ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi)ಯವರು ಇಂದು ಕರ್ನಾಟಕಕ್ಕೆ ಆಗಮಿಸಿದ್ದಾರೆ. ಕರ್ನಾಟಕದಲ್ಲಿ ಮಾರ್ಚ್ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಇಲ್ಲಿಗೆ ಸರಣಿ ಭೇಟಿ ನೀಡುತ್ತಿದ್ದಾರೆ. ಇಂದು ದೆಹಲಿಯಿಂದ ಬೆಂಗಳೂರಿಗೆ ವಿಶೇಷ ವಿಮಾನದ ಮೂಲಕ ಆಗಮಿಸಿದ ಅವರು ಎಚ್ಎಎಲ್ನಲ್ಲಿ ಇಳಿದಿದ್ದಾರೆ. ಬೆಂಗಳೂರಿನಲ್ಲಿ ಅವರು ಎರಡು ಕಾರ್ಯಕ್ರಮಗಳನ್ನು ಉದ್ಘಾಟಿಸುವರು. ಮಧ್ಯಾಹ್ನ ತುಮಕೂರಿಗೆ ತೆರಳಲಿದ್ದಾರೆ. ಗುಬ್ಬಿ ತಾಲೂಕಿನಲ್ಲಿ ಎಚ್‌ಎಎಲ್ ಹೆಲಿಕಾಪ್ಟರ್ ಉತ್ಪಾದನಾ ಘಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಅಲ್ಲಿಂದ ಮಧ್ಯಾಹ್ನ 5.25ಕ್ಕೆ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವರು. ಇಂದಿನ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು-ತುಮಕೂರು ಭೇಟಿಯ ಕ್ಷಣಕ್ಷಣದ ಮಾಹಿತಿ ಇಲ್ಲಿದೆ.
ಹೆಚ್ಚಿನ ಸ್ಟೋರಿಗಳ ಲಿಂಕ್ ಇಲ್ಲಿದೆ: Narendra Modi: ಮೋದಿ ಉದ್ಘಾಟಿಸಲಿರುವ ಎಚ್‌ಎಎಲ್ ಘಟಕದ ವಿಶೇಷತೆ ಏನು?
Narendra modi: ಪ್ರಧಾನಿ ಕಾರ್ಯಕ್ರಮ, ಹೇಗಿದೆ ವೇದಿಕೆ ಭದ್ರತೆ?
Narendra Modi: ಇಂದು ಪ್ರಧಾನಿ ಮೋದಿ ಬೆಂಗಳೂರು, ತುಮಕೂರಿಗೆ ಭೇಟಿ; ಕಾರ್ಯಕ್ರಮಗಳ ವೇಳಾಪಟ್ಟಿ ಹೀಗಿದೆ
PM Modi Karnataka Visit Live: ಎಥೆನಾಲ್ ಉದ್ಯಮದಲ್ಲಿ ಕೂಡ ಕರ್ನಾಟಕ ಮುಂದಿದೆ
ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ, ಐದು ಕೋಟಿ ರೂಪಾಯಿಗಿಂತಲೂ ಹೆಚ್ಚು ಹೂಡಿಕೆಯನ್ನು ನವೀಕರಿಸಬಹುದಾದ ಹಾಗೂ ಹಸಿರು ಇಂಧನ ಕ್ಷೇತ್ರಕ್ಕೆ ನಿರೀಕ್ಷಿಸಲಾಗಿದೆ. ಕರ್ನಾಟಕದಲ್ಲಿ ಅತಿ ಹೆಚ್ಚು ವಿದ್ಯುತ್ ಚಾಲಿತ ವಾಹನಗಳಿವೆ. ಅದಕ್ಕಾಗಿಗೇ ಇವಿ ನೀತಿಯನ್ನು ರೂಪಿಸಿದ್ದೇವೆ. ಜೈವಿಕ ಇಂಧನ ಕ್ಷೇತ್ರದಲ್ಲೂ ಕರ್ನಾಟಕ ಮುಂದಿದೆ. ಅತಿ ಹೆಚ್ಚು ಸಕ್ಕರೆ ಕಾರ್ಖಾನೆಗಳಿರುವುದರಿಂದ ಎಥೆನಾಲ್ ಉದ್ಯಮದಲ್ಲಿ ಮುಂದಿದ್ದೇವೆ. ಕರ್ನಾಟಕದ ಉದ್ಯಮಿ ವಿಜಯ್ ನಿರಾಣಿಯವರು ಸಕ್ಕರೆ ಕಾರ್ಖಾನೆ ಮೂಲಕ ಅತಿ ಹೆಚ್ಚು ಎಥೆನಾಲ್ ಉತ್ಪಾದನೆ ಮಾಡುತ್ತಿದ್ದಾರೆ. 2025ರ ವೇಳೆಗೆ 25% ಎಥೆನಾಲ್ ಮಿಶ್ರಣದತ್ತ ಸಾಗುತ್ತಿದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
PM Modi Karnataka Visit Live: ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿ
ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಇಂಧನ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ಮಾಡಿದ್ದರು. ಅದೇ ಅನುಭವದ ಆಧಾರದಲ್ಲಿ ದೇಶದ ಇಂಧನ ಕ್ಷೇತ್ರದಲ್ಲೂ ಸ್ಥಿತ್ಯಂತರ ಮಾಡಿದ್ದಾರೆ. ಶೂನ್ಯ ಮಾಲಿನ್ಯದ ಕಡೆಗೆ ಪ್ರಧಾನಿಯವರ ಬದ್ಧತೆಯು ವ್ಯಕ್ತವಾಗುತ್ತಿದೆ. ಈ ಬದಲಾವಣೆಯಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ. ಕರ್ನಾಟಕವು ಅತಿ ಹೆಚ್ಚು ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ಮೊದಲ ರಾಜ್ಯವಾಗಿದೆ. ನಮ್ಮ ಅಗತ್ಯತೆಯ ಶೇ.50 ವಿದ್ಯುತ್ತನ್ನು ನವೀಕರಿಸಬಹುದಾದ ಇಂಧನದಿಂದ ಪಡೆಯುತ್ತಿದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
PM Modi Karnataka Visit Live: ಸಿಎಂ ಬಸವರಾಜ ಬೊಮ್ಮಾಯಿಯವರಿಂದ ಭಾಷಣ
ಬಿಐಇಸಿಯಲ್ಲಿ ಕಾರ್ಯಕ್ರಮ ಪ್ರಾರಂಭವಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೊದಲಿಗೆ ಭಾಷಣ ಮಾಡಿ, ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಸಲ್ಲಿಸಿದರು.
PM Modi Karnataka Visit Live: ಕಡಿಮೆ ದರದಲ್ಲಿ ಇಂಧನ ಸಿಗುವಂತೆ ಮಾಡುವುದು ಗುರಿ
ಭಾರತದಲ್ಲಿ ದಿನವೊಂದಕ್ಕೆ 6 ಕೋಟಿ ಜನರು ಪೆಟ್ರೋಲ್ ಪಂಪ್‌ಗಳಿಗೆ ಭೇಟಿ ನೀಡುತ್ತಾರೆ. ಜಾಗತಿಕ ಏರಿಳಿತಗಳನ್ನು ಲೆಕ್ಕಿಸದೆ, ಇಂಧನ ದರದಿಂದ ಜನಸಾಮಾನ್ಯರಿಗೆ ಆಗುವ ತೊಂದರೆಯನ್ನು ಕಡಿಮೆ ಮಾಡಬೇಕಿದೆ. ಕಡಿಮೆ ದರದಲ್ಲಿ ಇಂಧನ ಸಿಗುವಂತೆ ಮಾಡುವುದು ನಮ್ಮ ಗುರಿ. ಮಾಲಿನ್ಯವನ್ನು 2030ರ ವೇಳೆಗೆ ಅತ್ಯಂತ ಕಡಿಮೆ ಮಾಡುವ ಗುರಿಯತ್ತ ನಮ್ಮ ಸರ್ಕಾರ ಸಾಗಿದೆ.
ಇದು ಭಾರತದ ಮೊದಲ ಸಮಗ್ರ ಇಂಧನ ಕಾರ್ಯಕ್ರಮ
ಪೆಟ್ರೋಲಿಯಂ ಮತ್ತು ಇಂಧನ ಸಚಿವ ಹರ್ದೀಪ್ ಸಿಂಗ್ ಪುರಿ ಮಾತನಾಡಿ, ’ಇದು ಭಾರತದ ಮೊಟ್ಟ ಮೊದಲ ಸಮಗ್ರ ಇಂಧನ ಕಾರ್ಯಕ್ರಮ. ಎಲ್ಲ ರೀತಿಯ ಇಂಧನ ರೀತಿಗಳನ್ನೂ ಒಳಗೊಂಡಿರುವ ಈ ಕಾರ್ಯಕ್ರಮವು ಮುಂಬರುವ ಜಿ20 ಸಮ್ಮೇಳನದ ಪ್ರಮುಖ ಭಾಗವಾಗಿದೆ.
ಭಾರತದ ಇಂಧನ ಭದ್ರತೆಯನ್ನು ಅಮೃತ ಕಾಲದಲ್ಲಿ ಕಾಪಾಡುತ್ತದೆ. 21ನೇ ಶತಮಾನದ ಜಾಗತಿಕ ಆರ್ಥಿಕತೆಯಲ್ಲಿ ಭಾರತದ ಶಕ್ತಿಯನ್ನು ತೋರ್ಪಡಿಸಲು ಬಹುಮುಖ್ಯವಾಗುತ್ತದೆ ಎಂದು ಹೇಳಿದರು.