ಉಡುಪಿ: ತುಲಾಭಾರದ ವೇಳೆ ತಕ್ಕಡಿ ಕಳಚಿ ಬಿದ್ದು ಪೇಜಾವರ ಶ್ರೀಗಳಿಗೆ (Pejawar Seer) ಗಾಯವಾಗಿರುವ ಘಟನೆ ನಡೆದಿದೆ. ಚಾತುರ್ಮಾಸ್ಯ ಪೂರ್ಣಗೊಳಿಸಿ ಬಂದ ಹಿನ್ನೆಲೆಯಲ್ಲಿ ದೆಹಲಿಯ ಪೇಜಾವರ ಮಠದಲ್ಲಿ ಭಕ್ತರು ಸ್ವಾಮೀಜಿಗೆ ತುಲಾಭಾರ ನಡೆಸುತ್ತಿದ್ದಾಗ ಹಗ್ಗ ತುಂಡಾಗಿ ತಕ್ಕಡಿ ಬಿದ್ದಿದೆ. ಆದರೆ, ಶ್ರೀಗಳಿಗೆ ಯಾವುದೇ ಗಂಭೀರ ಗಾಯವಾಗಿಲ್ಲ ಎಂದು ಮಠದ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ದೆಹಲಿ ಪ್ರವಾಸದಲ್ಲಿದ್ದಾರೆ. ದೆಹಲಿಯ ಪೇಜಾವರ ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಆಯೋಜಿಸಿದ್ದ ಪ್ರಸನ್ನಾಭಿನಂದನಂ ಕಾರ್ಯಕ್ರಮದಲ್ಲಿ ಘಟನೆ ನಡೆದಿದೆ. ಸ್ವಾಮೀಜಿಯ ತಲೆಗೆ ತರಚಿದ ಗಾಯವಾಗಿದ್ದು, ಎರಡು ದಿನದ ಹಿಂದೆ ಘಟನೆ ನಡೆದಿದೆ. ಶ್ರೀಗಳು ಆರೋಗ್ಯವಾಗಿದ್ದು, ಘಟನೆ ಬಳಿಕ ಅವರು ಏಳೆಂಟು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಶುಕ್ರವಾರ ಮುತ್ತಿನ ಹರಳಿನ ತುಲಾಭಾರ ನಡೆದಿದೆ ಎಂದು ಮಠದ ಮೂಲಗಳು ತಿಳಿಸಿವೆ.
ಈ ಬಗ್ಗೆ ದೆಹಲಿಯಲ್ಲಿ ಪೇಜಾವರ ಶ್ರೀಗಳು ಪ್ರತಿಕ್ರಿಯಿಸಿ, ತುಲಾಭಾರ ಕಾರ್ಯಕ್ರಮದಲ್ಲಿ ತಕ್ಕಡಿ ಕಳಚಿ ಬಿದ್ದಿದೆ. ಎರಡು ದಿನದಲ್ಲಿ ಗಾಯ ಪೂರ್ಣ ಮಾಸಿಹೋಗಿದೆ. ದೊಡ್ಡ ಗಾಯ ಏನೂ ಆಗಿಲ್ಲ, ನಾನು ಆರಾಮವಾಗಿದ್ದೇನೆ. ಯಾರೂ ಆತಂಕಕ್ಕೆ ಒಳಗಾಗಬೇಕಾಗಿಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | Road Accident : ತುಮಕೂರು ಬಳಿ ಬಸ್ – ಕಾರು ನಡುವೆ ಅಪಘಾತ; ಇಬ್ಬರ ಸಾವು
ಕೊಟ್ಟ ಹಣ ವಾಪಸ್ ಪಡೆಯಲು ಹೋಗಿ ಜೈಲುಪಾಲಾದ ಯುವಕರು!
ಬೆಂಗಳೂರು: ಹಣ ವಾಪಸ್ ಕೊಟ್ಟಿಲ್ಲವೆಂದು ಸಿಟ್ಟಿಗೆದ್ದ ಯುವಕರ ಗುಂಪುವೊಂದು ಸಿನಿಮೀಯ ರೀತಿಯಲ್ಲಿ ಬೆಸ್ಕಾಂನಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಅಪಹರಿಸಿದ್ದರು. ಇದೀಗ ಅಪಹರಿಸಿದ (Kidnap Case) ಒಂದೇ ದಿನದಲ್ಲಿ ವ್ಯಕ್ತಿಯನ್ನು ರಕ್ಷಣೆ ಮಾಡಿ, ಆರೋಪಿಗಳನ್ನು ಪೀಣ್ಯಾ ಪೊಲೀಸರು ಬಂಧಿಸಿದ್ದಾರೆ.
ಲೋಹಿತ್ ಗೌಡ, ವೆಂಕಟೇಶ್, ರವಿ, ರಮೇಶ್, ಭರತ್ ಸೇರಿದಂತೆ ಹತ್ತು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳ ಬಂಧನದ ಬಳಿಕ ಹಣಕಾಸಿನ ವಿಚಾರಕ್ಕೆ ಈ ಕೃತ್ಯ ಎಸಗಿದ್ದರು ಎಂದು ಬೆಳಕಿಗೆ ಬಂದಿದೆ.
ಗುತ್ತಿಗೆ ಆಧಾರದ ಮೇಲೆ ಪ್ರವೀಣ್ ಎಂಬಾತ ಬೆಸ್ಕಾಂನಲ್ಲಿ ಕೆಲಸ ಮಾಡುತ್ತಿದ್ದ. ಹೀಗಾಗಿ ಬೆಸ್ಕಾಂನಲ್ಲಿ ಕೆಲಸ ಕೊಡಿಸುವುದಾಗಿ ಸಾಕಷ್ಟು ಜನರಿಗೆ ಪ್ರವೀಣ್ ವಂಚನೆ ಮಾಡಿದ್ದ ಎನ್ನಲಾಗಿದೆ. ಬೆಸ್ಕಾಂ ಅಧಿಕಾರಿ ಪರಿಚಯವಿದ್ದಾರೆ ಎಂದು ಲಕ್ಷಾಂತರ ಹಣ ಪಡೆದು ವಂಚಿಸುತ್ತಿದ್ದ.
ಈ ಸಂಬಂಧ ವಂಚನೆಗೊಳಗಾದವರು ಹೈಗೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದರು. ಹೀಗಿರುವಾಗ ಕಳೆದ ಅ.30ರ ಸಂಜೆ ಮಾತುಕತೆಗೆಂದು ಪ್ರವೀಣ್‌ನನ್ನು ಕರೆಸಿಕೊಂಡಿದ್ದಾರೆ. ಹಣ ವಾಪಸ್ ಕೊಡುವಂತೆ ಪರಿಪರಿಯಾಗಿ ಕೇಳಿದ್ದಾರೆ. ಆದರೆ ಇದಕ್ಕೆ ಪ್ರವೀಣ್ ಕ್ಯಾರೆ ಎನ್ನದೇ ಇದ್ದಾಗ ಸಿಟ್ಟಿಗೆದ್ದ ಯುವಕರ ಗುಂಪು ಹಲ್ಲೆ ನಡೆಸಿದ್ದಾರೆ.
ಇದನ್ನೂ ಓದಿ: Dowry Case: ಡೈರಿ ರಿಚ್ ಐಸ್‌ಕ್ರೀಮ್ ಮಾಲಿಕರ ಪತ್ನಿ ಆತ್ಮಹತ್ಯೆ ಮಾಡಿಕೊಂಡದ್ದೇಕೆ? ಡೆತ್‌ನೋಟ್ ಹೊರಗೆಡಹಿದ ರಹಸ್ಯ
ನವಯುಗ ಟೋಲ್ ಬಳಿ ಪ್ರವೀಣ್ ಮೇಲೆ ಹಲ್ಲೆ ನಡೆಸಿ ಕಿಡ್ನ್ಯಾಪ್ ಮಾಡಿದ್ದಾರೆ. ಬಳಿಕ ಮಡಿಕೇರಿಯ ಹೋಮ್ ಸ್ಟೇಯಲ್ಲಿ ಇರಿಸಿಕೊಂಡಿದ್ದರು. ಸದ್ಯ ಪೀಣ್ಯಾ ಪೊಲೀಸರು ಪ್ರವೀಣ್‌ನನ್ನು ರಕ್ಷಣೆ ಮಾಡಿ, ಅಪಹರಿಸಿದ ಹತ್ತು ಮಂದಿಯನ್ನು ಬಂಧಿಸಿ ತನಿಖೆಯನ್ನು ಮುಂದುವರಿಸಿದ್ದಾರೆ.