ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi)ಯವರು ಇಂದು ಕರ್ನಾಟಕಕ್ಕೆ ಆಗಮಿಸಿದ್ದಾರೆ. ಕರ್ನಾಟಕದಲ್ಲಿ ಮಾರ್ಚ್ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಇಲ್ಲಿಗೆ ಸರಣಿ ಭೇಟಿ ನೀಡುತ್ತಿದ್ದಾರೆ. ಇಂದು ದೆಹಲಿಯಿಂದ ಬೆಂಗಳೂರಿಗೆ ವಿಶೇಷ ವಿಮಾನದ ಮೂಲಕ ಆಗಮಿಸಿದ ಅವರು ಎಚ್ಎಎಲ್ನಲ್ಲಿ ಇಳಿದಿದ್ದಾರೆ. ಬೆಂಗಳೂರಿನಲ್ಲಿ ಅವರು ಎರಡು ಕಾರ್ಯಕ್ರಮಗಳನ್ನು ಉದ್ಘಾಟಿಸುವರು. ಮಧ್ಯಾಹ್ನ ತುಮಕೂರಿಗೆ ತೆರಳಲಿದ್ದಾರೆ. ಗುಬ್ಬಿ ತಾಲೂಕಿನಲ್ಲಿ ಎಚ್‌ಎಎಲ್ ಹೆಲಿಕಾಪ್ಟರ್ ಉತ್ಪಾದನಾ ಘಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಅಲ್ಲಿಂದ ಮಧ್ಯಾಹ್ನ 5.25ಕ್ಕೆ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವರು. ಇಂದಿನ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು-ತುಮಕೂರು ಭೇಟಿಯ ಕ್ಷಣಕ್ಷಣದ ಮಾಹಿತಿ ಇಲ್ಲಿದೆ.
ಹೆಚ್ಚಿನ ಸ್ಟೋರಿಗಳ ಲಿಂಕ್ ಇಲ್ಲಿದೆ: Narendra Modi: ಮೋದಿ ಉದ್ಘಾಟಿಸಲಿರುವ ಎಚ್‌ಎಎಲ್ ಘಟಕದ ವಿಶೇಷತೆ ಏನು?
Narendra modi: ಪ್ರಧಾನಿ ಕಾರ್ಯಕ್ರಮ, ಹೇಗಿದೆ ವೇದಿಕೆ ಭದ್ರತೆ?
Narendra Modi: ಇಂದು ಪ್ರಧಾನಿ ಮೋದಿ ಬೆಂಗಳೂರು, ತುಮಕೂರಿಗೆ ಭೇಟಿ; ಕಾರ್ಯಕ್ರಮಗಳ ವೇಳಾಪಟ್ಟಿ ಹೀಗಿದೆ
PM Modi Karnataka Visit Live: ತುಮಕೂರಿನ ಗುಬ್ಬಿಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿಯವರು ಲಘು ಬಹುಪಯೋಗಿ ಹೆಲಿಕಾಪ್ಟರ್ ಘಟಕ, ಜಲಜೀವನ್ ಮಿಷನ್ ಯೋಜನೆಗಳಿಗೆ ಮತ್ತು ಚೆನ್ನೈ-ಬೆಂಗಳೂರು ಎಕ್ಸ್ಪ್ರೆಸ್ ಕೈಗಾರಿಕಾ ಕಾರಿಡಾರ್ನಲ್ಲಿ ತುಮಕೂರು ಕೈಗಾರಿಕಾ ಟೌನ್ಶಿಪ್ ಗೆ ಅಡಿಗಲ್ಲು ಸ್ಥಾಪನೆ ಮಾಡಿದರು.
PM Modi Karnataka Visit Live: ಕರ್ನಾಟಕ ಅನ್ವೇಷಣೆಯ ನಾಡು
ಕರ್ನಾಟಕ ಯುವ ಪ್ರತಿಭೆ, ಯುವ ಅನ್ವೇಷಣೆಯ ನಾಡು. ಡ್ರೋಣ್ ಉತ್ಪಾದನೆಯಿಂದ ತೇಜಸ್ ಯುದ್ಧ ವಿಮಾನದವರೆಗೆ ಕರ್ನಾಟಕದ ಉತ್ಪಾದನಾ ಕ್ಷೇತ್ರದ ಶಕ್ತಿಯನ್ನು ಪ್ರಪಂಚ ನೋಡುತ್ತಿದೆ. ಡಬಲ್ ಇಂಜಿನ್ ಸರ್ಕಾರವು ಕರ್ನಾಟಕವನ್ನು, ಹೂಡಿಕೆದಾರರ ಮೊದಲ ಆಯ್ಕೆಯನ್ನಾಗಿಸಿದೆ. ಡಬಲ್ ಇಂಜಿನ್ ಸರ್ಕಾರ ಹೇಗೆ ಕೆಲಸ ಮಾಡುತ್ತದೆ ಎನ್ನುವುದಕ್ಕೆ ಇಂದು ಆಗುತ್ತಿರುವ ಹೆಲಿಕಾಪ್ಟರ್ ಕಾರ್ಖಾನೆಯೂ ಒಂದು ಉದಾಹರಣೆ. 2016ರಲ್ಲಿ ಈ ಘಟಕದ ಶಿಪಾನ್ಯಾಸದ ಅವಕಾಶ ಸಿಕ್ಕಿತ್ತು. ನಮ್ಮ ರಕ್ಷಣಾ ಅವಶ್ಯಕತೆಗಳಿಗಾಗಿ ವಿದೇಶದ ಮೇಲಿನ ಅವಲಂಬನೆ ಕಡಿಮೆ ಮಾಡಬೇಕು ಎನ್ನುವುದು ನಮ್ಮ ಉದ್ದೇಶವಾಗಿತ್ತು ಎಂದು ಪ್ರಧಾನಿ ಮೋದಿ ಹೇಳಿದರು.
PM Modi Karnataka Visit Live: ಸುಳ್ಳು ಸೋಲಲೇ ಬೇಕು ಎಂದು ಪ್ರತಿಪಕ್ಷಗಳಿಗೆ ತಿರುಗೇಟು ಕೊಟ್ಟ ಪ್ರಧಾನಿ ಮೋದಿ
ಇದೇ ಎಚ್‌ಎಎಲ್ ವಿಷಯಗಳನ್ನಿಟ್ಟುಕೊಂಡು ನಮ್ಮ ಸರ್ಕಾರದ ಮೇಲೆ ಸುಳ್ಳು ಆರೋಪಗಳನ್ನು ಮಾಡಲಾಯಿತು. ಎಚ್ಎಎಲ್ನ್ನು ಸರ್ಕಾರ ಮುಳುಗಿಸಿಬಿಡುತ್ತದೆ ಎಂದು ಜನರನ್ನು ಪ್ರಚೋದಿಸಲಾಯಿತು. ಇದೇ ವಿಷಯಕ್ಕೆ ಸಂಸತ್ತಿನಲ್ಲಿ ಹಲವು ಗಂಟೆಗಳನ್ನು ಹಾಳು ಮಾಡಲಾಯಿತು. ಸುಳ್ಳು ಎಷ್ಟೇ ದೊಡ್ಡದಿರಲಿ, ಎಷ್ಟೇ ಬಾರಿ ಹೇಳಲಿ, ಅದನ್ನು ಎಷ್ಟೇ ದೊಡ್ಡ ಜನರೇ ಹೇಳಲಿ, ಒಂದಲ್ಲ, ಒಂದು ದಿನ ಸತ್ಯದ ಎದುರು ಸೋಲಲೇ ಬೇಕು’ ಎಂದು ಪ್ರಧಾನಿ ಮೋದಿ ಹೇಳಿದರು.
PM Modi Karnataka Visit Live: ತುಮಕೂರು ಶ್ರೀ ಶಿವಕುಮಾರ ಸ್ವಾಮಿಗಳನ್ನು ಸ್ಮರಿಸಿದ ಪ್ರಧಾನಿ ಮೋದಿ
ಎಚ್‌ಎಎಲ್ ಹೆಲಿಕಾಪ್ಟರ್ ಉತ್ಪಾದನಾ ಘಟಕ ಉದ್ಘಾಟಿಸಿದ ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಮೊದಲು ‘ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ನೆಟ್ಟೂರು ನಗರದ ಆತ್ಮೀಯ ನಾಗರೀಕ ಬಂಧು ಭಗಿನಿಯರೆ, ನಿಮಗೆಲ್ಲ ನನ್ನ ನಮಸ್ಕಾರಗಳು’ ಎಂದು ಕನ್ನಡದಲ್ಲಿಯೇ ಹೇಳಿದರು. ಬಳಿಕ ಕರ್ನಾಟಕವನ್ನು ಹೊಗಳಿ ‘. ಕರ್ನಾಟಕವು ಸಂತರು, ಋಷಿಗಳು ಹಾಗೂ ಸಾದ್ವಿಯರ ಭೂಮಿ. ಅಧ್ಯಾತ್ಮ, ಜ್ಞಾನ-ವಿಜ್ಞಾನದ ಮಹಾನ್ ಪರಂಪರೆಯನ್ನು ಕರ್ನಾಟಕವು ಎಂದಿಗೂ ಸಶಕ್ತಗೊಳಿಸಿದೆ. ಅದರಲ್ಲೂ ತುಮಕೂರಿನ ವಿಶೇಷ ಸ್ಥಾನವಿದೆ. ಸಿದ್ಧಗಂಗಾ ಮಠದ ಪಾತ್ರ ಇದರಲ್ಲಿ ಬಹು ದೊಡ್ಡದು’ ಎಂದು ಹೇಳಿದರು. ಪೂಜ್ಯ ಶಿವಕುಮಾರ ಸ್ವಾಮಿಗಳು ತ್ರಿವಿಧ ದಾಸೋಹಿಗಳಾಗಿದ್ದರು. ಅನ್ನ, ಅಕ್ಷರ ಹಾಗೂ ಆಸರೆಯ ಪರಂಪರೆಯನ್ನು ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ ಮುಂದುವರಿಸುತ್ತಿದ್ದಾರೆ ಎಂದರು.
PM Modi Karnataka Visit Live: ಅಮೃತಕಾಲವೆಂದರೆ ಕರ್ತವ್ಯಕಾಲ: ಸಿಎಂ ಬೊಮ್ಮಾಯಿ
ಮುಂದಿನ 25 ವರ್ಷವು ಅಮೃತ ಕಾಲವಾಗಿದೆ. ಈ ಸಮಯದಲ್ಲೇ ಭಾರತಕ್ಕೆ ಜಿ20 ಅಧ್ಯಕ್ಷ ಸ್ಥಾನ ಸಿಗುತ್ತಿದೆ. ಅದರ ಅಡಿಯಲ್ಲಿ, ಒಂದೇ ವಿಶ್ವ, ಒಂದೇ ಕುಟುಂಬ ಎಂಬ ಘೋಷಣೆಯಿಂದ ಮಾರ್ಗದರ್ಶನವನ್ನು ಮಾಡುತ್ತಿದ್ದಾರೆ. ಅಮೃತ ಕಾಲ ಎಂದರೆ ಇದು ಕರ್ತವ್ಯ ಕಾಲ. ಸ್ವಾತಂತ್ರ್ಯದ 100 ನೇ ವರ್ಷದಲ್ಲಿ ಭಾರತ ನಂಬರ್ 1 ಆಗಬೇಕೆಂದರೆ, ಕರ್ನಾಟಕ ಅಗ್ರಮಾನ್ಯವಾಗಿ ಮುಂದೆ ನಿಲ್ಲುತ್ತದೆ. ನವ ಭಾರತ ನಿರ್ಮಾಣಕ್ಕೆ ನವ ಕರ್ನಾಟಕವನ್ನು ನಿರ್ಮಾಣ ಮಾಡುತ್ತೇವೆ ಎಂಬ ಆಶ್ವಾಸನೆಯನ್ನು ನೀಡುತ್ತೇವೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.