ಗಂಗಾವತಿ: ಇಸ್ಪೀಟ್ ಜೂಜಾಟದಲ್ಲಿ (Ispeet Gambling) ತೊಡಗಿರುವ ಖಚಿತ ಮಾಹಿತಿ ಮೇರೆಗೆ ಗಂಗಾವತಿ ಗ್ರಾಮೀಣ ಠಾಣಾ ಪೊಲೀಸರು, ಆನೆಗೊಂದಿ ಸಮೀಪದ ತಿರುಮಲಾಪುರದ ಬಳಿ ದಾಳಿ ಮಾಡಿ ಏಳು ಜನ ಆರೋಪಿಗಳನ್ನು ಬಂಧಿಸಿ (7 Accused arrested) ಅವರಿಂದ 15.31 ಲಕ್ಷ (15.31 lakhs seized) ಮೊತ್ತದ ಹಣ ವಶಕ್ಕೆ ಪಡೆದಿದ್ದಾರೆ.
ತಿರುಮಲಾಪುರದ ರೆಸ್ಟೋರೆಂಟ್ ಒಂದರ ಬಳಿಯ ಬೆಟ್ಟದ ಸಮೀಪ ದೊಡ್ಡ ಪ್ರಮಾಣದಲ್ಲಿ ಜೂಜಾಟ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದ ಹಿನ್ನಲೆ ಗ್ರಾಮೀಣ ಪಿಐ ಮಂಜುನಾಥ ನೇತೃತ್ವದಲ್ಲಿ ಪೊಲೀಸರು, ದಾಳಿ ಮಾಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಸ್ಕಿಯ ಅಂತರಗಂಗೆಯ ಅಮರಗುಂಡಪ್ಪ ಗೋಮರ್ಸಿ, ಮಸ್ಕಿಯ ಅಡಿವೆಪ್ಪ ವಾಲ್ಮೀಕಿ, ಹಂಪನಾಳದ ಬೀರಪ್ಪ ಹೊಸಳ್ಳಿ, ಮುಂಡರಗಿಯ ನಾಗರಾಜ ಕೋಳಿ, ಮಸ್ಕಿಯ ಹಾಲಾಪುರದ ವೀರೇಶ ಹಾದಿಮನಿ, ಚಿತ್ರದುರ್ಗ ಜಿಲ್ಲೆಯ ಬುರಜನಹಟ್ಟಿಯ ಚಂದ್ರಶೇಖರ ಕುರುಬರ್, ಕೊಟ್ಟೂರಿನ ಕೊಟ್ರೇಶ ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: Students death : 9ನೇ ಕ್ಲಾಸ್ ವಿದ್ಯಾರ್ಥಿ ನೇಣಿಗೆ ಶರಣು, ಹಾರಂಗಿ ನಾಲೆಗೆ ಏಡಿ ಹಿಡಿಯಲು ಹೋದ ಬಾಲಕ ಕಣ್ಮರೆ
ಚಿತ್ರದುರ್ಗ ಮೂಲದ ಚಂದ್ರಶೇಖರ ಎಂಬ ಒಬ್ಬ ವ್ಯಕ್ತಿಯ ಬಳಿಯೇ 14.50 ಲಕ್ಷ ಮೊತ್ತದ ನಗದು ಹಣ ವಶಕ್ಕೆ ಪಡೆಯಲಾಗಿದೆ. ಉಳಿದಂತೆ ಇತರೆ ಜೂಜುಕೋರರಿಂದ ಸೇರಿ ಒಟ್ಟು 15.31 ಲಕ್ಷ ಮೊತ್ತದ ಹಣ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Gold Rate Today: ಚಿನ್ನದ ಬೆಲೆಯಲ್ಲಿ ₹10 ಏರಿಕೆ, ಇಂದು ಇಷ್ಟಾಗಿದೆ ಬೆಲೆ
ಜೂಜಾಟಕ್ಕೆ ಬಳಸಲಾಗುತ್ತಿದ್ದ ಟೊಯೊಟಾ ಇತಿಯೋಸ್ ಕಂಪನಿಯ ನಾಲ್ಕು ಲಕ್ಷ ಮೌಲ್ಯದ ಒಂದು ಕಾರು ಜಪ್ತಿ ಮಾಡಲಾಗಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಂಗದ ವಶಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.