Site icon Vistara News

PM Modi Karnataka Visit: ಪ್ರಧಾನಿ ಡ್ಯೂಟಿಯಲ್ಲಿದ್ದ ಪೊಲೀಸರಿಗೆ ನಾಯಿ ಕಾಟ; ಎಚ್‌ಎ‌ಎಲ್ ವಿಮಾನ ನಿಲ್ದಾಣದ ಹೊರಗೆ ಪರದಾಟ

#image_title

ಬೆಂಗಳೂರು: ಇಲ್ಲಿನ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರಕ್ಕೆ (PM Modi Karnataka Visit) ಪ್ರಧಾನಿ ನರೇಂದ್ರ ಮೋದಿ ಆಗಮನ ಹಿನ್ನೆಲೆಯಲ್ಲಿ ಮಾದವಾರ ಸೇರಿ ಎಚ್‌ಎ‌ಎಲ್ ವಿಮಾನ ನಿಲ್ದಾಣದಲ್ಲಿ ಪೊಲೀಸ್‌ ಬಿಗಿ ಭದ್ರತೆಯನ್ನು ವಹಿಸಲಾಗಿತ್ತು. ಹೀಗೆ ಪ್ರಧಾನಿ ಭದ್ರತಾ‌ ಡ್ಯೂಟಿಯಲ್ಲಿದ್ದವರಿಗೆ ಬೀದಿ ನಾಯಿಗಳ ಕಾಟ ಎದುರಾಗಿ ಸಾಕಷ್ಟು ಪರದಾಡುವಂತಾಯಿತು.

ಎಚ್‌ಎ‌ಎಲ್ ವಿಮಾನ ನಿಲ್ದಾಣದ ಹೊರಗೆ ಎರಡೆರಡು ನಾಯಿಗಳು ಭದ್ರತಾ ಸಿಬ್ಬಂದಿಗೆ ಆಟ ಆಡಿಸಿದೆ. ಪೊಲೀಸರು ಮೊದಲು ನಾಯಿಯನ್ನು ಓಡಿಸಲು ಯತ್ನಿಸಿದರು. ಆದರೆ, ಅದು ಸಾಧ್ಯವಾಗಿಲ್ಲ. ಒಂದು ಕಡೆ ಹೋದರೆ ಮತ್ತೊಂದು ಕಡೆಗೆ ತಪ್ಪಿಸಿಕೊಂಡು ಹೋಗುತ್ತಿತ್ತು. ಈ ಹಿನ್ನೆಲೆಯಲ್ಲಿ ತಮಗೆ ಆಗದ ಕೆಲಸ ಇದು ಎಂದರಿತ ಪೊಲೀಸರು ನಾಯಿಯನ್ನು ಹಿಡಿಯಲು ಕೆಲವರನ್ನು ಕರೆ ತಂದರು.

ಕೊನೆಗೆ ಪೊಲೀಸರು ಮತ್ತು ನಾಯಿ ಹಿಡಿಯಲು ಬಂದವರು ಶ್ವಾನವನ್ನು ಅಟ್ಟಾಡಿಸಿಕೊಂಡು ಹೋದರು. ಆದರೂ ಅದು ತಪ್ಪಿಸಿಕೊಂಡು ಹೋಗುತ್ತಿತ್ತು. ಸುಮಾರು ಹತ್ತು ನಿಮಿಷಗಳ ಕಾಲ ಎರಡು ನಾಯಿಗಳು ಸಾಕಷ್ಟು ಸತಾಯಿಸಿದವು. ಭದ್ರತಾ ಸಿಬ್ಬಂದಿಯ ಸತತ ಪ್ರಯತ್ನದ ನಂತರ ಒಂದು ನಾಯಿಯನ್ನು ಹಿಡಿಯಲಾಯಿತು. ಇನ್ನೊಂದು ನಾಯಿ ಹಿಡಿಯಲು ಪರದಾಟ ಮತ್ತೆ ಮುಂದುವರಿದಿತ್ತು.

ಪಾಸ್‌ ಇಲ್ಲದವರಿಗೆ ನೋ ಎಂಟ್ರಿ

ಕಾರ್ಯಕ್ರಮಕ್ಕೆ ಪಾಸ್ ಇಲ್ಲದವರನ್ನು ಪೊಲೀಸರು ವಾಪಸ್‌ ಕಳುಹಿಸಿದ ಘಟನೆಯು ನಡೆಯಿತು. ಮತ್ತೊಂದು ಕಡೆ ಎಕ್ಸಿಬಿಟರ್ ಪಾಸ್‌ ಹೊಂದಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ತಡೆದರು. ಪ್ರದರ್ಶನ ಕೇಂದ್ರದ ಗೇಟ್ ಒಳಗೆ ಹೋಗದಂತೆ ಪೊಲೀಸರು ತಡೆಹಿಡಿದಿದ್ದರು.

ಇದನ್ನೂ ಓದಿ: Viral News: ನೀರಿನಂತೆಯೇ ಇರುವ ಮಂಜುಗಡ್ಡೆಯನ್ನು ತಯಾರಿಸಿದ ವಿಜ್ಞಾನಿಗಳು!

ಪೊಲೀಸರು ತಡೆ ಹಿಡಿದರೂ ನುಸುಳಿ ಹೋಗುತ್ತಿದ್ದ ಎಕ್ಸಿಬಿಟರ್‌ ಪಾಸ್‌ ಹೊಂದಿದ್ದ ವ್ಯಕ್ತಿಯನ್ನು ಪೊಲೀಸರು ಎಳೆದೊಯ್ದರು.

Exit mobile version