಹಗಲು ರಾತ್ರಿ ಎನ್ನದೇ ರವಿ ಕುಟುಂಬ ಹುಡುಕಾಟ ನಡೆಸುತ್ತಿದೆ. ಆದರೆ, ಇನ್ನೂ ಸಿಗದ ಹಿನ್ನೆಲೆಯಲ್ಲಿ ಗಿಳಿ ಕಾಣಿಸಿದರೆ ಮಾಹಿತಿ ನೀಡುವಂತೆ ತುಮಕೂರು ನಗರದಲ್ಲಿ ಬ್ಯಾನರ್ ಹಾಕಿದ್ದಾರೆ. ಜತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಗಿಳಿ ಕಾಣೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಗಿಳಿಯನ್ನು ಹುಡುಕಿ ಕೊಟ್ಟರೆ ತಕ್ಷಣವೇ 50 ಸಾವಿರ ರೂಪಾಯಿ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿ | Video: ʼಮಮ್ಮೀ ಬಾʼ ಎಂದು ಮುದ್ದಾಗಿ ಕೂಗುವ ಕೆಂಪು ಗಿಳಿ; ವಿಡಿಯೋ ನೋಡಿ ನೆಟ್ಟಿಗರು ಖುಷ್