Site icon Vistara News

Shivamogga News: ಮಕ್ಕಳ ಪ್ರತಿಭೆ ಗುರುತಿಸಲು ಪ್ರತಿಭಾ ಕಾರಂಜಿ ಉತ್ತಮ ವೇದಿಕೆ: ಧನಲಕ್ಷ್ಮಿ ಗಂಗಾಧರ್

Inauguration of Ripponpet Cluster Level Pratibha Karanji 2023-24 Program

ರಿಪ್ಪನ್‌ಪೇಟೆ: ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು (Talent) ಗುರುತಿಸಿ ಪ್ರೋತ್ಸಾಹಿಸಲು ಪ್ರತಿಭಾ ಕಾರಂಜಿ (Pratibha Karanji) ಉತ್ತಮ ವೇದಿಕೆಯಾಗಿದೆ (Good platform) ಎಂದು ರಿಪ್ಪನ್‌ಪೇಟೆ ಗ್ರಾಮ ಪಂಚಾಯಿತಿ ಆಧ್ಯಕ್ಷೆ ಧನಲಕ್ಷ್ಮಿ ಗಂಗಾಧರ್ ಹೇಳಿದರು.

ಸಮೀಪದ ಬಾಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಅವರಣದಲ್ಲಿ ರಿಪ್ಪನ್‌ಪೇಟೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ 2023-24 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬಾಗವಹಿಸಿ ಅವರು ಮಾತನಾಡಿದರು.

ನಶಿಸುತ್ತಿರುವ ಜಾನಪದ ಕಲೆ ಸಂಸ್ಕೃತಿ ಉಳಿಸಿ ಪ್ರೋತ್ಸಾಹಿಸಲು ಪ್ರತಿಭಾ ಕಾರಂಜಿ ಕಾರ್ಯಕ್ರಮ ಸಹಕಾರಿಯಾಗಿದೆ, ಸರ್ಕಾರ ಕೊಡುವ ಕಡಿಮೆ ಹಣದಲ್ಲಿ ಇಂತಹ ಕಾರ್ಯಕ್ರಮಗಳನ್ನು ನಡೆಸುವುದು ಕಷ್ಟವಾಗಿದ್ದರೂ ಕೂಡಾ ಗ್ರಾಮಸ್ಥರ ಮತ್ತು ಮಕ್ಕಳ ಪೋಷಕ ವರ್ಗದವರ ಸಹಕಾರದೊಂದಿಗೆ ನಡೆಸುತ್ತಿರುವುದು ಮಕ್ಕಳ ಪೋಷಕರಲ್ಲಿ ಸಂತಸ ತಂದಿದೆ ಎಂದರು.

ಇದನ್ನೂ ಓದಿ: Koppala News: ಗಂಗಾವತಿ; ವಾಣಿ ವೀರಭದ್ರೇಶ್ವರ ದೇವಸ್ಥಾನದ ಶಿವಲಿಂಗ ಕದ್ದೊಯ್ದ ಕಳ್ಳರು

ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಕಲಾ ಚಟುವಟಿಕೆಗಳ ಪ್ರತಿಭೆಯಿದ್ದರೂ ಸಹ ಅವಕಾಶಗಳು ಸಿಗುತ್ತಿರಲಿಲ್ಲ, ಇದನ್ನೆಲ್ಲ ಗಮನಿಸಿದ ಸರ್ಕಾರ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಮಕ್ಕಳು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದಕ್ಕೆ ಅನುವು ಮಾಡಿಕೊಡುವುದರ ಸಲುವಾಗಿ ಪ್ರತಿಭಾ ಕಾರಂಜಿಯಂತಹ ಸಾಂಸ್ಕೃತಿಕ ಚಟುವಟಿಕೆಗಳ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಎಸ್.ಡಿ.ಎಂ .ಸಿ.ಅಧ್ಯಕ್ಷ ಲೋಕೇಶ ಅಧ್ಯಕ್ಷತೆ ವಹಿಸಿದ್ದರು.

ಬಾಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ ಅಚಾರ್ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಮುಖ್ಯಅತಿಥಿಗಳಾಗಿ ಬಿಇಓ ಎಚ್.ಆರ್.ಕೃಷ್ಣಮೂರ್ತಿ, ಬಾಳೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ವೇದಾವತಿ, ಬಾಲಚಂದ್ರ, ರಾಜುಗೌಡ್ರು, ರೇಖಾ ಭರತ್‌ಕುಮಾರ್, ಪಾರ್ವತಮ್ಮ, ಸುದೀಂದ್ರ ಪೂಜಾರಿ ವಾಣಿ ಟಾಕಪ್ಪ, ಇನ್ನಿತರರು ಹಾಜರಿದ್ದರು.

ಇದನ್ನೂ ಓದಿ: Asia Cup 2023: ಯೋ-ಯೋ ಟೆಸ್ಟ್​ ಪಾಸ್​ ಆದ ನಾಯಕ ರೋಹಿತ್​,ಹಾರ್ದಿಕ್​

ಮುಖ್ಯ ಶಿಕ್ಷಕ ಜಿ.ದುಗ್ಗಪ್ಪ ಸ್ವಾಗತಿಸಿದರು, ಈಶ್ವರಪ್ಪ ನಿರೂಪಿಸಿದರು.ಸುಧಾಕರ್ ವಂದಿಸಿದರು.

Exit mobile version