ವಿಜಯಪುರ: ಇಲ್ಲಿನ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದ ವಾರ್ಡ್ ನಂ. 15ರ ಇಂದ್ರಾ ನಗರದ ಅಂಗನವಾಡಿಯಲ್ಲಿ ಕಳಪೆ ಆಹಾರವನ್ನು (Poor Food Supply) ಪೂರೈಕೆ ಮಾಡಲಾಗುತ್ತಿದೆ. 6 ತಿಂಗಳಿನಿಂದ 3 ವರ್ಷದ ಒಳಗಿನ ಮಕ್ಕಳಿಗೆ ಉಚಿತವಾಗಿ ಪೂರೈಕೆ ಆಗುವ ಬಹುಧಾನ್ಯ ಪುಡಿ ಮಿಶ್ರಿತ ಪುಷ್ಟಿ ಆಹಾರದಲ್ಲಿ ಹುಳುಗಳು ಪತ್ತೆ ಆಗಿವೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ನೀಡಲಾಗುವ ಪುಷ್ಟಿ ಆಹಾರ ಪ್ಯಾಕೆಟ್‌ನಲ್ಲಿ ಹುಳುಗಳು ಪತ್ತೆ ಆಗಿದ್ದು, ಜನರು ಆಕ್ರೋಶ ಹೊರಹಾಕಿದ್ದಾರೆ. ರಾಜ್ಯದಲ್ಲಿ ಅಪಾರ ಸಂಖ್ಯೆಯಲ್ಲಿ ಮಕ್ಕಳಲ್ಲಿ ಅಪೌಷ್ಟಿಕತೆ ಕಂಡು ಬಂದ ಹಿನ್ನೆಲೆ ಸರ್ಕಾರವು ಯೋಜನೆ ರೂಪಿಸಿತ್ತು.
ಅಂಗನವಾಡಿಗಳಲ್ಲಿ ವಾರದ ಐದು ದಿನ ಪುಷ್ಟಿ ಆಹಾರ ವಿತರಣೆ ಮಾಡಲಾಗುತ್ತಿತ್ತು. ಆದರೆ ಮಕ್ಕಳಲ್ಲಿ ಅಪೌಷ್ಟಿಕತೆ ದೂರವಾಗಲು ನೀಡುವ ಪುಷ್ಟಿ ಆಹಾರದಲ್ಲಿ ಹುಳುಗಳು ಪತ್ತೆ ಆಗಿದ್ದು, ಅನಾರೋಗ್ಯ ತಂದೊಡ್ಡುವಂತಾಗಿದೆ.
ಇದನ್ನೂ ಓದಿ | ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಮಾಡಿ ವಾಪಸ್ ಬರುತ್ತಿದ್ದಾಗ ಅಪಘಾತ; 8 ಯಾತ್ರಾರ್ಥಿಗಳ ಸಾವು