ಶಿವಮೊಗ್ಗ: ತುಂಗಾ ನದಿಯಲ್ಲಿ ಪೊಲೀಸರು ಸೋಮವಾರ ರಾತ್ರಿ ದಿಢೀರ್ ಶೋಧ ಕಾರ್ಯಾಚರಣೆ ನಡೆಸಿದರು. ಇದನ್ನು ನೋಡುವ ಕುತೂಹಲದಿಂದ ಸೇತುವೆ ಮೇಲೆ ನೂರಾರು ಜನ ಸೇರಿದ್ದರು.
ಸೇತುವೆ ಮಾರ್ಗದಲ್ಲಿ ಸರಗಳ್ಳತನ ಮಾಡಿ ಇಬ್ಬರು ಬೈಕ್‌ನಲ್ಲಿ ಬರುತ್ತಿದ್ದುದನ್ನು ಗಮನಿಸಿದ ಜನರು ಕಳ್ಳ ಕಳ್ಳ ಎಂದು ಕಿರುಚಿದ್ದರು. ಈ ವೇಳೆ ಅಲ್ಲಿದ್ದ ಕೆಲವರು ಕಳ್ಳರನ್ನು ಬೆನ್ನಟ್ಟಿದರು. ಹೊಳೆ ಬಸ್ಸ್ಟಾಪ್ ಮೂಲಕ ಸೇತುವೆ ದಾಟಲು ಬಂದ ಸರಗಳ್ಳರು ಜನರನ್ನು ನೋಡಿ ಹೆದರಿ ಗುಂಡಪ್ಪಶೆಡ್ ಕಡೆಗೆ ಬೈಕ್ ತಿರುಗಿಸಿದರು. ಈ ವೇಳೆ ಅಡ್ಡಗಟ್ಟಿದ ಜನರು ಬೈಕ್ ಬೀಳಿಸಿ ಆರೋಪಿಗಳನ್ನ ಹಿಡಿಯಲು ಯತ್ನಿಸಿದರು. ಈ ವೇಳೆ ಆರೋಪಿಗಳಲ್ಲಿ ಒಬ್ಬ ರೈಲ್ವೆ ಬ್ರಿಡ್ಜ್ ಮೇಲೆ ಓಡಿದ್ದು, ಮತ್ತೊಬ್ಬ ಬೆಕ್ಕಿನ ಕಲ್ಮಠದ ಬಳಿ ಹೊಳೆಗೆ ಇಳಿದಿದ್ದಾನೆ.
ರೈಲ್ವೆ ಬ್ರಿಡ್ಜ್ ಮೇಲೆ ಹೋದ ಆರೋಪಿಯನ್ನು ಇನ್ನೊಂದು ಕಡೆಯಿಂದ ಸುತ್ತುವರಿದ ಜನರು ಹಿಡಿದು ಪೋಲೀಸರಿಗೆ ಒಪ್ಪಿಸಿದ್ದಾರೆ. ಹೊಳೆಗೆ ಇಳಿದವನ ಬಗ್ಗೆ ಸುಳಿವು ಸಿಗದೇ ಪೊಲೀಸರು ಹುಡುಕಾಡಲು ಆರಂಭಿಸಿದರು. ಕತ್ತಲಲ್ಲಿ ನಿರಂತರವಾಗಿ ಬ್ಯಾಟರಿ ಬಿಟ್ಟು ಹುಡುಕಿದರೂ ಆರೋಪಿ ಸಿಗದ ಕಾರಣ ಪೊಲೀಸರು ವಾಪಸಾದರು.
ಇದನ್ನೂ ಓದಿ | Cyber Crime | ಲಕ್ಷ ಹಣ ಕಳೆದುಕೊಂಡ ಬಿಎಸ್‌ಎಫ್ ಯೋಧ