ಹಂಪಿ: ವಿಜಯನಗರ ವಿಶ್ವವಿಖ್ಯಾತ ಹಂಪಿ ಉತ್ಸವದ (Hampi Utsav 2023) ಸಮಾರೋಪ ಸಮಾರಂಭದಲ್ಲಿ ವಿಜಯ್ ಪ್ರಕಾಶ್ ಅವರ ಗಾನಲಹರಿಗೆ ಸಭಿಕರು ತಲೆದೂಗಿದರು. ಹಂಪಿಯ ಪ್ರಧಾನ ವೇದಿಕೆ ಗಾಯಿತ್ರಿ ಪೀಠದಲ್ಲಿ ಭಾನುವಾರ ಸಂಜೆ ವಿಜಯ್ ಪ್ರಕಾಶ್ ಅವರ ತಂಡ ವಿಶೇಷ ಸಂಗೀತ ರಸಮಂಜರಿ ಹಮ್ಮಿಕೊಳ್ಳಲಾಗಿತ್ತು. ಗಾಯಕಿ ಅನುರಾಧಾ ಭಟ್ ಅವರು ‘ಕೇಳಿಸದೆ ಕಲ್ಲು ಕಲ್ಲಿನಲಿ’ ಹಾಡು ಹಾಡುವ ಮೂಲಕ ಶುಭಾರಂಭ ಮಾಡಿದರು.
ಇದಾದ ನಂತರ ಚೌಕ ಚಿತ್ರದ ‘ಅಪ್ಪಾ ಐ ಲವ್ ಯೂ ಪಾ’ ಹಾಡಿನ ಮೂಲಕ ಎಲ್ಲರನ್ನು ಭಾವಲಹರಿಗೆ ಕೊಂಡೊಯ್ದರು. ನಂತರ ಜೈ ಹೋ ಹಾಡಿನ ಮೂಲಕ ಆಗಮಿಸಿದ ವಿಜಯ್ ಪ್ರಕಾಶ್, ರಾಜಕುಮಾರ ಚಿತ್ರದ ‘ಬೊಂಬೆ ಹೇಳುತೈತೇ’ ಹಾಡಿನ ಮೂಲಕ ರಸಮಂಜರಿ ಆರಂಭಿಸಿದರು. ಬಳಿಕ ಕಾಣದಂತೆ ಮಾಯವಾದನು ಹಾಡಿನ ಮೂಲಕ ಎಲ್ಲರೂ ಹುಚ್ಚೆದ್ದು ಕುಣಿಯುವಂತೆ ಮಾಡಿತು.
ನಂತರ ‘ಬೆಳಗೆದ್ದು ಯಾರ ಮುಖವ’ ಹಾಡನ್ನು ಪ್ರೇಕ್ಷಕರು ಕೂಡಲು ಹಾಡಲು ಪ್ರೇರೇಪಿಸಿ ತಾವು ಹಾಡಿದರು.
ಹಾಡು ಕುಣಿಯುವಂತೆ ಮಾಡಿತು. ನಂತರ ಕಾಂತಾರ ಚಿತ್ರದ ‘ಸಿಂಗಾರ ಸಿರಿಯೇ’ ಹಾಡನ್ನು ಅನುರಾಧಾ ಭಟ್ ಜತೆಗೂಡಿ ಹಾಡುವ ಮೂಲಕ ಪ್ರೇಕ್ಷಕರಿಗೆ ಮುದನೀಡಿದರು. ಆ ಮೂಲಕ ಮೂರು ದಿನಗಳ ಉತ್ಸವವು ಸಮಾರೋಪವಾಗಲು ಕಾರಣರಾದರು.
ಇದನ್ನೂ ಓದಿ: Hampi Utsav 2023: ಮೂರು ದಿನಗಳ ಹಂಪಿ ಉತ್ಸವಕ್ಕೆ ಸಂಭ್ರಮದ ತೆರೆ; ಸಾಂಸ್ಕೃತಿಕ ರಸದೌತಣ ಉಣಬಡಿಸಿದ ಉತ್ಸವ