ತುಮಕೂರು: ಶಿವಮೊಗ್ಗದಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದವರಿಗೆ ರೈಲ್ವೆ ಇಲಾಖೆ ಶಾಕ್ ಕೊಟ್ಟಿದೆ. ಬೆಂಗಳೂರಿಗೆ ಬರಬೇಕಿದ್ದ ರೈಲು ತುಮಕೂರಿನಲ್ಲಿಯೇ ದಿಢೀರ್ ನಿಂತಿದ್ದರಿಂದ ಪ್ರಯಾಣಿಕರು ಕಂಗಾಲಾದರು. ತಾಳಗುಪ್ಪದಿಂದ ಬೆಂಗಳೂರಿಗೆ ಬರುತ್ತಿದ್ದ ಎಕ್ಸ್‌ಪ್ರೆಸ್ ರೈಲು (Talaguppa Express Train) ಸಂಚಾರವು ಸ್ಥಗಿತಗೊಂಡಿದೆ.
ತುಮಕೂರಿನ ಸಿದ್ದಗಂಗಾ ಮಠದ ಬಳಿ ರೈಲ್ವೆ ಹಳಿ ದುರಸ್ತಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು- ತುಮಕೂರು ನಡುವಿನ ರೈಲು ಸಂಚಾರವು ಸ್ಥಗಿತಗೊಂಡಿದೆ. ಮಂಗಳವಾರ ಬೆಳಗ್ಗೆಯಿಂದ ಒಟ್ಟು 19 ರೈಲುಗಳ ಸಂಚಾರವು ಬಂದ್ ಆಗಿದೆ. ತಾಳಗುಪ್ಪದಿಂದ ಬೆಂಗಳೂರಿಗೆ ಹೋಗುತ್ತಿದ್ದ ಎಕ್ಸ್‌ಪ್ರೆಸ್ ರೈಲು 10.20ಕ್ಕೆ ತುಮಕೂರು ತಲುಪಿದೆ. ಆದರೆ ಪ್ರಯಾಣಿಕರಿಗೆ ಯಾವುದೇ ಮಾಹಿತಿ ನೀಡದೆ ಏಕಾಏಕಿ ಸಂಚಾರವನ್ನು ಸ್ಥಗಿತಗೊಳಿಸಿದೆ ಎಂಬ ಆರೋಪ ಕೇಳಿಬಂದಿದೆ.
ಇದನ್ನೂ ಓದಿ: Accident News: ರಿಪೇರಿ ಮಾಡುತ್ತಿದ್ದಾಗ ಏಕಾಏಕಿ ಕುಸಿದ ಟಿಪ್ಪರ್ ಲಾರಿ; ಸ್ಥಳದಲ್ಲೇ ಪ್ರಾಣ ಬಿಟ್ಟ ಚಾಲಕ
ಕಾಲ್ಕಿತ್ತ ರೈಲ್ವೆ ಸಿಬ್ಬಂದಿ
ಗಂಟೆಗಟ್ಟಲೇ ಕಾದು ಕಾದು ಹೈರಾಣಾದ ಪ್ರಯಾಣಿಕರು, ಟಿಕೆಟ್ ಹಣವೂ ಇಲ್ಲದೇ, ಇತ್ತ ಬೆಂಗಳೂರಿಗೆ ಹೋಗಲೂ ಆಗದೇ ಪರದಾಡಿದ್ದಾರೆ. ಪ್ರಯಾಣಿಕರ ಪ್ರಶ್ನೆಗೆ ಉತ್ತರ ನೀಡಲಾಗದೆ ಟಿಕೆಟ್ ಕೌಂಟರ್‌ನಿಂದಲೇ ಸಿಬ್ಬಂದಿ ಕಾಲ್ಕಿತ್ತಿದ್ದಾರೆ.
ಈ ರೈಲುಗಳ ಓಡಾಡದಲ್ಲಿ ಸಮಯ ಬದಲಾವಣೆ
ಮೇ 27 ರಿಂದ ಜಾರಿಗೆ ಬರುವಂತೆ ಸೊಲ್ಲಾಪುರ-ಮೈಸೂರು ಗೋಲ್ ಗುಂಬಜ್ ಎಕ್ಸ್‌ಪ್ರೆಸ್, ವಿಜಯಪುರ-ಯಶವಂತಪುರ ಎಕ್ಸ್‌ಪ್ರೆಸ್ ಮತ್ತು ಕಾರಟಗಿ-ಯಶವಂತಪುರ ಎಕ್ಸ್‌ಪ್ರೆಸ್ ರೈಲುಗಳ ಕೆಲವು ನಿಲ್ದಾಣಗಳಲ್ಲಿನ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಲು ನಿರ್ಧರಿಸಲಾಗಿದೆ.
ಪರಿಷ್ಕೃತ ಸಮಯದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ರೈಲ್ವೆ ಇಲಾಖೆಯ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಈ ಲಿಂಕ್ ಕ್ಲಿಕ್ ಮಾಡಿ ಅಥವಾ www.enquiry.indianrail.gov.in ಗೆ ಭೇಟಿ ನೀಡಿ ಇಲ್ಲವೇ 139 ನಂಬರಿಗೆ ಕರೆ ಮಾಡಿ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬಹುದು. ಪ್ರಯಾಣಿಕರು ದೂರದ ನಗರಗಳಿಗೆ ಪ್ರಯಾಣಿಸುವ ಮೊದಲು ಪರಿಷ್ಕೃತ ವೇಳಾಪಟ್ಟಿಯನ್ನು ಪರಿಶೀಲಿಸಿ ಪ್ರಯಾಣಿಸಲು ಕೋರಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ