Site icon Vistara News

PM Modi Karnataka Visit Live: ಯುವ ಪ್ರತಿಭೆ, ಅನ್ವೇಷಣೆಯ ನಾಡು ಕರ್ನಾಟಕ ಎಂದ ಪ್ರಧಾನಿ ಮೋದಿ

Gubbi HAL

#image_title

ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi)ಯವರು ಇಂದು ಕರ್ನಾಟಕಕ್ಕೆ ಆಗಮಿಸಿದ್ದಾರೆ. ಕರ್ನಾಟಕದಲ್ಲಿ ಮಾರ್ಚ್​​ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಇಲ್ಲಿಗೆ ಸರಣಿ ಭೇಟಿ ನೀಡುತ್ತಿದ್ದಾರೆ. ಇಂದು ದೆಹಲಿಯಿಂದ ಬೆಂಗಳೂರಿಗೆ ವಿಶೇಷ ವಿಮಾನದ ಮೂಲಕ ಆಗಮಿಸಿದ ಅವರು ಎಚ್​ಎಎಲ್​​ನಲ್ಲಿ ಇಳಿದಿದ್ದಾರೆ. ಬೆಂಗಳೂರಿನಲ್ಲಿ ಅವರು ಎರಡು ಕಾರ್ಯಕ್ರಮಗಳನ್ನು ಉದ್ಘಾಟಿಸುವರು. ಮಧ್ಯಾಹ್ನ ತುಮಕೂರಿಗೆ ತೆರಳಲಿದ್ದಾರೆ. ಗುಬ್ಬಿ ತಾಲೂಕಿನಲ್ಲಿ ಎಚ್‌ಎಎಲ್‌ ಹೆಲಿಕಾಪ್ಟರ್‌ ಉತ್ಪಾದನಾ ಘಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಅಲ್ಲಿಂದ ಮಧ್ಯಾಹ್ನ 5.25ಕ್ಕೆ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವರು. ಇಂದಿನ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು-ತುಮಕೂರು ಭೇಟಿಯ ಕ್ಷಣಕ್ಷಣದ ಮಾಹಿತಿ ಇಲ್ಲಿದೆ.

ಹೆಚ್ಚಿನ ಸ್ಟೋರಿಗಳ ಲಿಂಕ್​ ಇಲ್ಲಿದೆ: Narendra Modi: ಮೋದಿ ಉದ್ಘಾಟಿಸಲಿರುವ ಎಚ್‌ಎಎಲ್‌ ಘಟಕದ ವಿಶೇಷತೆ ಏನು?
Narendra modi: ಪ್ರಧಾನಿ ಕಾರ್ಯಕ್ರಮ, ಹೇಗಿದೆ ವೇದಿಕೆ ಭದ್ರತೆ?
Narendra Modi: ಇಂದು ಪ್ರಧಾನಿ ಮೋದಿ ಬೆಂಗಳೂರು, ತುಮಕೂರಿಗೆ ಭೇಟಿ; ಕಾರ್ಯಕ್ರಮಗಳ ವೇಳಾಪಟ್ಟಿ ಹೀಗಿದೆ


Lakshmi Hegde

PM Modi Karnataka Visit Live: ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ ಮೋದಿಗೆ ಸ್ವಾಗತ

ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಪಾಲ ಥಾವರ್​ಚಂದ್ ಗೆಹ್ಲೋಟ್​ ಸ್ವಾಗತ ಕೋರಿದರು.

Lakshmi Hegde

PM Modi Karnataka Visit Live: ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರಕ್ಕೆ ಪ್ರಧಾನಿ ಮೋದಿ ಆಗಮನ

ಬೆಂಗಳೂರಿನ ಎಚ್​ಎಎಲ್​​ನಿಂದ ಮಾದಾವರದಲ್ಲಿರುವ ಬಿಐಇಸಿ (ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ)ಕ್ಕೆ ಸೇನಾ ಹೆಲಿಕಾಪ್ಟರ್​ ಮೂಲಕ ಪ್ರಧಾನಿ ಮೋದಿ ಆಗಮಿಸಿದರು. ಇಲ್ಲಿ ಅವರು ಭಾರತ ಇಂಧನ ಸಪ್ತಾಪ-2023 ಉದ್ಘಾಟನೆ ಮಾಡಲಿದ್ದಾರೆ.

Lakshmi Hegde

ಎಚ್​ಎಎಲ್​​ನಿಂದ ಸೇನಾ ಹೆಲಿಕಾಪ್ಟರ್​ ಮೂಲಕ, ಮಾದಾವರದಲ್ಲಿರುವ ಬಿಐಇಸಿಗೆ ತೆರಳುತ್ತಿದ್ದಾರೆ ಪ್ರಧಾನಿ ನರೇಂದ್ರ ಮೋದಿ

Lakshmi Hegde

ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದತ್ತ ಪ್ರಧಾನಿ ನರೇಂದ್ರ ಮೋದಿ

ಎಚ್​ಎಎಲ್​ ವಿಮಾನ ನಿಲ್ದಾಣದಿಂದ ಪ್ರಧಾನಿ ನರೇಂದ್ರ ಮೋದಿಯವರು ಸೇನಾ ಹೆಲಿಕಾಪ್ಟರ್​ ಮೂಲಕ ಬಿಐಇಸಿ(ಬೆಂಗಳೂರು ಅಂತರಾಷ್ಟ್ರೀಯ ಪ್ರದರ್ಶನ ಕೇಂದ್ರ)ಗೆ ಹೊರಟಿದ್ದಾರೆ. ಅಲ್ಲಿ ‘ಭಾರತ ಇಂಧನ ಸಪ್ತಾಹ-2023‘ನ್ನು ಉದ್ಘಾಟನೆ ಮಾಡಲಿದ್ದಾರೆ.

Exit mobile version