Site icon Vistara News

Power Point with HPK : ಸಿಎಂ ಸಿದ್ದರಾಮಯ್ಯಗೆ ಮಾಮ ಎಂದು ಕರೆಯುವ ಶಿವರಾಜಕುಮಾರ್!

Madhu Bangarappa in Power Point with HPK

ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramaiah) ಅವರನ್ನು ಸ್ಯಾಂಡಲ್‌ವುಡ್‌ ಕಿಂಗ್‌ ಖ್ಯಾತಿ ಶಿವರಾಜಕುಮಾರ್‌ (Actor Shivarajkumar) ಅವರು ಮಾಮ ಎಂದು ಕರೆಯುತ್ತಾರೆ. ಅವರು ಅಷ್ಟು ಕ್ಲೋಸ್‌ ಇದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು (Education Minister Madhu Bangarappa) ಪವರ್‌ ಪಾಯಿಂಟ್‌ ವಿತ್ ಎಚ್‌ಪಿಕೆ (Power Point with HPK) ಸಂದರ್ಶನದಲ್ಲಿ ಹೇಳಿದರು.

ವಿಸ್ತಾರ ನ್ಯೂಸ್‌ ಪ್ರಧಾನ ಸಂಪಾದಕ ಹರಿಪ್ರಕಾಶ್‌ ಕೋಣೆಮನೆ (Hariprakash Konemane) ಅವರು ನಡೆಸಿಕೊಡುವ “ಪವರ್‌ ಪಾಯಿಂಟ್‌ ವಿತ್‌ ಎಚ್‌ಪಿಕೆ” ವಿಶೇಷ ಸಂದರ್ಶನದಲ್ಲಿ ಮಾತನಾಡಿದ‌ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಸಿಎಂ ಸಿದ್ದರಾಮಯ್ಯ ಹಾಗೂ ಶಿವರಾಜಕುಮಾರ್‌ ನಡುವಿನ ಬಾಂಧವ್ಯ ಹಾಗೂ ಕಳೆದ ವಿಧಾನಸಭಾ ಚುನಾವಣೆ ವೇಳೆ ಸಿದ್ದರಾಮಯ್ಯ ಮತ್ತು ತಮ್ಮನ್ನೂ ಸೇರಿದಂತೆ ಕಾಂಗ್ರೆಸ್‌ನ ಕೆಲವು ಅಭ್ಯರ್ಥಿಗಳ ಪರವಾಗಿ ಕ್ಯಾಂಪೇನ್‌ ಮಾಡಿದ ಕಾರಣವನ್ನು ವಿವರಿಸಿದರು. ಈ ವೇಳೆ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಪರವಾಗಿ ಕ್ಯಾಂಪೇನ್‌ ಮಾಡುವಂತೆ ಒಂದು ಮಾತು ಕೇಳಿಕೊಂಡಾಗ ಶಿವಣ್ಣ ಅವರು, “ಆಯ್ತು ಮಾಮ ಬರುತ್ತೇನೆ” ಎಂದು ಹೇಳಿ ಪ್ರಚಾರ ಮಾಡಿದರು ಎಂಬ ವಿಷಯವನ್ನು ವಿವರಿಸಿದರು.

ಇದನ್ನೂ ಓದಿ: Power Point with HPK : ಶಿವಮೊಗ್ಗದಲ್ಲಿ 10 ಮನೆಗಳಿಗೆ ಕಲ್ಲು ಬಿದ್ದಿದೆ; ಅದು ಕೋಮು ಗಲಭೆ ಅಲ್ಲ!

ಶಿವಣ್ಣ ಅವರೇ ಪ್ರಚಾರದ ನಿರ್ಧಾರ ಕೈಗೊಂಡರು

ಶಿವರಾಜಕುಮಾರ್‌ ಹಾಗೂ ಗೀತಾ ಶಿವರಾಜಕುಮಾರ್‌ ಅವರು ನಮ್ಮ ಪಕ್ಷದ ಪರ ಕ್ಯಾಂಪೇನ್‌ ಮಾಡಿದ್ದಾರೆ. ನನ್ನ ಪರ ಕ್ಯಾಂಪೇನ್‌ ಮಾಡುವುದಾಗಿ ಶಿವಣ್ಣ ಮಾಧ್ಯಮದ ಎದುರು ಘೋಷಿಸಿಬಿಟ್ಟರು. ಕೊನೆಗೆ ನನಗೆ ಹಾಗೂ ಭೀಮಣ್ಣ ನಾಯ್ಕ್‌ ಅವರ ಪರವಾಗಿ ಪ್ರಚಾರಕ್ಕೆ ಬರುವುದಾಗಿ ಹೇಳಿದರು. ಆಗ ನಾನೇ ಅವರಿಗೆ ಮನವಿ ಮಾಡಿದೆ. ನಮ್ಮಿಬ್ಬರಿಗೆ ಮಾತ್ರ ಪ್ರಚಾರ ಮಾಡಿದರೆ ಕುಟುಂಬದವರಿಗೆ ಮಾತ್ರ ಕ್ಯಾಂಪೇನ್‌ ಮಾಡಿದಂತೆ ಆಗುತ್ತದೆ. ಯಾಕೆ ನಿಮ್ಮ ಸ್ನೇಹಿತರಿಗೂ ಸಹಕಾರ ಕೊಡಬಾರದು ಎಂದು ನಾನು ಕೇಳಿದೆ. ಅದಕ್ಕೆ ಅವರೂ ಸಹ ಒಪ್ಪಿಗೆ ಸೂಚಿಸಿದರು ಎಂದು ಶಿವರಾಜಕುಮಾರ್‌ ಅವರು ಚುನಾವಣಾ ಕ್ಯಾಂಪೇನ್‌ಗೆ ಧುಮುಕಿದ್ದು ಹೇಗೆ ಎಂಬುದನ್ನು ಬಿಚ್ಚಿಟ್ಟರು.

ಸಿಎಂ ಸಿದ್ದರಾಮಯ್ಯ ಹಾಗೂ ಶಿವರಾಜಕುಮಾರ್‌ ಅವರು ಬಹಳವೇ ಕ್ಲೋಸ್‌ ಇದ್ದಾರೆ. ಶಿವರಾಜಕುಮಾರ್‌ ಅವರನ್ನು ಕಂಡಾಗಲೆಲ್ಲ ಸಿದ್ದರಾಮಯ್ಯ ಅವರು “ನಮ್ಮ ಕಾಡಿನವರು ಎಂದು ಹೇಳುತ್ತಾರೆ. ಡಾ. ರಾಜಕುಮಾರ್‌ ಹಾಗೂ ಸಿದ್ದರಾಮಯ್ಯ ಅವರು ಒಂದೇ ಪ್ರದೇಶದವರಾಗಿದ್ದರಿಂದ ಹೆಚ್ಚು ಪರಿಚಿತರು ಎಂದು ರಾಜ್‌ ಕುಟುಂಬ ಹಾಗೂ ಸಿದ್ದರಾಮಯ್ಯ ಅವರ ನಡುವಿನ ಬಾಂಧವ್ಯದ ಬಗ್ಗೆ ಬಣ್ಣಿಸಿದ ಸಚಿವ ಮಧು ಬಂಗಾರಪ್ಪ, ನನ್ನ ಪ್ರಚಾರಕ್ಕೆ ಬರುವುದಾಗಿ ಶಿವಣ್ಣ ಘೋಷಣೆ ಮಾಡಿದ ವೇಳೆಯೇ ಸಿದ್ದರಾಮಯ್ಯ ಅವರೂ ಕ್ಯಾಂಪೇನ್‌ಗಾಗಿ ಕೇಳಿದ್ದರಿಂದ ಒಪ್ಪಿ ಅವರು ಎಲ್ಲ ಕಡೆ ಪ್ರಚಾರಕ್ಕೆ ಹೋದರು ಎಂಬುದನ್ನು ತಿಳಿಸಿದರು.

ಅಲ್ಲಿಂದ ಲಕ್ಷ್ಮಿ ಹೆಬ್ಬಾಳ್ಕರ್‌, ಜಗದೀಶ್‌ ಶೆಟ್ಟರ್‌, ಗೋಪಾಲಕೃಷ್ಣ ಅವರು ಸೇರಿದಂತೆ ಎಲ್ಲ ಕಡೆ ಪ್ರಚಾರಕ್ಕೆ ಶಿವರಾಜಕುಮಾರ್‌ ಅವರು ಹೊರಟು ನಿಂತರು. ಬೀದರ್‌ನಿಂದ ಹಿಡಿದು ಮೈಸೂರುವರೆಗೂ ಶಿವಣ್ಣ ಕ್ಯಾಂಪೇನ್‌ ಮಾಡಿದರು. ದಿನೇಶ್‌ ಗುಂಡೂರಾವ್‌ ಅವರಿಗೆ ಕೊನೇ ಒಂದು ಗಂಟೆಯಲ್ಲಿ ಪ್ರಚಾರ ಮಾಡಿದರು. ಅವರ ಬ್ಯುಸಿ ಶೆಡ್ಯೂಲ್‌ ಅನ್ನು ನೋಡಿ, ನನ್ನ ಪರವಾಗಿ ಕಡಿಮೆ ಅವಧಿಯನ್ನು ಕೊಡಿ ಎಂದು ನಾನೇ ಗೀತಕ್ಕ ಹಾಗೂ ಶಿವಣ್ಣ ಅವರಿಗೆ ಕೇಳಿಕೊಂಡೆ. ಅವರ ಸಮಯ ನನಗೆ ಸಿಕ್ಕಿದ್ದು, ಕೇವಲ ಒಂದೂವರೆ ಗಂಟೆ ಸಮಯ ಮಾತ್ರ. ಆದರೆ, ಅಂದು ಸುಮಾರು 40 ಸಾವಿರ ಜನ ಸೇರಿದ್ದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅಂದು ಆ ವೇದಿಕೆಯಲ್ಲಿದ್ದರು ಎಂದು ಮಧು ಬಂಗಾರಪ್ಪ ಹೇಳಿದರು.

ಇನ್ನೊಂದು ಮಹತ್ವದ ವಿಚಾರವೆಂದರೆ ಬೆಳಗಾವಿ ಸಮಾವೇಶ ನಡೆಯುತ್ತಿದ್ದು, ಅಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಭಾಗವಹಿಸುತ್ತಿದ್ದಾರೆ. ಆ ಕಾರ್ಯಕ್ರಮದಲ್ಲಿ ಭಾಗವಹಿಸಬಹುದೇ ಎಂದು ಕೇಳಿದ್ದರು. ಅದಕ್ಕೆ ಒಪ್ಪಿ ಸುಮಾರು 9 ದಿನಗಳ ಕಾಲ ಕ್ಯಾಂಪೇನ್‌ ಮಾಡಿದ್ದಾರೆ ಎಂದು ಮಧು ಬಂಗಾರಪ್ಪ ಹೇಳಿದರು.

ಶಿವಮೊಗ್ಗ, ಮಂಗಳೂರು ಲೋಕಸಭೆಯಲ್ಲಿ ಕಾಂಗ್ರೆಸ್‌ಗೆ ಗೆಲುವು

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್‌ ಅತಿ ಹೆಚ್ಚು ಸ್ಥಾನವನ್ನು ಗೆಲ್ಲುತ್ತದೆ. ಶಿವಮೊಗ್ಗ ಮತ್ತು ಮಂಗಳೂರು ಲೋಕಸಭಾ ಕ್ಷೇತ್ರವನ್ನು ನಾವು ನೂರಕ್ಕೆ ನೂರು ಗೆಲ್ಲುತ್ತೇವೆ. ಅದೂ ಕನಿಷ್ಠ ಅಂತರದಿಂದಲ್ಲ, ತೃಪ್ತಿಕರ ಅಂತರದಿಂದ ಗೆಲುವು ಸಾಧಿಸುತ್ತೇವೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

ದೇಶದಲ್ಲಿ ಭಾವನಾತ್ಮಕ ಚುನಾವಣೆ ನಡೆಯುವುದಿಲ್ಲ ಎಂದು ಹೇಳಲು ಕರ್ನಾಟಕ ಈ ಬಾರಿ ಒಂದು ಉದಾಹರಣೆಯಾಗಿದೆ. ಅಭಿವೃದ್ಧಿ ಪರ ಕೆಲಸ ಮಾಡುವವರಿಗೆ ಮತ ಹಾಕುವ ಕೆಲಸವನ್ನು ಮತದಾರರು ಮಾಡಿದ್ದಾರೆ. ನಾನು ಈ ವೇದಿಕೆಯಲ್ಲಿ ಇನ್ನೊಂದು ಮಾತನ್ನು ಸ್ಪಷ್ಟವಾಗಿ ಹೇಳುತ್ತೇನೆ. ಲೋಕಸಭಾ ಚುನಾವಣೆ ನಂತರ ನಾನು ಇಲ್ಲಿಗೆ ಮತ್ತೊಮ್ಮೆ ಬಂದು ಕೂರುತ್ತೇನೆ. ಇದರ ಬಗ್ಗೆ ಮಾತನಾಡುತ್ತೇನೆ. ಕರ್ನಾಟಕದಲ್ಲಿ ನಾವು ಹೆಚ್ಚಿನ ಲೋಕಸಭಾ ಸ್ಥಾನವನ್ನು ಗೆಲ್ಲುತ್ತೇವೆ ಎಂದು ಹೇಳಿದರು.‌

ಇದನ್ನೂ ಓದಿ: Power Point with HPK : ಶಿವಮೊಗ್ಗ ಗಲಭೆ; ಖಡ್ಗದ ಬಗ್ಗೆ ಚರ್ಚೆ ಮಾಡಲೇಬಾರದೆಂದ ಮಧು ಬಂಗಾರಪ್ಪ!

ಇದಕ್ಕೆ ಕಾರಣವನ್ನೂ ಹೇಳುತ್ತೇನೆ. ಸಿಲಿಂಡರ್‌ ರೇಟ್‌ ಜಾಸ್ತಿಯಾಗಿದೆ. ನಾವೀಗ ಮಹಿಳೆಯರ ಖಾತೆಗೆ 2 ಸಾವಿರ ರೂಪಾಯಿಯನ್ನು ಹಾಕುತ್ತಿದ್ದೇವೆ. ಶಕ್ತಿ ಯೋಜನೆ ನೀಡಿದ್ದೇವೆ. ನಾವು ಗ್ಯಾರಂಟಿ ಯೋಜನೆಯನ್ನು ಜಾರಿಗೆ ತರುತ್ತೇವೆ ಎಂದು ಚುನಾವಣೆಗೆ ಮೊದಲು ಹೇಳಿದ್ದೆವು. ಅದನ್ನು ನಂಬಿ ನಮಗೆ ಮತ ಕೊಟ್ಟಿದ್ದಾರೆ. ನಾವು ಅವುಗಳನ್ನು ಜಾರಿ ಮಾಡುತ್ತಿದ್ದೇವೆ. ಹೀಗಾಗಿ ಈ ಬಾರಿ ಜನರು ನಮಗೆ ಮತ ಹಾಕುತ್ತಾರೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

Exit mobile version