Site icon Vistara News

Police Transfer: ಬೆಂಗಳೂರು ನಗರ ಪೊಲೀಸ್‌ ಕಮೀಷನರೇಟ್‌ ವ್ಯಾಪ್ತಿಯ 218 ಪಿಎಸ್‌ಐಗಳ ವರ್ಗಾವಣೆ

PSI Training 1

ಬೆಂಗಳೂರು: ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿ ವ್ಯಾಪ್ತಿಯ 218 ಪಿಎಸ್‌ಐಗಳನ್ನು ವರ್ಗಾವಣೆ ಮಾಡಿ ಪೊಲೀಸ್‌ ಇಲಾಖೆ ಆದೇಶ ಹೊರಡಿಸಿದೆ. ಆಡಳಿತಾತ್ಮಕ ದೃಷ್ಟಿಯಿಂದ ಬೆಂಗಳೂರು ನಗರ ವ್ಯಾಪ್ತಿಯ ವಿವಿಧ ಠಾಣೆಗಳಿಗೆ ಸಬ್‌ ಇನ್‌ಸ್ಪೆಕ್ಟರ್‌ಗಳನ್ನು (Police Transfer) ವರ್ಗಾವಣೆ ಮಾಡಲಾಗಿದೆ.

ಈ ಬಗ್ಗೆ ನಗರ ಪೊಲೀಸ್‌ ಆಯುಕ್ತರ ಪರವಾಗಿ ಐಪಿಎಸ್‌ ಅಧಿಕಾರಿ ರಮನ್‌ ಗುಪ್ತಾ ಅವರು ಆದೇಶ ಹೊರಡಿಸಿದ್ದು, ಸಂಬಂಧಪಟ್ಟ ಘಟಕಾಧಿಗಳು ವರ್ಗಾವಣೆಗೊಂಡ ಪಿಎಸ್‌ಐಗಳನ್ನು ಕೂಡಲೇ ಕರ್ತವ್ಯದಿಂದ ಬಿಡುಗಡೆಗೊಳಿಸಿ, ನಿಯುಕ್ತಿಗೊಳಿಸಿರುವ ಸ್ಥಳಗಳಿಗೆ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಸೂಚಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಶಿವಪ್ಪ ಎಂ.ನಾಯ್ಕರ್‌-ರಾಮಮೂರ್ತಿನಗರ ಠಾಣೆ, ಶಿವಪ್ಪ -ವೈಟ್‌ಫೀಲ್ಡ್‌ ಠಾಣೆ, ರಮಾದೇವಿ ಬಿ.ಎಸ್‌.ಮಹದೇವಪುರ ಠಾಣೆ, ಮೂರ್ತಿ- ಮಲ್ಲೇಶ್ವರಂ ಠಾಣೆ, ಪ್ರಭುಗೌಡ ಎಸ್‌. ಪಾಟೀಲ್‌-ಆಡುಗೋಡಿ ಸಂಚಾರ ಠಾಣೆ, ವಿನೂತ್‌ ಎಚ್‌.ಎಂ.-ಬಸವನಗುಡಿ ಠಾಣೆ, ಶ್ರೀನಿವಾಸ್‌ ಪ್ರಸಾದ್- ಹುಳಿಮಾವು ಠಾಣೆಗೆ ಸೇರಿ 218 ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಲಾಗಿದೆ.

ಇದನ್ನೂ ಓದಿ | Job Alert: ಎನ್‌ಸಿಇಆರ್‌ಟಿಯ 170 ಹುದ್ದೆಗಳಿಗೆ ನೇರ ಸಂದರ್ಶನ; ಪದವಿ ಹೊಂದಿದವರಿಗೆ ಅವಕಾಶ

33 ಡಿವೈಎಸ್ಪಿಗಳು, 132 ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ; ಹೊಸದಾಗಿ ಸೃಜಿಸಿದ ಹುದ್ದೆಗಳಿಗೂ ನೇಮಕ

PSI Training

ಬೆಂಗಳೂರು: ಪೊಲೀಸ್ ಇಲಾಖೆಗೆ ರಾಜ್ಯ ಸರ್ಕಾರ ಸರ್ಜರಿ ಮಾಡಿದ್ದು, 33 ಡಿವೈಎಸ್ಪಿಗಳು ಹಾಗೂ 132 ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿದೆ. ಇದೇ ವೇಳೆ ಒಬ್ಬ ಡಿವೈಎಸ್‌ಪಿ ವರ್ಗಾವಣೆಯನ್ನು ರದ್ದುಗೊಳಿಸಲಾಗಿದೆ. ಪೊಲೀಸ್‌ ಸಿಬ್ಬಂದಿ ಮಂಡಳಿಯ ಸಭೆಯ ನಿರ್ಣಯದಂತೆ ಪೊಲೀಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದ್ದು, ಹೊಸದಾಗಿ ಸೃಜನೆಯಾದ ಹುದ್ದೆಗಳಿಗೂ ಇನ್‌ಸ್ಪೆಕ್ಟರ್‌ಗಳನ್ನು ನೇಮಕ ಮಾಡಲಾಗಿದೆ.

ಈ ಬಗ್ಗೆ ಪೊಲೀಸ್‌ ಇಲಾಖೆ ಆದೇಶ ಹೊರಡಿಸಿದ್ದು, ಸಂಬಂಧಪಟ್ಟ ಘಟಕಾಧಿಕಾರಿಗಳು, ವರ್ಗಾವಣೆಗೊಂಡ ಅಧಿಕಾರಿಗಳನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ, ವರ್ಗಾಯಿಸಲಾದ ಸ್ಥಳದಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವಂತೆ ಸೂಚಿಸುವಂತೆ ತಿಳಿಸಲಾಗಿದೆ.

ಯು.ಡಿ. ಕೃಷ್ಣಕುಮಾರ್ (ಡಿವೈಎಸ್​ಪಿ, ಬಿಡಿಎ), ಟಿ.ಎಂ.ಶಿವಕುಮಾರ್ (ಎಸಿಪಿ, ಮಡಿವಾಳ ಉಪವಿಭಾಗ), ಎಚ್.ಬಿ.ರಮೇಶ್ ಕುಮಾರ್‌ (ಎಸಿಪಿ, ವಿವಿ ಪುರಂ ಉಪವಿಭಾಗ), ಎಂ.ಎನ್.ನಾಗರಾಜ್ (ಎಸಿಪಿ, ಸಿಸಿಬಿ ಬೆಂಗಳೂರು) ಅನುಷಾರಾಣಿ (ಎಸಿಪಿ, ಡಿಸಿಆರ್​ಇ, ಮೈಸೂರು) ಸೇರಿದಂತೆ ಒಟ್ಟು 33 ಡಿವೈಎಸ್‌ಪಿಗಳನ್ನು ವರ್ಗಾವಣೆ ಮಾಡಲಾಗಿದೆ.

ಇನ್‌ಸ್ಪೆಕ್ಟರ್‌ ಸ್ವರ್ಣ ಜಿ.ಎಸ್‌. (ಆಲನಹಳ್ಳಿ ಪೊಲೀಸ್‌ ಠಾಣೆ, ಮೈಸೂರು), ಇನ್‌ಸ್ಪೆಕ್ಟರ್ ರವಿಕಿರಣ್ (ಸಂಪಂಗಿರಾಮನಗರ ಪೊಲೀಸ್​ ಠಾಣೆ), ಮಂಜುನಾಥ್ ಜಿ ಹೂಗಾರ್ (ಕುಂಬಳಗೋಡು ಠಾಣೆ), ನರೇಂದ್ರ ಬಾಬು (ಕಾಟನ್​ಪೇಟೆ ಪೊಲೀಸ್ ಠಾಣೆ), ಸಂತೋಷ್ ಕೆ (ಹಲಸೂರು ಪೊಲೀಸ್ ಠಾಣೆ), ದೀಪಕ್ ಆರ್ (ಜಯನಗರ ಪೊಲೀಸ್ ಠಾಣೆ) ಸೇರಿ ಒಟ್ಟು 132 ಇನ್‌ಸ್ಪೆಕ್ಟರ್​ಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಇದನ್ನೂ ಓದಿ | Job Alert: ಎನ್‌ಟಿಪಿಸಿಯ 223 ಸಹಾಯಕ ಕಾರ್ಯನಿರ್ವಾಹಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ

ವರ್ಗಾವಣೆ ಆದೇಶ ರದ್ದು

ಡಿವೈಎಸ್‌ಪಿ ನೀಲಪ್ಪ ಮಲ್ಲಪ್ಪ ಓಲೇಕಾರ್‌ ಅವರನ್ನು ಕರ್ನಾಟಕ ಲೋಕಾಯುಕ್ತದಿಂದ ಖಾನಾಪುರ ಪಿಟಿಎಸ್‌ಗೆ ವರ್ಗಾವಣೆ ಮಾಡಲಾಗಿತ್ತು. ಆದರೆ, ಅವರ ವರ್ಗಾವಣೆಯನ್ನು ರದ್ದುಗೊಳಿಸಿದ್ದು, ಅವರಿಗೆ ಲೋಕಾಯುಕ್ತದಲ್ಲೇ ಮುಂದುವರಿಯಲು ಸೂಚಿಸಲಾಗಿದೆ.

Exit mobile version