ಕೋಲಾರ: ರಾಜ್ಯದಲ್ಲಿ ಆಗಾಗ ನಕಲಿ ಬಿತ್ತನೆ ಬೀಜ, ಕಳಪೆ ಬಿತ್ತನೆ ಬೀಜ ಮಾರಾಟಗಾರರ ಹಾವಳಿಯಿಂದ ರೈತರಿಗೆ ನಷ್ಟವಾಗಿರುವ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇರುತ್ತವೆ. ಈಗ ಕೋಲಾರ ತಾಲೂಕಿನ ಕಮ್ಮಸಂದ್ರದಲ್ಲಿಯೂ ರೈತರೊಬ್ಬರಿಗೆ ಕಂಪನಿಯೊಂದು ಕಳಪೆ ಬಿತ್ತನೆ ಬೀಜವನ್ನು (Sowing Seed) ಪೂರೈಕೆ ಮಾಡಿದ್ದು, ಬೆಳೆಯೇ ಬಾರದೆ ರೈತ ನಷ್ಟ ಅನುಭವಿಸಿದ್ದಾರೆ.
ಕಮ್ಮಸಂದ್ರ ಗ್ರಾಮದ ವೆಂಕಟರಾಮೇಗೌಡ ಎಂಬ ರೈತರು ಕಲ್ಲಂಗಡಿ ಬೆಳೆಯನ್ನು ಬೆಳೆದಿದ್ದರು. ಮೂರು ಎಕರೆಯಲ್ಲಿ ಅವರು ಕಲ್ಲಂಗಡಿ ಬೀಜವನ್ನು ಬಿತ್ತಿದ್ದರು. ಇದಕ್ಕಾಗಿ ಅವರು ಸುಮಾರು ಐದು ಲಕ್ಷ ರೂಪಾಯಿ ಬಂಡವಾಳವನ್ನೂ ಹಾಕಿದ್ದಾಗಿ ಹೇಳಿಕೊಂಡಿದ್ದಾರೆ.
ಯುನೈಟೆಡ್ ಜನರಿಕ್ ಕಂಪನಿಯ ನರ್ಗೀಸ್ ಗೋಲ್ಡ್ ತಳಿಯನ್ನು ವೆಂಕಟರಾಮೇಗೌಡ ಅವರು ತಂದು ಹೊಲದಲ್ಲಿ ಬಿತ್ತಿದ್ದರು. ಆದರೆ, ಬೆಳೆ ಸಂಪೂರ್ಣ ಕಳಪೆಯಾಗಿದ್ದು, ನಷ್ಟಕ್ಕೆ ಕಳಪೆ ಬಿತ್ತನೆ ಬೀಜವನ್ನು ನೀಡಿರುವುದೇ ಕಾರಣ ಎಂದು ರೈತರು ಆರೋಪಿಸಿದ್ದಾರೆ. ಬಿತ್ತನೆ ಬೀಜ ವಿತರಣೆ ಮಾಡಿದ ಕಂಪನಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಲ್ಲದೆ, ನಷ್ಟಕ್ಕೆ ಪರಿಹಾರವನ್ನು ಕೊಡಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಇದನ್ನೂ ಓದಿ | Elephant Attack : ಚಾಮರಾಜನಗರದಲ್ಲಿ ಮತ್ತೆ ಕಾಡಾನೆಗಳ ದಾಳಿ; ಅಪಾರ ಬೆಳೆ ನಷ್ಟ