ಬೆಂಗಳೂರು: 23 ಡಿವೈಎಸ್‌ಪಿ ಹಾಗೂ 103 ಸಬ್ ಇನ್ಸ್‌ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿ ಪೊಲೀಸ್ ಇಲಾಖೆ (Police Department) ಆದೇಶ ಹೊರಡಿಸಿದೆ. ತಕ್ಷಣದಿಂದ ಜಾರಿಗೆ ಬರುವಂತೆ ಪೊಲೀಸ್ ಅಧಿಕಾರಿಗಳನ್ನು ಆಯಾ ಸ್ಥಳಗಳಿಗೆ ವರ್ಗಾವಣೆ ಮಾಡಬೇಕು ಎಂದು ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್ ನಿರ್ದೇಶನದಂತೆ ಉಮೇಶ್ ಕುಮಾರ್ (ಐಪಿಎಸ್) ಆದೇಶ ಹೊರಡಿಸಿದ್ದಾರೆ.
ಡಿವೈಎಸ್‌ಪಿಗಳಾದ ಎಚ್. ಗಿರಿಮಲ್ಲ ತಳಕಟ್ಟಿ, ದೂದ್‌ಪೀರ್ ಎಚ್. ಮುಲ್ಲಾ, ಟಿ.ಮಹದೇವ, ಬಿ.ಎಂ.ಗಂಗಾಧರ್, ಅರುಣ್ ಕುಮಾರ್ ಕೋಲೂರು, ಪರಮೇಶ್ವರ ಹೆಗಡೆ ಸೇರಿ 23 ಅಧಿಕಾರಿಗಳು ಹಾಗೂ ಸಬ್ ಇನ್ಸ್‌ಪೆಕ್ಟರ್‌ಗಳಾದ ದೇವೇಂದ್ರಪ್ಪ ಡಿ.ದುಳಕೇಡ್, ಬಸವರಾಜ ಎ.ಕಾಮನಬೈಲು, ಸುರೇಶ್ ಎಚ್. ಯಳ್ಳೂರು, ಜಿ.ಎನ್. ರಮೇಶ್, ಎನ್.ಜಿ.ಕೃಷ್ಣಪ್ಪ ಸೇರಿ 103 ಸಬ್ ಇನ್ಸ್‌ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಲಾಗಿದೆ.
ಇದನ್ನೂ ಓದಿ | Employment Generation : 18,567 ಜನರಿಗೆ ಉದ್ಯೋಗ ಕೊಡುವ ಬೃಹತ್ ಹೂಡಿಕೆಗೆ ರಾಜ್ಯ ಸರ್ಕಾರ ಸಮ್ಮತಿ
ಸಂಬಂಧಪಟ್ಟ ಅಧಿಕಾರಿಗಳು ವರ್ಗಾವಣೆಗೊಂಡ ಅಧಿಕಾರಿಗಳನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ, ವರ್ಗಾಯಿಸಲಾದ ಸ್ಥಳದ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವಂತೆ ಸೂಚಿಸುವುದು, ಬಿಡುಗಡೆಗೊಂಡ ಮತ್ತು ವರದಿ ಮಾಡಿದ ಬಗ್ಗೆ ಪೊಲೀಸ್ ಪ್ರಧಾನ ಕಚೇರಿಗೆ ಪಾಲನಾ ವರದಿ ಸಲ್ಲಿಸಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.
ವರ್ಗಾವಣೆಗೊಂಡ ಡಿವೈಎಸ್‌ಪಿಗಳ ವಿವರ ಇಲ್ಲಿದೆ.
ವರ್ಗಾವಣೆಗೊಂಡ ಸಬ್ ಇನ್ಸ್‌ಪೆಕ್ಟರ್‌ಗಳ ಮಾಹಿತಿ ಇಲ್ಲಿದೆ.