Site icon Vistara News

Karnataka Election 2023: ಕರ್ನಾಟಕ ಚುನಾವಣೆ ಮತದಾನಕ್ಕೂ ಮುನ್ನ ಪ್ರಧಾನಿ ಮೋದಿ ಟ್ವೀಟ್​

PM Modi Tweet over Karnataka Assembly Elction 2023

#image_title

ಕರ್ನಾಟಕ ವಿಧಾನಸಭೆ ಚುನಾವಣೆ (Karnataka Election 2023)ನಿಮಿತ್ತ ರಾಜ್ಯದಲ್ಲಿ ಭರ್ಜರಿ ರೋಡ್ ಶೋ, ಸಮಾವೇಶಗಳನ್ನು ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ (PM Modi)ಯವರು ಇಂದು ಟ್ವೀಟ್​ ಮಾಡುವ ಮೂಲಕ ಮತದಾನ ಮಾಡುವಂತೆ ಕೇಳಿದ್ದಾರೆ. ‘ಕರ್ನಾಟಕದ ಜನರನ್ನು, ಅದರಲ್ಲೂ ಯುವಜನರು ಮತ್ತು ಮೊದಲ ಬಾರಿಗೆ ಹಕ್ಕು ಚಲಾಯಿಸುತ್ತಿರುವವರು ತಪ್ಪದೆ, ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತಹಾಕುವಂತೆ ಮತ್ತು ಪ್ರಜಾಪ್ರಭುತ್ವವದ ಹಬ್ಬವನ್ನು ಸಮೃದ್ಧಗೊಳಿಸುವಂತೆ ಒತ್ತಾಯಿಸುತ್ತೇನೆ’ ಎಂದಿದ್ದಾರೆ.

ಕರ್ನಾಟಕ ವಿಧಾನಸಭಾ ಚುನಾವಣೆ ಮತದಾನ ಇಂದು ಮುಂಜಾನೆ 7ಗಂಟೆಯಿಂದ ಶುರುವಾಗಿದ್ದು ಸಂಜೆ 6ಗಂಟೆವರೆಗೆ ನಡೆಯಲಿದೆ. ಮೇ 8ರಂದು ಸಂಜೆ 6ಗಂಟೆಗೆ ಬಹಿರಂಗ ಪ್ರಚಾರ ಅಂತ್ಯವಾಗಿದ್ದು, 9ರಂದು ಅಭ್ಯರ್ಥಿಗಳು, ಬೆಂಬಲಿಗರು ಮನೆಮನೆ ಪ್ರಚಾರ ನಡೆಸಿದ್ದಾರೆ. ಇನ್ನು ಮೇ 9ರಂದು ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕದ ಜನರಿಗೆ ವರ್ಚ್ಯುವಲ್​ ಸಂದೇಶ ಕೊಟ್ಟಿದ್ದರು. ‘ಕರ್ನಾಟಕದಲ್ಲಿ ಮೇ 10ರಂದು ಚುನಾವಣೆ ನಡೆಯಲಿದೆ. ಆ ರಾಜ್ಯದಲ್ಲಿ ಕಳೆದ 38ವರ್ಷಗಳಿಂದ ಒಂದು ಸರ್ಕಾರ ಸತತವಾಗಿ ಎರಡನೇ ಅವಧಿಗೆ ಅಧಿಕಾರ ಹಿಡಿದಿಲ್ಲ. ಆದರೆ ಬಿಜೆಪಿ ಈ ಆಡಳಿತ ವಿರೋಧಿ ಅಂಶವನ್ನು ಬಿಜೆಪಿ ಈ ಸಲ ಮುರಿಯಲಿದೆ. ಸತತ ಎರಡನೇ ಅವಧಿಗೆ ಬಿಜೆಪಿ ಅಧಿಕಾರ ಹಿಡಿಯಲಿದೆ’ ಎಂದು ಹೇಳಿದ್ದರು.

ಇದನ್ನೂ ಓದಿ: Karnataka Election: ಮತದಾನ ಮಾಡಿದ ರಾಜ್ಯದ ಪ್ರಮುಖ ಸ್ವಾಮೀಜಿಗಳು, ಇಲ್ಲಿವೆ ಫೋಟೊಗಳು

‘ನೀವು ನನಗೆ ಯಾವತ್ತೂ ಪ್ರೀತಿ ಮತ್ತು ವಾತ್ಸಲ್ಯವನ್ನು ಕೊಟ್ಟಿದ್ದೀರಿ. ಇದು ನನ್ನ ಪಾಲಿಗೆ ದೈವಿಕ ಆಶೀರ್ವಾದ. ನಾವೀಗ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಇದ್ದೇವೆ. ನಮ್ಮ ಪ್ರೀತಿಯ ಭಾರತವನ್ನು ಅಭಿವೃದ್ಧಿ ರಾಷ್ಟ್ರವನ್ನಾಗಿಸುವ ಗುರಿ ನಮ್ಮದು. ಈ ಉದ್ದೇಶವನ್ನು ಸಾಕಾರಗೊಳಿಸಲು ಕರ್ನಾಟಕ ಉತ್ಸುಕವಾಗಿದೆ’ ಎಂದು ಹೇಳಿದ್ದರು. ಭಾರತ ಅತಿದೊಡ್ಡ ಆರ್ಥಿಕತೆ ಹೊಂದಿರುವ ಐದನೇ ರಾಷ್ಟ್ರ. ಈ ಪಟ್ಟಿಯಲ್ಲಿ ನಾವು ಮೂರನೇ ಸ್ಥಾನ ಏರುವುದು ನಮ್ಮ ಆದ್ಯತೆ. ಹಾಗಾಗಬೇಕು ಎಂದರೆ ಕರ್ನಾಟಕ ಕ್ಷಿಪ್ರವಾಗಿ 1 ಟ್ರಿಲಿಯನ್ ಆರ್ಥಿಕತೆಗೆ ಏರಬೇಕು’ ಎಂದು ಮೋದಿಯವರು ಹೇಳಿದ್ದರು.

Exit mobile version