Site icon Vistara News

Junior NTR: ಟಾಲಿವುಡ್ ಸಿಂಹಾದ್ರಿ ಹುಟ್ಟುಹಬ್ಬಕ್ಕೆ ಪ್ರಶಾಂತ್ ನೀಲ್ ಸರ್ಪ್ರೈಸ್‌; NTR31 ಸಿನಿಮಾ ಶೂಟಿಂಗ್ ಯಾವಾಗ ಶುರು?

Junior NTR new Movie NTR31

Junior NTR new Movie NTR31

ಬೆಂಗಳೂರು: ಜ್ಯೂನಿಯರ್ ಎನ್‌ಟಿಆರ್ (Junior NTR) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅವರ ಜನುಮದಿನಕ್ಕೆ ಸಿನಿತಾರೆಯರು, ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ. ತಾರಕ್ ಬರ್ತ್ ಡೇ ಸ್ಪೆಷಲ್ ಆಗಿ 30ನೇ ಚಿತ್ರದ ಟೈಟಲ್ ರಿವೀಲ್ ಆಗಿದೆ. ಅಂತೆಯೇ ಪ್ರಶಾಂತ್ ನೀಲ್ ನಿರ್ದೇಶಿಸುತ್ತಿರುವ ಸಿನಿಮಾದ ಬಗ್ಗೆಯೂ ಅಪ್ ಡೇಟ್ ಹೊರಬಿದ್ದಿದೆ.

ತ್ರಿಬಲ್ ಆರ್ (RRR) ಮುಖ್ಯ ಪಾತ್ರದಾರ ಜ್ಯೂನಿಯರ್ ಎನ್‌ಟಿಆರ್ ಹಾಗೂ ಕೆಜಿಎಫ್ ಸೂತ್ರದಾರ ಪ್ರಶಾಂತ್ ನೀಲ್ ಕಾಂಬೋದ ಸಿನಿಮಾ ಮೇಲೆ ಅಭಿಮಾನಿಗಳಲ್ಲಿ ಬೆಟ್ಟದಷ್ಟು ನಿರೀಕ್ಷೆ ಇದೆ. ಈ ಚಿತ್ರಕ್ಕೆ ಎನ್‌ಟಿಆರ್ 31 ಎಂದು ತಾತ್ಕಾಲಿಕವಾಗಿ ಟೈಟಲ್ ಇಡಲಾಗಿದೆ. ಈ ಚಿತ್ರ ಯಾವಾಗ ಶುರುವಾಗುತ್ತೆ? ಏನು ಕಥೆ ಅನ್ನೋದು ಇಲ್ಲಿವರೆಗೆ ರಿವೀಲ್ ಆಗಿರಲಿಲ್ಲ. ಇದೀಗ ಸಿಂಹಾದ್ರಿ ಹುಟ್ಟುಹಬ್ಬದ ವಿಶೇಷವಾಗಿ ಪೋಸ್ಟರ್ ರಿಲೀಸ್ ಮಾಡಿ ಚಿತ್ರೀಕರಣ ಯಾವಾಗ ಆರಂಭವಾಗಲಿದೆ ಎಂಬ ಬಗ್ಗೆ ಚಿತ್ರತಂಡ ಮಾಹಿತಿ ಕೊಟ್ಟಿದೆ.

ಇದನ್ನೂ ಓದಿ | Devara Movie : ಜ್ಯೂ. ಎನ್​ಟಿಆರ್​ ಹುಟ್ಟುಹಬ್ಬಕ್ಕೆ ‘ದೇವರಾ’ ಫಸ್ಟ್ ಲುಕ್​​ ಪೋಸ್ಟರ್​ ರಿಲೀಸ್​​

ನೀಲ್-ತಾರಕ್ 2024ರ ಮಾರ್ಚ್ ತಿಂಗಳಿನಿಂದ ಶೂಟಿಂಗ್ ಅಖಾಡಕ್ಕೆ ಎಂಟ್ರಿ ಕೊಡಲಿದ್ದಾರೆ. ಪ್ರಭಾಸ್ ನಟನೆಯ ಸಲಾರ್ ಚಿತ್ರೀಕರಣದಲ್ಲಿ ಬ್ಯುಸಿ ಇರುವ ಪ್ರಶಾಂತ್ ನೀಲ್, ಆ ಚಿತ್ರದ ಬಳಿಕ ಎನ್‌ಟಿಆರ್ 31ನೇ ಚಿತ್ರ ಶೂಟಿಂಗ್ ಶುರು ಮಾಡಲಿದ್ದಾರೆ. ತಾರಕ್‌ ಈಗ ಕೊರಟಾಲ ಶಿವ ನಿರ್ದೇಶನದ ದೇವರ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಉಪ್ಪೆನ, ಪುಪ್ಪ, ವಾಲ್ತೇರ್‌ ವೀರಯ್ಯ, ಡಿಯರ್ ಕಾಮ್ರೆಡ್ ಸಿನಿಮಾಗಳನ್ನು ನಿರ್ಮಿಸಿರುವ ಮೈತ್ರಿ ಮೂವಿ ಮೇಕರ್ಸ್ ಎನ್‌ಟಿಆರ್ ಹಾಗೂ ಪ್ರಶಾಂತ್ ನೀಲ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

Exit mobile version