Site icon Vistara News

Power Cut : ವಿದ್ಯುತ್‌ ಕಡಿತ! ಅ.27 ರವರೆಗೆ ಬೆಂಗಳೂರಿನ ಈ ಏರಿಯಾಗಳಲ್ಲಿ ಕತ್ತಲು

Bengaluru Power Cut

ಬೆಂಗಳೂರು: ನೈರುತ್ಯ ಮುಂಗಾರು ಕೈಕೊಟ್ಟಿದ್ದರಿಂದ ಜಲ ವಿದ್ಯುತ್‌ ಶಕ್ತಿ ಉತ್ಪಾದನೆಯಲ್ಲಿ ತೀವ್ರ ಅಭಾವ ಉಂಟಾಗಿದೆ. ರಾಜ್ಯದಲ್ಲಿ ವಿದ್ಯುತ್‌ ಉತ್ಪಾದನೆಯಲ್ಲಿ ಭಾರಿ ಕುಸಿತ ಉಂಟಾಗಿದ್ದು, ಅಕ್ಟೋಬರ್‌ನಲ್ಲಿ ಅಂದಾಜು 15,000 ಮೆಗಾವ್ಯಾಟ್‌ಗಿಂತ ಹೆಚ್ಚಿನ ಬೇಡಿಕೆ ಉಂಟಾಗಿದೆ. ಈಗಾಗಲೇ ಕೆಲವು ಕಡೆಗಳಲ್ಲಿ ಲೋಡ್‌ ಶೆಡ್ಡಿಂಗ್‌ ಶುರುವಾಗಿದೆ. ಈ ಮಧ್ಯೆ ಬೆಂಗಳೂರಲ್ಲಿ ನಿರ್ವಹಣಾ ಕಾರ್ಯಗಳನ್ನು ಕೈಗೊಂಡಿರುವುದರಿಂದ ಅ.24ರಿಂದ 27ರವರೆಗೆ ವಿದ್ಯುತ್‌ ವ್ಯತ್ಯಯ (Power Cut) ಉಂಟಾಗಲಿದೆ.

ಬೆಸ್ಕಾಂ ಹಾಗೂ ಕೆಪಿಟಿಸಿಎಲ್‌ ಸೇರಿ ನಗರದಲ್ಲಿ ಹಲವಾರು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿದೆ. ಹೀಗಾಗಿ ಬೆಳಗ್ಗೆ 10ರಿಂದ ಸಂಜೆ 4ರವರೆಗೆ ವಿದ್ಯುತ್‌ ಕಡಿತವಾಗುವ ಸಾಧ್ಯತೆ ಇದೆ. ಕೇಬಲ್‌ ಬದಲಾಯಿಸುವುದು, ಡಿಟಿಸಿ ನಿರ್ವಹಣೆ, ಹದಗಟ್ಟೆ ಕಂಬಗಳ ಬದಲಾವಣೆ, ಮರ ಟ್ರೀಮ್ಮಿಂಗ್‌ ಮಾಡಲಾಗುತ್ತಿದೆ.

ಇದನ್ನೂ ಓದಿ: Karnataka Weather : ಚಾಮರಾಜನಗರ, ಮೈಸೂರಲ್ಲಿ ತುಂತುರು ಮಳೆ ಸವಾರಿ

ಇಲ್ಲೆಲ್ಲ ಕರೆಂಟ್‌ ಕಟ್‌

-ಅ 27ರವರೆಗೆ ಕುಂಟೇಗೌಡನಹಳ್ಳಿ, ಯಲದಬಾಗಿ, ಅಜ್ಜಯ್ಯನಪಾಳ್ಯ, ಎಲ್‌.ಎಚ್‌.ಪಾಳ್ಯ, ತಿಪ್ಪನಹಳ್ಳಿ, ಹಾವಿನಹುಳು, ಕಾಟವೀರನಹಳ್ಳಿ, ನವನೆಬೋರನಹಳ್ಳಿ, ದಾಸರಹಳ್ಳಿ, ದೊಡ್ಡಸೀಬಿ, ದುರ್ಗದಹಳ್ಳಿ, ತಿಪ್ಪನಹಳ್ಳಿ ಹಾಗೂ ಬೋರಸಪ್ಪರಹಳ್ಳಿ, ವೆಂಕಟಾಪುರ, ಸಬಿರಾಯಪ್ಪರಹಳ್ಳಿ, ಸೀಯಾಳಪ್ಪರಹಳ್ಳಿ, ಹುಂಜನಾಳ್, ಕಲ್ಲಶೆಟ್ಟಿಹಳ್ಳಿ, ಯತ್ತಪ್ಪನಹಟ್ಟಿ, ಕಾಳಜ್ಜಿರೊಪ್ಪ, ಮತ್ತು ಬ್ಯಾಡರಹಳ್ಳಿಯಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ.

-ಅ 25-27ರವರೆಗೆ ಚಂದ್ರಾಲೇಔಟ್ 80 ಅಡಿ ರಸ್ತೆ, 1 ಮತ್ತು 2 ನೇ ಹಂತ, ಪಾಲಿಕೆ ಸೌಧ, ಜ್ಯೋತಿ ನಗರ, ಆದಾಯ ತೆರಿಗೆ ಲೇಔಟ್ ಮತ್ತು ಬಸವೇಶ್ವರ ಲೇಔಟ್,

-ಅ 26 ರವರೆಗೆ ಎಸ್ಎಸ್ ಹೈಟೆಕ್ ಆಸ್ಪತ್ರೆ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

ಮೂರು ಪಾಳಿಗಳಲ್ಲಿ ವಿದ್ಯುತ್‌ ಪೂರೈಕೆ

ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ವಿದ್ಯುತ್‌ ಬೇಡಿಕೆ ಗಣನೀಯವಾಗಿ ಹೆಚ್ಚಿರುವುದರಿಂದ ರೈತರಿಗೆ ಪ್ರತಿ ದಿನ ಮೂರು ಪಾಳಿಗಳಲ್ಲಿ ನಿರಂತರ ಐದು ಗಂಟೆಗಳ ಕಾಲ ವಿದ್ಯುತ್‌ ಪೂರೈಕೆ ಮಾಡುವ ಮೂಲಕ ಲೋಡ್‌ ಶೆಡ್ಡಿಂಗ್‌ (Load Shedding) ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಎಸ್ಕಾಂಗಳ ಎಂ.ಡಿ.ಗಳಿಗೆ ಸಿಎಂ ಸಿದ್ದರಾಮಯ್ಯ ಖಡಕ್‌ ಸೂಚನೆ ನೀಡಿದ್ದಾರೆ.

ವಿದ್ಯುತ್‌ ಬಿಕ್ಕಟ್ಟು ತಾತ್ಕಾಲಿಕ

ರಾಜ್ಯದಲ್ಲಿನ ವಿದ್ಯುತ್ ಬಿಕ್ಕಟ್ಟಿಗೆ ಕಡಿಮೆ ವಿದ್ಯುತ್ ಉತ್ಪಾದನೆ ಮತ್ತು ಹೆಚ್ಚಿನ ಬೇಡಿಕೆ ಕಾರಣವಾಗಿದೆ. ಈ ವಿದ್ಯುತ್ ಬಿಕ್ಕಟ್ಟು ತಾತ್ಕಾಲಿಕವಾಗಿದ್ದು, ಸರ್ಕಾರ ಶೀಘ್ರದಲ್ಲೇ ಅದನ್ನು ಪರಿಹರಿಸಲಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಮಾಹಿತಿ ನೀಡಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version