Site icon Vistara News

PM Modi Karnataka Visit Live: ಯುವ ಪ್ರತಿಭೆ, ಅನ್ವೇಷಣೆಯ ನಾಡು ಕರ್ನಾಟಕ ಎಂದ ಪ್ರಧಾನಿ ಮೋದಿ

Gubbi HAL

#image_title

ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi)ಯವರು ಇಂದು ಕರ್ನಾಟಕಕ್ಕೆ ಆಗಮಿಸಿದ್ದಾರೆ. ಕರ್ನಾಟಕದಲ್ಲಿ ಮಾರ್ಚ್​​ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಇಲ್ಲಿಗೆ ಸರಣಿ ಭೇಟಿ ನೀಡುತ್ತಿದ್ದಾರೆ. ಇಂದು ದೆಹಲಿಯಿಂದ ಬೆಂಗಳೂರಿಗೆ ವಿಶೇಷ ವಿಮಾನದ ಮೂಲಕ ಆಗಮಿಸಿದ ಅವರು ಎಚ್​ಎಎಲ್​​ನಲ್ಲಿ ಇಳಿದಿದ್ದಾರೆ. ಬೆಂಗಳೂರಿನಲ್ಲಿ ಅವರು ಎರಡು ಕಾರ್ಯಕ್ರಮಗಳನ್ನು ಉದ್ಘಾಟಿಸುವರು. ಮಧ್ಯಾಹ್ನ ತುಮಕೂರಿಗೆ ತೆರಳಲಿದ್ದಾರೆ. ಗುಬ್ಬಿ ತಾಲೂಕಿನಲ್ಲಿ ಎಚ್‌ಎಎಲ್‌ ಹೆಲಿಕಾಪ್ಟರ್‌ ಉತ್ಪಾದನಾ ಘಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಅಲ್ಲಿಂದ ಮಧ್ಯಾಹ್ನ 5.25ಕ್ಕೆ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವರು. ಇಂದಿನ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು-ತುಮಕೂರು ಭೇಟಿಯ ಕ್ಷಣಕ್ಷಣದ ಮಾಹಿತಿ ಇಲ್ಲಿದೆ.

ಹೆಚ್ಚಿನ ಸ್ಟೋರಿಗಳ ಲಿಂಕ್​ ಇಲ್ಲಿದೆ: Narendra Modi: ಮೋದಿ ಉದ್ಘಾಟಿಸಲಿರುವ ಎಚ್‌ಎಎಲ್‌ ಘಟಕದ ವಿಶೇಷತೆ ಏನು?
Narendra modi: ಪ್ರಧಾನಿ ಕಾರ್ಯಕ್ರಮ, ಹೇಗಿದೆ ವೇದಿಕೆ ಭದ್ರತೆ?
Narendra Modi: ಇಂದು ಪ್ರಧಾನಿ ಮೋದಿ ಬೆಂಗಳೂರು, ತುಮಕೂರಿಗೆ ಭೇಟಿ; ಕಾರ್ಯಕ್ರಮಗಳ ವೇಳಾಪಟ್ಟಿ ಹೀಗಿದೆ


Lakshmi Hegde

E 20 ಪೆಟ್ರೋಲ್​ ವಿತರಣೆಗೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ

ಶೇ.20ರಷ್ಟು ಎಥೆನಾಲ್​ ಮಿಶ್ರಣ ಇರುವ ಪೆಟ್ರೋಲ್​ ವಿತರಣೆಗೆ ಪ್ರಧಾನಿ ನರೇಂದ್ರ ಮೋದಿಯವರು ಹಸಿರು ನಿಶಾನೆ ತೋರಿಸಿದರು.

Lakshmi Hegde

PM Modi Speech Live: ತ್ರಿಬ್ಬಲ್​ ‘ಆರ್’​ ಮಂತ್ರ ಪಠಿಸಿದ ಪ್ರಧಾನಿ ಮೋದಿ

ಬೆಂಗಳೂರಿನಲ್ಲಿ ನಡೆದ ಭಾರತ ಇಂಧನ ಸಪ್ತಾಹದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ‘ರೆಡ್ಯೂಸ್​, ರೀ ಯೂಸ್​, ರೀಸೈಕಲ್​ (ಬಳಕೆ ಕಡಿಮೆ ಮಾಡಿ-ಮರು ಬಳಕೆ-ಮರು ಸಂಸ್ಕರಣ) ಎಂಬುದನ್ನು ಒತ್ತು ನೀಡಿ ಹೇಳಿದರು. ಹಾಗೇ, ಇಂಧನ ಕ್ಷೇತ್ರದ ಹೂಡಿಕೆಗೆ ಭಾರತವೇ ಬೆಸ್ಟ್​ ಎಂದರು.

Lakshmi Hegde

PM Modi Speech Live: ದೇಸಿ ಉತ್ಪಾದನೆಗೆ ಒತ್ತು..

ಇಂದು ದೇಸಿ ಉತ್ಪಾದನೆಗೆ ಹೆಚ್ಚು ಒತ್ತು ನೀಡುತ್ತಿದ್ದೇವೆ. ಇದಕ್ಕಾಗಿಯೇ, 10 ಲಕ್ಷ ಚದರ ಕಿಲೋಮೀಟರ್‌ ಪ್ರದೇಶವು ನಿರ್ಬಂಧಗಳಿಂದ ಮುಕ್ತವಾಗಿದೆ. ಈ ಕ್ಷೇತ್ರದಲ್ಲಿ ಹೂಡಿಕೆಗೆ ಅತಿ ದೊಡ್ಡ ಅವಕಾಶವಿದೆ. ಪಳೆಯುಳಿಕೆ ಇಂಧನ ಉತ್ಪಾದನೆಯಲ್ಲೂ ಉದ್ಯಮಿಗಳು ತಮ್ಮ ಛಾಪು ಮೂಡಿಸಬೇಕು ಎಂಬುದು ನಮ್ಮ ಆಶಯ. ಜೈವಿಕ ಇಂಧನ ಕ್ಷೇತ್ರದಲ್ಲೂ ಕೋಟ್ಯಂತರ ರೂ. ಹೂಡಿಕೆಗೆ ಅವಕಾಶವಿದೆ. ಗ್ರೀನ್‌ ಹೈಡ್ರೋಜನ್‌ ಅಭಿಯಾನವು 21 ನೇ ಶತಮಾನದ ಬಹುಮುಖ್ಯ ಹೆಜ್ಜೆ. ಭಾರತವು ಮುಂದಿನ ಐದು ವರ್ಷದಲ್ಲಿ ಗ್ರೇ ಹೈಡ್ರೋಜನ್‌ ಅನ್ನು ಕಡಿಮೆ ಮಾಡಿ, ಗ್ರೀನ್‌ ಹೈಡ್ರೋಜನ್‌ ಪಾಲನ್ನು 25%ಗೆ ಹೆಚ್ಚಳ ಮಾಡಲಿದೆ.

Lakshmi Hegde

PM Modi Speech Live: ತೈಲ ಸಂಸ್ಕರಣ ಸಾಮರ್ಥ್ಯ ಹೆಚ್ಚಿಸುವ ಪ್ರಯತ್ನ

ಭಾರತವು ವಿಶ್ವದಲ್ಲಿ 4ನೇ ಅತಿ ದೊಡ್ಡ ತೈಲ ಸಂಸ್ಕರಣ ಸಾಮರ್ಥ್ಯ ಹೊಂದಿರುವ ದೇಶ. ತೈಲ ಸಂಸ್ಕರಣಾ ಸಾಮರ್ಥ್ಯವನ್ನು ಈಗಿನ 200 ಟಿಪಿಎ (million metric tons per annum)ದಿಂದ 400 ಟಿಪಿಎ ಮಾಡುವ ಪ್ರಯತ್ನದಲ್ಲಿ ಸಾಗಿದ್ದೇವೆ. ನಮ್ಮ ಪೆಟ್ರೊಕೆಮಿಕಲ್‌ ಉತ್ಪಾದನೆ ಹೆಚ್ಚಿಸಲು ವೇಗವಾಗಿ ಕೆಲಸ ಮಾಡುತ್ತಿದ್ದೇವೆ. 2030ರ ವೇಳೆಗೆ ನಮ್ಮ ಇಂಧನದಲ್ಲಿ ನೈಸರ್ಗಿಕ ಅನಿಲ ಬಳಕೆ ಹೆಚ್ಚಿಸಲು ಕೆಲಸ ಮಾಡುತ್ತಿದ್ದೇವೆ. ಈಗಿನ ಶೇ.6ನ್ನು ಹೆಚ್ಚಿಸಿ ಶೇ.15ಕ್ಕೆ ಹೆಚ್ಚಿಸಲಿದ್ದೇವೆ. ಒನ್‌ ನೇಷನ್‌, ಒನ್‌ ಗ್ರಿಡ್‌ ಈ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.

Lakshmi Hegde

PM Modi Karnataka Visit Live: ಗ್ರೀನ್​ ಹೈಡ್ರೋಜನ್​ ಮಿಷನ್​​ನಲ್ಲಿ 8 ಲಕ್ಷ ರೂ.ಹೂಡಿಕೆ

2024ರ ಹೊತ್ತಿಗೆ ನಮ್ಮ ದೇಶದಲ್ಲಿ ಗ್ಯಾಸ್​ಪೈಪ್​ಲೈನ್​ ಹೆಚ್ಚಾಗಲಿದೆ. ಭಾರತದ ಗ್ರೀನ್​ ಇಂಡಿಯಾ ಪರಿಕಲ್ಪನೆ ಅದ್ಭುತವಾಗಿ ಕೆಲಸ ಮಾಡುತ್ತಿದೆ. ಭಾರತದಲ್ಲಿ ಈಗ ಹೂಡಿಕೆಗೆ ಅತ್ಯಂತ ಹೆಚ್ಚಿನ ಅವಕಾಶ ಸಿಗುತ್ತಿದೆ. ಗ್ರೀನ್​ ಹೈಡ್ರೋಜನ್​ ಮಿಷನ್​​ನಲ್ಲಿ 8 ಲಕ್ಷ ರೂಪಾಯಿ ಹೂಡಿಕೆಯಾಗುತ್ತಿದೆ. 2ಜಿ ಎಥೆನಾಲ್​ ಘಟಕ ನಿರ್ಮಾಣವಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

Exit mobile version