ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ಮೇ 24 (ಬುಧವಾರ) ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಕರೆಂಟ್ ಇರುವುದಿಲ್ಲ. 66/11 ಕೆ.ವಿ ಎಚ್.ಬಿ.ಆರ್ ಸ್ಟೇಶನ್‌ನಲ್ಲಿ ತುರ್ತು ನಿರ್ವಹಣಾ ಕೆಲಸಗಳನ್ನು ನಿರ್ವಹಿಸುವುದರಿಂದ ವಿದ್ಯುತ್ ಪೂರೈಕೆಯಲ್ಲಿ (bescom power supply) ವ್ಯತ್ಯಯ ಉಂಟಾಗಲಿದೆ.
ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಬೆಸ್ಕಾಂ ನಿರ್ವಹಣಾ ಕಾಮಗಾರಿ ಕೈಗೊಂಡಿರುವ ಕಾರಣ, ಎಚ್.ಬಿ.ಆರ್ 1ನೇ ಬ್ಲಾಕ್, 2ನೇ ಬ್ಲಾಕ್, ಯಾಸಿನ್ ನಗರ, ಸುಭಾಶ್ ಲೇಔಟ್, ರಾಮದೇವಸ್ಥಾನದ ರಸ್ತೆ, ರಾಮದೇವ್ ಗಾರ್ಡನ್, ಕೃಷ್ಣ ರೆಡ್ಡಿ ಲೇಔಟ್, ಟೀಚರ್ಸ್ ಕಾಲೋನಿ, ಎಚ್.ಬಿ.ಆರ್ 3ನೇ ಬ್ಲಾಕ್, ಶಿವರಾಮಯ್ಯ ಲೇಔಟ್, ರಿಂಗ್ ರಸ್ತೆ, ಸರ್ವಿಸ್ ರಸ್ತೆ, ಕೆ.ಕೆ.ಹಳ್ಳಿ ಗ್ರಾಮ ಸೇರಿದಂತೆ ಸಿ.ಎಂ.ಆರ್ ರಸ್ತೆ, ಕಮ್ಮನಹಳ್ಳಿ ಮುಖ್ಯರಸ್ತೆ, ರಾಮಯ್ಯ ಲೇಔಟ್‌ನಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಜತೆಗೆ ಲಿಂಗರಾಜಪುರ, ಜಾನಕೀರಾಮ್ ಲೇಔಟ್, ಕನಕದಾಸ ಲೇಔಟ್, ಗೋವಿಂದಪುರ ಮುಖ್ಯರಸ್ತೆ, ರಶದ್ ನಗರ, ಫರೀದಾ ಶೂ ಫ್ಯಾಕ್ಟರಿ, ಅರೇಬಿಕ್ ಕಾಲೇಜ್, ಕೆ.ಜಿ.ಹಳ್ಳಿ, ಗೋವಿಂದಪುರ ಗ್ರಾಮ, ಕೆ.ಜಿ.ಹಳ್ಳಿ, ವಿನೋಬನಗರ, ಬಿ.ಎಂ ಲೇಔಟ್, ಆರೋಗ್ಯಮ್ಮ ಲೇಔಟ್, ಕಾವೇರಿ ಗಾರ್ಡನ್ ಸೇರಿದಂತೆ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಎಚ್.ಬಿ.ಆರ್ 4ನೇ ಬ್ಲಾಕ್, ಎಚ್.ಬಿ.ಆರ್, ನಾಗವಾರ ಮುಖ್ಯರಸ್ತೆ, ನಾಗವಾರ, ಎನ್.ಜೆ.ಕೆ.ಗಾರ್ಮೆಂಟ್ಸ್, ಬೈರನಕುಂಟೆ, ಕುಪ್ಪುಸ್ವಾಮಿ ಲೇಔಟ್, ಎಚ್.ಕೆ.ಬಿ.ಕೆ ಕಾಲೇಜ್, 4ನೇ ಮತ್ತು 5ನೇ ಎಚ್.ಬಿ.ಆರ್ ಲೇಔಟ್, ವಿದ್ಯಾ ಸಾಗರ, ಥಣಿಸಂದ್ರ, ಆರ್.ಕೆ. ಹೆಗಡೆನಗರ, ಕೆ.ನಾರಾಯಣಪುರ, ಎನ್.ಎನ್.ಹಳ್ಳಿ, ಬಾಲಾಜಿ ಲೇಔಟ್, ಫೇಸ್ 1 ರಿಂದ 3, ರೈಲ್ವೆ ಮೆನ್ಸ್ ಲೇಔಟ್, ಬಿ.ಡಿ.ಎಸ್ ಲೇಔಟ್, ಸೆಂಟ್ರಲ್ ಎಕ್ಸೈಸ್, ಕೆ.ಕೆ.ಹಳ್ಳಿ, ಹೆಣ್ಣೂರು ಮುಖ್ಯರಸ್ತೆಯಲ್ಲಿ ವಿದ್ಯುತ್ ಕಡಿತ ಮಾಡಲಾಗುವುದು.
ಇದನ್ನೂ ಓದಿ: ಸ್ನೇಹಿತರೊಂದಿಗೆ ತಲಕಾಡಿಗೆ ಹೋಗಿದ್ದ ಬಾಲಕರಿಬ್ಬರು ನೀರುಪಾಲು; ಆಳವಿದ್ದ ಕಡೆ ಈಜಿದ್ದೇ ಜೀವಕ್ಕೆ ಮುಳುವಾಯ್ತು
ಎಚ್.ಆರ್.ಬಿ.ಆರ್ 3ನೇ ಬ್ಲಾಕ್, ಆಯಿಲ್ ಮಿಲ್ ರಸ್ತೆ, ಅರವಿಂದನಗರ, ನೆಹರು ರಸ್ತೆ, ಕಮ್ಮನಹಳ್ಳಿ ಮುಖ್ಯರಸ್ತೆ, ಬೆಥೆಲ್ ಸ್ಟ್ರೀಟ್, ಎ.ಕೆ.ಕಾಲೋನಿ, ಎಚ್.ಆರ್.ಬಿ.ಆರ್ 1ನೇ ಬ್ಲಾಕ್, 80 ಅಡಿ ರಸ್ತೆ, ಸಿ.ಎಂ.ಆರ್ ರಸ್ತೆ, ಕಾರ್ಲೆ, ಹೆಗಡೆನಗರ, ನಾಗೇನಹಳ್ಳಿ, ಪೊಲೀಸ್ ಕ್ವಾಟರ್ಸ್, ಕೆಂಪೇಗೌಡ ಲೇಔಟ್, ಶಬರೀನಗರ, ಕೆ.ಎಂ.ಟಿ ಲೇಔಟ್, ಭಾರತೀಯ ಸಿಟಿ, ನೂರ್ ನಗರ ಭಾರತ ಲೇಔಟ್, ಭಾರತ ಮಾತಲೇಔಟ್, ಹಿದಾಯತ್ ನಗರ, ಲಿಡ್ಕರ್ ಕಾಲೋನಿಯಲ್ಲಿ ಮೇ 24ರ ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
ರಾಜ್ಯದ ಪ್ರಮುಖ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ