Site icon Vistara News

ಒಬ್ಬರಿಗಾದರೂ ಸಹಾಯ ಮಾಡುವ ಮನೋಭಾವ ಬೆಳೆಸಿಕೊಳ್ಳಿ: ವಿಖ್ಯಾತಾನಂದ ಸ್ವಾಮೀಜಿ

Pratibha Puraskara yallapura

#image_title

ಯಲ್ಲಾಪುರ: ನಮಗೆ ಯಾರು ಕೆಡುಕನ್ನು ಬಯಸುವರೋ, ಅಂತವರ ಏಳ್ಗೆಯನ್ನು ನೋಡಿ ಖುಷಿ ಪಡುವಂತಾಗಬೇಕು. ನಾನು, ನನ್ನ ಕುಟುಂಬ ಎಂಬುದಕ್ಕೆ ಸೀಮಿತರಾಗದೆ, ಕನಿಷ್ಠ ಒಬ್ಬರಿಗಾದರೂ ಸಹಾಯ ಮಾಡುವ ಮನೋಭಾವನೆಯನ್ನು ವಿದ್ಯಾರ್ಥಿಗಳು (Pratibha Puraskara) ಈಗಿಂದಲೇ ತಮ್ಮಲ್ಲಿ ಬೆಳೆಸಿಕೊಳ್ಳಬೇಕು ಎಂದು ಸೋಲೂರು ಮಠದ ಪೀಠಾಧಿಪತಿಗಳಾದ ವಿಖ್ಯಾತಾನಂದ ಸ್ವಾಮೀಜಿ ಹೇಳಿದರು.

ಜೆ.ಪಿ. ನಾರಾಯಣಸ್ವಾಮಿ ಪ್ರತಿಷ್ಠಾನ ಬೆಂಗಳೂರು ಇವರ ವತಿಯಿಂದ ಪಟ್ಟಣದ ಅಡಿಕೆ ಭವನದಲ್ಲಿ ಶನಿವಾರ (ಮಾ.4) ನಡೆದ ಉತ್ತರ ಕನ್ನಡ, ಧಾರವಾಡ, ಗದಗ, ಹಾವೇರಿ ಮತ್ತು ಬಾಗಲಕೋಟೆ ಜಿಲ್ಲೆಯ ಅರ್ಹ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿ ವೇತನ ಪಡೆದ ಎಲ್ಲ ವಿದ್ಯಾರ್ಥಿಗಳ ಜೀವನ ಉಜ್ವಲವಾಗಲಿ. ಅದರೊಂದಿಗೆ ಇನ್ನೊಬ್ಬರ ಜೀವನಕ್ಕೆ ಬೆಳಕಾಗುವಂತೆ ಅವರೆಲ್ಲ ಬೆಳೆಯಲಿ. ಇಂದಿನ ವಿದ್ಯಾರ್ಥಿಗಳಲ್ಲಿ ಸಂಕುಚಿತ ಮನೋಭಾವ ಹೆಚ್ಚುತ್ತಿದೆ. ವಿಶಾಲ ಮನೋಭಾವದ ಅಭಾವ ಕಾಣುತ್ತಿದೆ. ಸಮಾಜಕ್ಕಾಗಿ ಕೊಡುಗೆ ನೀಡುವ ಮನಸ್ಥಿತಿ ಬೆಳೆಸಿಕೊಳ್ಳಿ ಎಂದು ಸಲಹೆ ನೀಡಿದರು.

ಇದನ್ನೂ ಓದಿ: Oscars 2023: ಆಸ್ಕರ್‌ ಮುಂಚಿತವಾಗಿ ದೀಪಿಕಾ ಹಳೆಯ ಫೋಟೊ ಶೇರ್‌ ಮಾಡಿ ಹೊಗಳಿದ ಅನುಪಮ್ ಖೇರ್

ಜೆ.ಪಿ.ಎನ್. ಪ್ರತಿಷ್ಠಾನದ ಮಹಾಪೋಷಕರಾದ ಲತಾ ಸುಧಾಕರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯೆಯಿಂದ ಸ್ವತಂತ್ರರಾಗಿ ಎಂಬುದರ ಅರ್ಥ, ನಮ್ಮ ಶಿಕ್ಷಣದ ನಂತರ ನಾನು, ನನ್ನ ಕುಟುಂಬ ಹಾಗೂ ನನ್ನ ಜೀವನವನ್ನು ಉತ್ತಮಪಡಿಸಿಕೊಳ್ಳುವುದಲ್ಲ. ಅವೆಲ್ಲದರ ಜತೆಗೆ ಸಮಾಜಕ್ಕೆ ನಮ್ಮ ಶಿಕ್ಷಣದಿಂದ ಏನಾದರೂ ಕೊಡುಗೆ ನೀಡುವಂತಾಗಬೇಕು. ಇಂದು ನೀಡಿದ ವಿದ್ಯಾರ್ಥಿ ವೇತನ ಶಿಕ್ಷಣಕ್ಕೆ ಸಂಬಂಧಿತ ಕಾರ್ಯಗಳಿಗೆ ಉಪಯೋಗಿಸಿಕೊಳ್ಳಿ. ಅಂದಾಗ ನಮ್ಮ ಮಾವನವರು ಕಂಡಂತಹ ಕನಸಿಗೆ ನಾವು ಮಾಡುತ್ತಿರುವ ಕಾರ್ಯಕ್ಕೆ ಅರ್ಥ ದೊರೆಯುತ್ತದೆ. ಕೇವಲ ಲಾಭಕ್ಕಾಗಿ ಸಂಘಟನೆ ನಡೆಸಲು ಸಾಧ್ಯವಿಲ್ಲ. ಎಲ್ಲರ ಸಹಭಾಗಿತ್ವದಿಂದ ಮಾತ್ರ ಯಾವುದೇ ಸಂಘಟನೆಗೆ ಬಲ ತುಂಬಲು ಸಾಧ್ಯ ಎಂದರು.

ಇದನ್ನೂ ಓದಿ: Australia: ಆಸ್ಟ್ರೇಲಿಯಾದಲ್ಲಿ ಮತ್ತೆ ಹಿಂದೂ ದೇವಾಲಯ ಮೇಲೆ ದಾಳಿ ಮಾಡಿದ ಖಲಿಸ್ತಾನಿ ಬೆಂಬಲಿಗರು

ಪ್ರಾಸ್ತಾವಿಕವಾಗಿ ಮಾತನಾಡಿದ ಜೆ.ಪಿ.ಎನ್.ಪಿ. ಟ್ರಸ್ಟಿ ಕುಸುಮಾ ಅಜಯ್, ಕಡು ಬಡತದಿಂದ ಬೆಳೆದುಬಂದ ಜೆ.ಪಿ. ನಾರಾಯಣಸ್ವಾಮಿ ಅವರು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಾಗೂ ಸಮಾಜದ ಬೆಳವಣಿಗೆಗೆ ಸದಾ ತಮ್ಮ ಆದಾಯದ ಭಾಗವನ್ನು ಮುಡಿಪಾಗಿಟ್ಟರು. ಇದನ್ನು ಈಗ ಅವರ ಮಗ ಹಾಗೂ ಕುಟುಂಬದ ಸದಸ್ಯರು ಜೆಪಿ ಪ್ರತಿಷ್ಠಾನದ ರೂಪದಲ್ಲಿ ಮುಂದುವರಿಸಿಕೊಂಡು ಬಂದಿದ್ದಾರೆ. ಪ್ರತಿ ವರ್ಷ 70-80 ಲಕ್ಷ ರೂ. ಮೊತ್ತದಲ್ಲಿ ರಾಜ್ಯದ ವಿವಿಧ ಭಾಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಿ, ಅವರನ್ನು ಶೈಕ್ಷಣಿಕವಾಗಿ ಸಬಲರಾಗಿಸುವ ಪ್ರಯತ್ನ ಸಂಸ್ಥೆಯಿಂದ ಮಾಡಲಾಗುತ್ತಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಮುಖ್ಯ ಸಂಚಾಲಕ ಡಾ. ನಾಗೇಶ್ ನಾಯ್ಕ ಕಾಗಾಲ ಮಾತನಾಡಿ, ಪ್ರತಿಷ್ಠಾನದ ವತಿಯಿಂದ ಅತ್ಯಂತ ವ್ಯವಸ್ಥಿತವಾಗಿ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಇನ್ನೂ ಹೆಚ್ಚಿಗೆ ಸಂಘಟನೆಯಲ್ಲಿ ತೊಡಗಿಕೊಂಡು, ಇನ್ನಷ್ಟು ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸುತ್ತವೆ ಎಂದರು.

ಇದನ್ನೂ ಓದಿ: Pramod Muthalik: ಬಿಜೆಪಿ ನಾಯಕರು ಮನೆಗೆ ಬಂದು ಮೋದಿ ಹೆಸರಲ್ಲಿ ಮತ ಕೇಳಿದರೆ ಚಪ್ಪಲಿಯಿಂದ ಬಾರಿಸಿ: ಪ್ರಮೋದ್‌ ಮುತಾಲಿಕ್

ಕಾರ್ಯಕ್ರಮದಲ್ಲಿ 5 ಜಿಲ್ಲೆಗಳ ಒಟ್ಟು 102 ವಿದ್ಯಾರ್ಥಿಗಳಿಗೆ 2 ವಿಭಾಗದಲ್ಲಿ ತಲಾ 5000 ಹಾಗೂ 7500 ಮೊತ್ತದ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು. ವೇದಿಕೆಯಲ್ಲಿ ಜೆ.ಪಿ.ಎನ್.ಪಿ. ಖಜಾಂಚಿ ಎಂ.ಆರ್. ಪೂರ್ಣೇಶ್, ಟೀಡ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಮೋಹಿನಿ ಪೂಜಾರಿ, ತಾಲೂಕು ಸಂಚಾಲಕ ನವೀನ್ ನಾಯ್ಕ, ನಾಮಧಾರಿ ಸಂಘದ ತಾಲೂಕಾಧ್ಯಕ್ಷ ಸತೀಶ್ ನಾಯ್ಕ್, ಪ್ರಮುಖರಾದ ಆನಂದ್ ಎಸ್. ಪೂಜಾರಿ, ಗಜಾನನ ನಾಯ್ಕ, ನರಸಿಂಹ ನಾಯ್ಕ ಇದ್ದರು. ಶಿರಸಿ ತಾಲೂಕು ಮುಖ್ಯ ಸಂಚಾಲಕ ಎಸ್. ಬಿ. ನಾಯ್ಕ ಎಲ್ಲರನ್ನೂ ಸ್ವಾಗತಿಸಿದರು. ಮನೋಜ್ ನಾಯ್ಕ ವಂದಿಸಿದರು.

Exit mobile version