Site icon Vistara News

Mahadeshwara Statue : ಮಾ. 18ಕ್ಕೆ ಮಹದೇಶ್ವರ ಪ್ರತಿಮೆ ಅನಾವರಣ; ಅದಕ್ಕೂ ಮುನ್ನವೇ ಮುಂಭಾಗದ ತಡೆಗೋಡೆ ಕುಸಿತ

Mahadeshwara statue

#image_title

ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ನಿರ್ಮಾಣವಾಗಿರುವ 108 ಅಡಿ ಎತ್ತರದ ಮಹದೇಶ್ವರ ಪ್ರತಿಮೆ (Mahadeshwara Statue) ಲೋಕಾರ್ಪಣೆಗೆ ವೇದಿಕೆ ಸಿದ್ಧವಾಗಿರುವ ನಡುವೆಯೇ ಪ್ರತಿಮೆಯ ಮುಂಭಾಗದ ತಡೆಗೋಡೆ ಕುಸಿದು ಆತಂಕ ಸೃಷ್ಟಿಸಿದೆ.

ಪ್ರತಿಮೆಯ ಅನಾವರಣಕ್ಕೆ ಮಾರ್ಚ್‌ 18ರ ದಿನವನ್ನು ನಿಗದಿ ಮಾಡಲಾಗಿದ್ದು, ಸಿಎಂ ಬಸವರಾಜ ಬೊಮ್ಮಾಯಿ ಅವರು ಇದನ್ನು ಅನಾವರಣಗೊಳಿಸಲಿದ್ದಾರೆ. ಇದರ ಮುಂಭಾಗದಲ್ಲಿ ಸ್ವಲ್ಪ ದೂರದಲ್ಲಿ ಇಳಿಜಾರಿನಲ್ಲಿ ಕಲ್ಲುಗಲಿಮದ ನಿರ್ಮಿಸಿದ್ದ ಕಲ್ಲುಕಟ್ಟೆಯ ತಡೆಗೋಡೆ ಕುಸಿದಿದೆ. ಕಲ್ಲುಗಳು ಕೆಳಗೆ ಉರುಳಿವೆ. ಇದನ್ನು ಸ್ವಲ್ಪ ಉರುಳಿದರೆ ಅಕ್ಕಪಕ್ಕದ ಮನೆಗಳಿಗೆ ಹಾನಿಯುಂಟಾಗುವ ಸಾಧ್ಯತೆ ಇದೆ.

ಕುಸಿದಿರುವ ಮಹದೇಶ್ವರ ಬೆಟ್ಟದ ಭಾಗ

ಈ ರೀತಿ ಕುಸಿಯುವುದರ ಹಿಂದೆ ಕಿಡಿಗೇಡಿಗಳ ಕೃತ್ಯ ಇರಬಹುದೇ ಎಂಬ ಶಂಕೆಯೂ ವ್ಯಕ್ತವಾಗಿದೆ. ಆದರೆ, ಪ್ರತಿಮೆಗೆ ಯಾವುದೇ ರೀತಿಯ ಹಾನಿಯಾಗುವುದಿಲ್ಲ ಎಂದು ಮಲೆಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಹೇಳಿದ್ದಾರೆ.

ಒಂದೇ ವೇದಿಕೆಯಲ್ಲಿ ಬಿಎಸ್‌ವೈ- ಸೋಮಣ್ಣ

ಬೆಟ್ಟದ ಮೇಲೆ ನಿರ್ಮಾಣವಾಗಿರುವ 108 ಅಡಿ ಎತ್ತರದ ಪ್ರತಿಮೆಯನ್ನು ಮಾರ್ಚ್‌ 18ರಂದು ಸಿಎಂ ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವರಾಗಿರುವ ವಿ ಸೋಮಣ್ಣ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮುಖಾಮುಖಿಯಾಗಲಿದ್ದಾರೆ.

ಒಂದೇ ವೇದಿಕೆಗೆ ಬರುತ್ತಾರಾ ಸೋಮಣ್ಣ ಮತ್ತು ಬಿ.ಎಸ್‌. ಯಡಿಯೂರಪ್ಪ?

ವಿ. ಸೋಮಣ್ಣ ಮತ್ತು ಬಿ.ಎಸ್‌. ಯಡಿಯೂರಪ್ಪ ಅವರ ನಡವಿನ ಸಂಬಂಧ ಅಷ್ಟೇನೂ ಚೆನ್ನಾಗಿಲ್ಲ ಎಂಬ ಸುದ್ದಿಗಳ ನಡುವೆಯೇ ಇಬ್ಬರೂ ನಾಯಕರು ಇತ್ತೀಚೆಗೆ ಜತೆಯಾಗಿ ಕಾಣಿಸಿಕೊಂಡಿಲ್ಲ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ. ನಡ್ಡಾ ಅವರು ಬಂದಾಗಲು ಕಾರ್ಯಕ್ರಮಕ್ಕೆ ಸೋಮಣ್ಣ ಗೈರುಹಾಜರಾಗಿದ್ದರು. ಜೊತೆಗೆ ಬಿಎಸ್ ವೈ ಇರುವ ಕಾರ್ಯಕ್ರಮದಲ್ಲಿ ಸೋಮಣ್ಣ ಗೈರಾಗುತ್ತಾರೆ ಎಂಬ ಆರೋಪ ಕೂಡ ಇತ್ತು. ಈ ನಡುವೆ, ಮಹದೇಶ್ವರ ಮೂರ್ತಿ ಅನಾವರಣ ಕಾರ್ಯಕ್ರಮಕ್ಕೆ ಇಬ್ಬರನ್ನೂ ಒಂದೇ ವೇದಿಕೆಯಲ್ಲಿ ಇರಲಿದ್ದಾರೆ.

ಇದನ್ನೂ ಓದಿ : BJP Politics: ಒಂದು ಚುನಾವಣೆ ಗೆದ್ದರೆ ಮರಿ ಹುಲಿಯ?; ನಮ್ಮನ್ನು ತುಳಿಯಲು ಬಂದ್ರೆ ಸುಮ್ಮನಿರೊಲ್ಲ: ಬಿ.ವೈ. ವಿಜಯೇಂದ್ರ ವಿರುದ್ಧ ಅರುಣ್‌ ಸೋಮಣ್ಣ ವಾಗ್ದಾಳಿ

Exit mobile version