ಮಂಗಳೂರು: ಕದ್ರಿ ಮಂಜುನಾಥೇಶ್ವರ ದೇವಸ್ಥಾನದ ಆವರಣ (Kadri Manjunath Temple) ಪ್ರವೇಶಿಸಿದ ಅನ್ಯ ಧರ್ಮದ ಮೂವರು ಯುವಕರನ್ನು ಪೊಲೀಸರು ಗುರುವಾರ ರಾತ್ರಿ ವಶಕ್ಕೆ ಪಡೆದಿದ್ದಾರೆ. ಕದ್ರಿ ಕ್ಷೇತ್ರದಲ್ಲಿ ಬಾಂಬ್ ಸ್ಫೋಟದ ಬೆದರಿಕೆ ಇದ್ದ ಹಿನ್ನೆಲೆಯಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಮೂವರು ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೈಕ್‌ನಲ್ಲಿ ಬಂದಿದ್ದ ಮೂವರು ಯುವಕರು, ಕಾಟಿಪಳ್ಳ ಎಂಬಲ್ಲಿಗೆ ಹೋಗಲು ಬಂದಿರುವುದಾಗಿ ವಿಚಾರಣೆ ವೇಳೆ ಮಾಹಿತಿ ನೀಡಿದ್ದಾರೆ. ಆದರೆ, ಚಪ್ಪಲಿ ಹಾಕಿಕೊಂಡೇ ದೇವಸ್ಥಾನದ ಆವರಣ ಪ್ರವೇಶ ಮಾಡಿದ್ದರಿಂದ ಹಿಂದುಪರ ಸಂಘಟನೆ ಕಾರ್ಯಕರ್ತರು ಅವರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಸ್ಥಳೀಯ ಭಾಷೆ ಮಾತನಾಡುತ್ತಿದ್ದ ಯುವಕರು, ಗೂಗಲ್ ಮ್ಯಾಪ್ ಹಾಕಿ ದಾರಿ ತಪ್ಪಿ ಬಂದಿರುವುದಾಗಿ ತಿಳಿಸಿದ್ದು, ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.