Site icon Vistara News

PhD Research: ಹಿರಿಯ ಪತ್ರಕರ್ತ ಡಾ. ಮಹೇಶ ವಾಳ್ವೇಕರ್‌ಗೆ ಕ.ವಿ.ವಿಯಿಂದ ಪಿಎಚ್.ಡಿ ಪದವಿ ಪ್ರದಾನ

Senior journalist Dr. Mahesh Walvekar awarded Ph.D. degree by Karnataka University, Dharwad

Senior journalist Dr. Mahesh Walvekar awarded Ph.D. degree by Karnataka University, Dharwad

ಬೆಂಗಳೂರು: ಕಳೆದ ಎರಡು ದಶಕಗಳಿಂದ ವಿದ್ಯುನ್ಮಾನ, ಬಾನುಲಿ ಹಾಗೂ ಮುದ್ರಣ ಮಾಧ್ಯಮದಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿರುವ ಹಿರಿಯ ಪತ್ರಕರ್ತ ಡಾ. ಮಹೇಶ ವಾಳ್ವೇಕರ್‌ಗೆ (Dr. Mahesh Valvekar) ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿ (PHD Research) ಪ್ರದಾನ ಮಾಡಿದೆ. ಇವರು ಕರ್ನಾಟಕ ವಿಧಾನ ಪರಿಷತ್ತಿನ ಸಭಾಧ್ಯಕ್ಷರ ವಿಶೇಷ ಕರ್ತವ್ಯಾಧಿಕಾರಿಯಾಗಿದ್ದಾರೆ.

ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ. ಎಂ. ಗಂಗಾಧರಪ್ಪ ಅವರ ಮಾರ್ಗದರ್ಶನದಲ್ಲಿ ಡಾ. ಮಹೇಶ ವಾಳ್ವೇಕರ್‌ “ಬಾನುಲಿಯಲ್ಲಿ ಆರೋಗ್ಯ ಕಾರ್ಯಕ್ರಮಗಳು – ಧಾರವಾಡ ಆಕಾಶವಾಣಿ ಕೇಂದ್ರದ ಒಂದು ಅಧ್ಯಯನ” ಕುರಿತ ಸಂಶೋಧನೆಯನ್ನು ಕೈಗೊಂಡು ಮಹಾಪ್ರಬಂಧವನ್ನು ವಿಶ್ವವಿದ್ಯಾಲಯಕ್ಕೆ ಮಂಡಿಸಿದ್ದರು.

ಡಾ. ಮಹೇಶ ವಾಳ್ವೇಕರ್‌ ಕಳೆದ 23 ವರ್ಷಗಳಿಂದ ಪತ್ರಿಕೋದ್ಯಮಿಯಾಗಿ ಮಾಧ್ಯಮದ ಎಲ್ಲಾ ಪ್ರಕಾರಗಳಲ್ಲೂ ಸಮರ್ಥವಾಗಿ, ಪ್ರಾಮಾಣಿಕವಾಗಿ ಹಾಗೂ ಕ್ರಿಯಾಶೀಲವಾಗಿ ಕರ್ತವ್ಯ ನಿರ್ವಹಿಸಿದ್ದು, ಹಲವು ಸಂಘ ಸಂಸ್ಥೆಗಳಿಗೆ ಮಾಧ್ಯಮ ತಜ್ಞರಾಗಿ ಹಾಗೂ ಮಾಧ್ಯಮ ಸಲಹೆಗಾರರಾಗಿ ಕೆಲಸ ಮಾಡಿದ್ದಾರೆ.

ಧಾರವಾಡ ಆಕಾಶವಾಣಿ ಕೇಂದ್ರದ ಸುದ್ದಿ ವಿಭಾಗದ ವರದಿಗಾರರಾಗಿ, ವಾರ್ತಾ ವಾಚಕರಾಗಿ ಕರ್ತವ್ಯ ನಿರ್ವಹಿಸಿರುವ ಡಾ. ಮಹೇಶ ವಾಳ್ವೇಕರ್‌, ಉದಯ ಸುದ್ದಿ ವಾಹಿನಿ ಸೇರಿದಂತೆ ಹಲವು ಟಿವಿ ಮಾಧ್ಯಮದ ಸುದ್ದಿವಾಹಿನಿಯ ಜಿಲ್ಲಾ ವರದಿಗಾರರಾಗಿ ಹಾಗೂ ಮುದ್ರಣ ಮಾಧ್ಯಮದ ಹಲವು ಪತ್ರಿಕೆಗಳ ಜಿಲ್ಲಾ ವರದಿಗಾರರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಇದನ್ನೂ ಓದಿ: Death News : ಧ್ರುವನಾರಾಯಣ್‌ ಪತ್ನಿ ವೀಣಾ ನಿಧನ; ಪತಿಯ ಸಾವಿನಿಂದ ಕುಗ್ಗಿದ್ದರು, ತಿಂಗಳೊಳಗೆ ಮತ್ತೊಂದು ಆಘಾತ

ದೂರದರ್ಶನ ಚಂದನ ವಾಹಿನಿಯ ವರದಿಗಾರರಾಗಿ, ಸಹಾಯಕ ಸುದ್ದಿ ಸಂಪಾದಕರಾಗಿಯೂ ಸಹ ಕರ್ತವ್ಯ ನಿರ್ವಹಿಸಿ ಜನಮನ್ನಣೆಗೆ ಪಾತ್ರರಾಗಿದ್ದಾರೆ. ಪ್ರಸ್ತುತ ಕಳೆದ ಎರಡು ವರ್ಷಗಳಿಂದ ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿಯವರ ವಿಶೇಷ ಕರ್ತವ್ಯಾಧಿಕಾರಿಯಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ.

Exit mobile version