Site icon Vistara News

Pejavara seer : ರಾಮ ಮಂದಿರ ಆಯ್ತು, ಇನ್ನು ರಾಮರಾಜ್ಯ ನಿರ್ಮಾಣ ಎಂದ ಪೇಜಾವರ ಶ್ರೀ

Pejavara seer

ಉಡುಪಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ (Ayodhya Sri Rama Mandir) ಸಂಕಲ್ಪ ಈಡೇರಿದೆ. ಇನ್ನು ದೇಶವನ್ನು ರಾಮರಾಜ್ಯ (Ramarajya) ಸ್ಥಾಪನೆಯ ಕೆಲಸ ಮುಂದೆ ಸಾಗಬೇಕಾಗಿದೆ ಎಂದು ಪೇಜಾವರ ಮಠಾಧೀಶರಾದ (Pejavara seer) ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹೇಳಿದರು.

ಅವರು ಉಡುಪಿಯ ಯಕ್ಷಗಾನ ಕಲಾರಂಗದ (Yakshagana Kalaranga) ವಿದ್ಯಾಪೋಷಕ್ ವಿದ್ಯಾರ್ಥಿ ಜಂಬೂರಿನ ನಾಗರಾಜ ಎಂಬವರಿಗಾಗಿ ಕಲಾರಂಗವು ದಾನಿಗಳ ನೆರವಿನಿಂದ ನಿರ್ಮಿಸಿದ ಮನೆಯನ್ನು ಹಸ್ತಾಂತರಿಸಿ (House Handover) ಮಾತನಾಡಿದರು.

ಮನೆಯ ಪ್ರವೇಶದ ಸಂದರ್ಭ ಅನುಗ್ರಹ ಸಂದೇಶ ನೀಡಿದ ಅವರು, ಸಮಾಜದಲ್ಲಿ ಉಳ್ಳವರು ಇಲ್ಲದವರಿಗೆ ಸಹಾಯ ಮಾಡಿದರೆ ರಾಮರಾಜ್ಯದ ಕನಸು ನನಸಾಗುತ್ತದೆ ಎಂದರು. ಸಾಕಷ್ಟು ಜನ ಧನಿಕರಿದ್ದಾರೆ. ಅವರ ಸಂಪತ್ತು ಬಡವರಿಗೆ ಸಿಗಬೇಕಾದರೆ ಯಕ್ಷಗಾನ ಕಲಾರಂಗದಂತಹ ವಿಶ್ವಾಸಾರ್ಹ ಸಂಘಟನೆಯ ಅಗತ್ಯವಿದೆ ಎಂದು ಅಭಿಪ್ರಾಯ ಪಟ್ಟರು.

ಮನೆಯ ಸಹಪ್ರಾಯೋಜಕರಾದ ಗುರುರಾಜ್ ಅಮೀನ್ ಮತ್ತು ಜಯಲಕ್ಷ್ಮೀ ಜಿ. ಅಮೀನರಿಗೆ ಸ್ವಾಮೀಜಿಯವರು ಅನುಗ್ರಹ ಮಂತ್ರಾಕ್ಷತೆ ನೀಡಿ ಹರಸಿದರು.

ಅಭ್ಯಾಗತರಾಗಿ ಕೆ. ಸದಾಶಿವ ಭಟ್, ಯು. ರಾಜಗೋಪಾಲ ಅಚಾರ್ಯ, ಬಿಲ್ಲಾಡಿ ಸೀತಾರಾಮ್ ಶೆಟ್ಟಿ, ಸಜಿತ್ ಹೆಗ್ಡೆ ಭಾಗವಹಿಸಿದ್ದರು. ಸಂಸ್ಥೆಯ ಸದಸ್ಯರಾದ ಭುವನಪ್ರಸಾದ್ ಹೆಗ್ಡೆ, ವಿದ್ಯಾಪ್ರಸಾದ್, ಕಿಶೋರ್ ಸಿ. ಉದ್ಯಾವರ, ಅಜಿತ್ ಕುಮಾರ್, ಗಣೇಶ್ ಬ್ರಹ್ಮಾವರ, ರಾಜೀವಿ ಉಪಸ್ಥಿತರಿದ್ದರು.

ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಎಚ್. ಎನ್. ಶೃಂಗೇಶ್ವರ್ ಸಹಕರಿಸಿದರು, ನಾರಾಯಣ ಎಂ. ಹೆಗಡೆ ವಂದಿಸಿದರು. ಇದು ಸಂಸ್ಥೆ ದಾನಿಗಳ ನೆರವಿನಿಂದ ನಿರ್ಮಿಸಿದ 42ನೆಯ ಮನೆಯಾಗಿದೆ.

ಇದನ್ನೂ ಓದಿ: ಪೇಜಾವರ ಶ್ರೀ: ಮರ ಏರಿದ ಸ್ವಾಮೀಜಿ ಫೋಟೋಗಳು ಇದೀಗ ವೈರಲ್‌!

Exit mobile version