Site icon Vistara News

Power Cut: ವೀಕೆಂಡ್‌ನಲ್ಲಿ ಬೆಸ್ಕಾಂನಿಂದ ಕರೆಂಟ್‌ ಶಾಕ್‌!

Bengaluru Power Cut

ಬೆಂಗಳೂರು: ವೀಕೆಂಡ್‌ನಲ್ಲಿ ಜನತೆಗೆ ಬೆಸ್ಕಾಂ ಕರೆಂಟ್‌ ಶಾಕ್‌ (Power Cut) ಕೊಟ್ಟಿದೆ. ಶನಿವಾರದಂದು ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ. ಬೆಸ್ಕಾಂ ಕೆ.ವಿ. ವೃಷಭಾವತಿ ಮತ್ತು ಕೆ.ವಿ. ಸರ್.ಎಂ.ವಿ ವಿದ್ಯುತ್ ಕೇಂದ್ರಗಳಲ್ಲಿ ತ್ರೈಮಾಸಿಕ ನಿರ್ವಹಣೆ ಕೆಲಸಗಳನ್ನು ಕೈಗೆತ್ತಿಕೊಂಡಿದೆ. ಹೀಗಾಗಿ ಡಿ.16 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 05 ಗಂಟೆ ವರೆಗೆ ಬೆಂಗಳೂರಿನ ವಿವಿಧೆಡೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಕೆ.ವಿ ವೃಷಭಾವತಿ ವಿದ್ಯುತ್‌ ಕೇಂದ್ರದ ವ್ಯಾಪ್ತಿಗೆ ಬರುವ ಏರಿಯಾಗಳಲ್ಲಿ ಕರೆಂಟ್‌ ಕಟ್‌ ಆಗಲಿದೆ. ಬಾಪೂಜಿನಗರ, ಗಂಗೊಂಡನಹಳ್ಳಿ, ದೀಪಾಂಜಲಿನಗರ, ಅತ್ತಿಗುಪ್ಪೆ, ಪಂತರಪಾಳ್ಯ, ಕೆಂಚೇನಹಳ್ಳಿ, ರಾಜರಾಜೇಶ್ವರಿನಗರ, ಬೆಟ್ಟನಪಾಳ್ಯ, ಐಡಿಯಲ್ ಹೋಮ್ಸ್, ಬಿ.ಹೆಚ್.ಇ.ಎಲ್. ಲೇಔಟ್, ಜ್ಞಾನಭಾರತಿ, ವಿನಾಯಕ ಲೇಔಟ್ ಹಾಗೂ ಕೆಂಗೇರಿ ಉಪನಗರ, ಜ್ಞಾನಭಾರತಿ ಲೇಔಟ್, ಬಂಡೇಮಠ, ಮೈಲಸಂದ್ರ, ವಿಶ್ವೇಶ್ವರಯ್ಯ ಲೇಔಟ್, ಆರ್.ಆರ್.ಲೇಔಟ್, ಕೆಂಗುಂಟೆ, ಕೊಡಿಗೇಹಳ್ಳಿ, ಮುದ್ದಿನಪಾಳ್ಯ, ಮರಿಯಪ್ಪನಪಾಳ್ಯ, ಸುಭಾಷ್‌ ನಗರ, ಗಿರಿನಗರ, ಬ್ಯಾಂಕ್ ಕಾಲೋನಿ, ಶ್ರೀನಗರ, ಹನುಮಂತನಗರ, ವಿದ್ಯಾಪೀಠ, ತ್ಯಾಗರಾಜನಗರ, ಹೊಸಕೆರೆಹಳ್ಳಿ, ನಾಗೇಂದ್ರ ಬ್ಲಾಕ್, ಅವಲಹಳ್ಳಿ ಹಾಗೂ ಮೈಸೂರು ರಸ್ತೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರೆಂಟ್‌ ಇರುವುದಿಲ್ಲ.

ಇನ್ನು ಕೆ.ವಿ.ಸರ್‌.ಎಂ.ವಿ ಲೇಔಟ್‌ನ ವಿದ್ಯುತ್‌ ಕೇಂದ್ರದ ವ್ಯಾಪ್ತಿಗೆ ಬರುವ ಉಲ್ಲಾಳ ಮೈನ್ ರೋಡ್, ಪ್ರೆಸ್ ಲೇಔಟ್, ರೈಲ್ವೆ ಲೇಔಟ್, ಜ್ಞಾನಜ್ಯೋತಿನಗರ, ಮುನೇಶ್ವರನಗರ, ಎಂ.ಪಿ.ಎಂ.ಲೇಔಟ್, ಐ.ಟಿ.ಐ. ಲೇಔಟ್, ಕೆಂಗುಂಟೆ, ಮಲ್ಲತ್ತಹಳ್ಳಿ ಸೇರಿದಂತೆ ಡಿ ಗ್ರೂಪ್ ಲೇಔಟ್, ದೊಡ್ಡಬಸ್ತಿ, ಚಿಕ್ಕಬಸ್ತಿ, ರಾಮಸಂದ್ರ, ಗಾಯಿತ್ರಿ ಲೇಔಟ್, ಸೊನ್ನೇನಹಳ್ಳಿ, ಅಮ್ಮ ಆಶ್ರಮ, ಜ್ಞಾನಭಾರತಿ ಲೇಔಟ್, ಆರ್.ಆರ್.ಲೇಔಟ್. ಆಂಜನಾನಗರ, ರತ್ನಾನಗರ, ಕೊಡಿಗೇಹಳ್ಳಿ, ಕನ್ನಲ್ಲಿ, ದೊಡ್ಡಗೊಲ್ಲರಹಟ್ಟಿ, ಸರ್.ಎಂ.ವಿ.ಲೇಔಟ್ 1 ರಿಂದ 9ನೇ ಬ್ಲಾಕ್ ರವರೆಗೆ ಹೇರೋಹಳ್ಳಿ, ಬಿಇಎಲ್ ಬಡಾವಣೆ, ಮಂಗನಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಯಾವುದೇ ಕುಂದುಕೊರೆತೆ ಹಾಗೂ ದೂರಿಗಾಗಿ ಬೆಸ್ಕಾಂ ಸಹಾಯವಾಣಿ 1912 ಸಂಪರ್ಕಿಸಬಹುದಾಗಿದೆ.

ಅಪ್ರೆಂಟಿಸ್‌ ಟ್ರೈನಿಂಗ್‌; ಬೆಸ್ಕಾಂನಲ್ಲಿ 400 ಮಂದಿಗೆ ಅವಕಾಶ; ಇಂದೇ ಅರ್ಜಿ ಸಲ್ಲಿಸಿ

ಬೆಂಗಳೂರು: ಬೆಂಗಳೂರು ವಿದ್ಯುತ್​ ಸರಬರಾಜು ಕಂಪನಿ ನಿಯಮಿತ-ಬೆಸ್ಕಾಂ(Bangalore Electricity Supply Company Limited)ನಲ್ಲಿ ಅಪ್ರೆಂಟಿಸ್‌ ಟ್ರೈನಿಂಗ್‌ಗೆ ಅರ್ಜಿ ಆಹ್ವಾನಿಸಲಾಗಿದೆ (BESCOM Recruitment 2023). ಒಟ್ಟು 400 ಅಪ್ರೆಂಟಿಸ್‌ ಟ್ರೈನಿಂಗ್‌ಗೆ ಅರ್ಜಿ ಆಹ್ವಾನಿಸಲಾಗಿದ್ದು, ಡಿಪ್ಲೋಮಾ, ಬಿ.ಇ. / ಬಿ.ಟೆಕ್‌ ಓದಿದವರು ಅರ್ಜಿ ಸಲ್ಲಿಸಲು ಅರ್ಹರು. ಆಸಕ್ತರು ಡಿಸೆಂಬರ್ 31ರೊಳಗೆ ಆನ್‌ಲೈನ್‌ ಮೂಲಕ ​ಅಪ್ಲೈ ಮಾಡಬೇಕು ಎಂದು ಪ್ರಕಟಣೆ ತಿಳಿಸಿದೆ (Job Alert)

ಹುದ್ದೆಗಳ ವಿವರ

ಗ್ರಾಜುಯೇಟ್ ಅಪ್ರೆಂಟಿಸ್ (ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್​ ಎಂಜಿನಿಯರಿಂಗ್)-143, ಗ್ರಾಜುಯೇಟ್ ಅಪ್ರೆಂಟಿಸ್ (ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ ಎಂಜಿನಿಯರಿಂಗ್)-116, ಗ್ರಾಜುಯೇಟ್ ಅಪ್ರೆಂಟಿಸ್ (ಕಂಪ್ಯೂಟರ್ ಸೈನ್ಸ್​ & ಎಂಜಿನಿಯರಿಂಗ್)-36, ಗ್ರಾಜುಯೇಟ್ ಅಪ್ರೆಂಟಿಸ್ (ಇನ್ಫರ್ಮೇಶನ್ ಸೈನ್ಸ್​ & ಎಂಜಿನಿಯರಿಂಗ್)-20, ಗ್ರಾಜುಯೇಟ್ ಅಪ್ರೆಂಟಿಸ್ (ಸಿವಿಲ್ ಎಂಜಿನಿಯರಿಂಗ್)-5, ಗ್ರಾಜುಯೇಟ್ ಅಪ್ರೆಂಟಿಸ್ (ಇನ್​ಸ್ಟ್ರುಮೆಂಟೇಶನ್ ಟೆಕ್ನಾಲಜಿ ಎಂಜಿನಿಯರಿಂಗ್)-5, ಟೆಕ್ನಿಷಿಯನ್ ಅಪ್ರೆಂಟಿಸ್(ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್​ ಎಂಜಿನಿಯರಿಂಗ್)-55, ಟೆಕ್ನಿಷಿಯನ್ ಅಪ್ರೆಂಟಿಸ್ (ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ ಎಂಜಿನಿಯರಿಂಗ್)-10, ಟೆಕ್ನಿಷಿಯನ್ ಅಪ್ರೆಂಟಿಸ್ (ಕಂಪ್ಯೂಟರ್ ಸೈನ್ಸ್​ & ಎಂಜಿನಿಯರಿಂಗ್)-10 ಅಪ್ರೆಂಟಿಸ್‌ ಹುದ್ದೆಗಳಿವೆ.

ವಯೋಮಿತಿ ಮತ್ತು ಅರ್ಜಿ ಶುಲ್ಕ

ಕನಿಷ್ಠ 18 ವರ್ಷ ಪೂರೈಸಿದವರು ಅಪ್ರೆಂಟಿಸ್‌ ಟ್ರೈನಿಂಗ್‌ಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೆ ಯಾವುದೇ ಶುಲ್ಕವಿಲ್ಲ. ಡಾಕ್ಯುಮೆಂಟ್‌ ಪರಿಶೀಲನೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಮಾಸಿಕ ವೇತನ 8,000 ರೂ.-9,000 ರೂ. ಒಂದು ವರ್ಷಗಳ ಕಾಲ ಅಪ್ರೆಂಟಿಸ್‌ಶಿಪ್‌ ಟ್ರೈನಿಂಗ್‌ ನಡೆಯಲಿದೆ. 2024ರ ಜನವರಿ 8ರಂದು ಅಭ್ಯರ್ಥಿಗಳ ಶಾರ್ಟ್‌ ಲಿಸ್ಟ್‌ ಪ್ರಕಟಿಸಲಾಗುತ್ತದೆ.

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಅರ್ಜಿ ಸಲ್ಲಿಸುವ ವಿಧಾನ

ಅರ್ಜಿ ಸಲ್ಲಿಸುವವರ ಗಮನಕ್ಕೆ

ಹೆಚ್ಚಿನ ಮಾಹಿಗಳಿಗಾಗಿ ಅಭ್ಯರ್ಥಿಗಳು knplacement@boat-srp.com, dgmhrd.work@gmail.com ಇ-ಮೇಲ್‌ ಮೂಲಕ ಸಂಪರ್ಕಿಸಬಹುದು. ಇಲ್ಲದೆ ದೂರವಾಣಿ ಸಂಖ್ಯೆ: 044-22542235, 080-22356756ಕ್ಕೆ ಕರೆ ಮಾಡಬಹುದು ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version