Site icon Vistara News

Gold Coins: ಹೆದ್ದಾರಿ ಪಕ್ಕ ಚಿನ್ನದ ನಾಣ್ಯಗಳಿಗಾಗಿ ಮುಗಿಬಿದ್ದ ಜನ

Gold Coins

ಚಿತ್ರದುರ್ಗ: ಬಂಗಾರ ಸಿಗುತ್ತದೆ ಎಂಬ ವದಂತಿ ಹರಡಿದ ಹಿನ್ನೆಲೆಯಲ್ಲಿ ಹೆದ್ದಾರಿ ಪಕ್ಕದಲ್ಲಿ ನೂರಾರು ಜನರು ಚಿನ್ನದ ನಾಣ್ಯಗಳಿಗಾಗಿ (Gold Coins) ಹುಡುಕಾಟ ನಡೆಸುತ್ತಿರುವ ಘಟನೆ ಮೊಳಕಾಲ್ಮೂರು ಸಮೀಪದ ಕೆಳಗಳಹಟ್ಟಿ ಬಳಿ ಕಂಡುಬಂದಿದೆ.

ಯಾರೋ ಬಂಗಾರದ ನಾಣ್ಯ ಎಸೆದು ಹೋಗಿದ್ದಾರೆ ಎಂದು ಕೆಲವರು ಹೇಳಿದ್ದಾರೆ. ಇದನ್ನು ನಂಬಿದ ಜನರು ಚಿನ್ನದ ನಾಣ್ಯಗಳಿಗಾಗಿ ಗುಂಪು ಗುಂಪಾಗಿ ಹೋಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಬೆಳಗ್ಗೆಯಿಂದ ಊಟ, ನೀರು ಬಿಟ್ಟು ಬಂಗಾರಕ್ಕಾಗಿ ಹುಡುಕುತ್ತಿದ್ದಾರೆ.

ಬಂಗಾರದ ಚಿಕ್ಕ ಚಿಕ್ಕ ನಾಣ್ಯಗಳು ದೊರೆತಿರುವುದಾಗಿ ಕೆಲವರು ಫೋಟೊ, ವಿಡಿಯೊ ವೈರಲ್‌ ಮಾಡಿದ್ದಾರೆ. ಯಾರೋ ಆ ಸ್ಥಳದಲ್ಲಿ ಚಿನ್ನದ ನಾಣ್ಯ ಎಸೆದು ಹೋಗಿದ್ದಾರೆ ಎಂದು ಹೇಳಿರುವುದರಿಂದ ಜನರು ಹುಡುಕಾಟ ನಡೆಸುತ್ತಿದ್ದಾರೆ. ಮತ್ತೊಂದೆಡೆ ಅವು ನಕಲಿ ಬಂಗಾರದ ನಾಣ್ಯಗಳು ಎಂದು ಹೇಳಲಾಗುತ್ತಿದೆ.

ಆನೇಕಲ್‌ನಲ್ಲಿ ಸುರಿದಿತ್ತು ಚಿನ್ನದ ಮಳೆ?

ಈ ಹಿಂದೆ ಆನೇಕಲ್‌ ಸಮೀಪ ಚಿನ್ನದ ಮಳೆ ಸುರಿದಿದೆ ಎಂಬ ಸುದ್ದಿ ಹರಿದಾಡಿತ್ತು. ಹೀಗಾಗಿ ಚಿನ್ನವನ್ನು ಹೆಕ್ಕಲು ಜನರು ಮುಗಿಬಿದ್ದದ್ದು ಕಂಡುಬಂದಿತ್ತು. ಚಿನ್ನದ ಮಳೆ ಸುರಿದು ನಾಣ್ಯಗಳು ದೊರಕಿವೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿತ್ತು. ನಂತರ ತಮಿಳುನಾಡಿನ ಧರ್ಮಪುರಿ ಜಿಲ್ಲಾಡಳಿತ, ನಾಣ್ಯಗಳ ನೈಜತೆ ಪರಿಶೀಲಿಸಲು ಪ್ರಯೋಗಾಲಯಕ್ಕೆ ಕಳುಹಿಸಿತ್ತು. ಆಗ ಪತ್ತೆಯಾದ ನಾಣ್ಯಗಳನ್ನು ಸ್ಥಳೀಯ ಅಕ್ಕಸಾಲಿಗರ ಬಳಿ ಪರಿಶೀಲನೆಗೆ ಒಳಪಡಿಸಿದಾಗ ಅವು ನಕಲಿ ಚಿನ್ನದ ನಾಣ್ಯಗಳು ಎಂದು ತಿಳಿದುಬಂದಿತ್ತು.

ಇದನ್ನೂ ಓದಿ | Murder Case : ಎಣ್ಣೆ ಪಾರ್ಟಿ ತಾರಕಕ್ಕೆ ಏರಿದ ಜಗಳ; ಸ್ನೇಹಿತನನ್ನೇ ಇರಿದು ಕೊಂದ ಧೂರ್ತ

ಆಂಧ್ರ ಪ್ರದೇಶ ಗಡಿ ಮತ್ತು ತಮಿಳುನಾಡು ಗಡಿಯಲ್ಲಿ ನಕಲಿ ಚಿನ್ನ ಮಾರಾಟ ದಂಧೆಕೋರರು ಸಕ್ರಿಯವಾಗಿದ್ದಾರೆ. ಅವರು ಜನಸಾಮಾನ್ಯರನ್ನು ವಂಚಿಸಲು ಇಂತಹ ಚಿನ್ನ ಲೇಪಿತ ನಾಣ್ಯಗಳನ್ನು ತೋರಿಸಿ ವಂಚಿಸುತ್ತಾರೆ. ತಮಗೆ ನಿಧಿ ರೂಪದಲ್ಲಿ ಚಿನ್ನದ ನಾಣ್ಯಗಳು ದೊರೆತಿವೆ ಎಂದು ವಂಚಿಸಿರುವ ಪ್ರಕರಣಗಳು ಸಹ ವಿವಿಧೆಡೆ ಸಾಕಷ್ಟು ನಡೆದಿವೆ.

Exit mobile version