Site icon Vistara News

Pranavananda Sri : ಪಾದಯಾತ್ರೆ ನಡೆಸುತ್ತಿರುವ ಪ್ರಣವಾನಂದ ಸ್ವಾಮೀಜಿ ಆರೋಗ್ಯದಲ್ಲಿ ಏರುಪೇರು, ವೈದ್ಯರಿಂದ ಚಿಕಿತ್ಸೆ

Pravananda sri

ಶಿವಮೊಗ್ಗ: ಬಿಲ್ಲವ, ಈಡಿಗ, ನಾಮಧಾರಿ ಸಮಾಜಕ್ಕೆ 2ಎ ಮೀಸಲಾತಿ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಂಗಳೂರಿನಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸುತ್ತಿರುವ ಬ್ರಹ್ಮಶ್ರೀ ನಾರಾಯಣಗುರು ಶಕ್ತಿ ಪೀಠದ ಶ್ರೀ ಪ್ರಣವಾನಂದ ಸ್ವಾಮೀಜಿ (Pranavananda Sri) ಅವರ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದೆ.

ಸ್ವಾಮೀಜಿ ಕಳೆದ ಜನವರಿ ೬ರಂದು ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಿಂದ ಬೆಂಗಳೂರಿಗೆ ಪಾದಯಾತ್ರೆ ಆರಂಭಿಸಿದ್ದು, ಮಂಗಳವಾರ ಶಿವಮೊಗ್ಗ ಸಮೀಪದ ಶ್ರೀ ಕ್ಷೇತ್ರ ಐರಾವತ ಐರಣಿ ಹೊಳೆಮಠ ತಲುಪಿತ್ತು. ಅಲ್ಲಿ ರಾತ್ರಿ ವಾಸ್ತವ್ಯದಲ್ಲಿದ್ದಾಗ ಅನಾರೋಗ್ಯ ಕಾಣಿಸಿಕೊಂಡಿದೆ. ಸ್ವಾಮೀಜಿ ಅವರ ಪಾದಯಾತ್ರೆ ಇಂದು ಶಿವಮೊಗ್ಗ ನಗರ ಪ್ರವೇಶ ಮಾಡಲಿದೆ.

ತಡರಾತ್ರಿ ತೀವ್ರ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೂಡಲೇ ವೈದ್ಯರಿಗೆ ತೋರಿಸಲಾಯಿತು. ಶಿವಮೊಗ್ಗದ ವೈದ್ಯ ಡಾ.ಓಂಕಾರ್ ಅವರು ತಪಾಸಣೆ ನಡೆಸಿ ಚಿಕಿತ್ಸೆ ನೀಡಿದ್ದಾರೆ.

ಕಳೆದ ೨೦ ದಿನಗಳಿಂದ ಪಾದಯಾತ್ರೆ ಮಾಡುತ್ತಿರುವುದರಿಂದ ಆಗಿರುವ ಬಳಲಿಕೆ ಮತ್ತು ಹವಾಮಾನದ ಬದಲಾವಣೆ ಕಾರಣರಿಂದ ಜ್ವರ ಬಂದಿದೆ ಎಂದು ಹೇಳಲಾಗಿದೆ.

ಪಾದಯಾತ್ರೆ ಬೇಡಿಕೆಗಳೇನು?
-ಬಿಲ್ಲವ, ಈಡಿಗ, ನಾಮಧಾರಿ ಸಮಾಜಕ್ಕೆ ೨ಎ ಮೀಸಲಾತಿ ಆಗ್ರಹಿಸಿ ಈ ಪಾದಯಾತ್ರೆ ನಡೆಯುತ್ತಿದೆ.
– ಈಡಿಗ ಸಮುದಾಯದವರ ಕುಲಕಸುಬಾಗಿರುವ ಶೇಂದಿ ಇಳಿಸುವ ಮತ್ತು ಮಾರಾಟಕ್ಕೆ ಅನುಮತಿ.
– ಸಾಗರ ತಾಲೂಕಿನ ಸಿಗಂದೂರು ಚೌಡೇಶ್ವರಿ ದೇಗುಲದ ಮೇಲೆ ಸರ್ಕಾರದಿಂದ ನಡೆಯುತ್ತಿರುವ ದೌರ್ಜನ್ಯ ನಿಲ್ಲಬೇಕು.
– ಬೆಂಗಳೂರಲ್ಲಿ ನಾರಾಯಣ ಗುರು ಪ್ರತಿಮೆಯನ್ನು ಸ್ಥಾಪಿಸಬೇಕು.
– ಸರ್ಕಾರ ಹೆಂಡದ ಮಾರಯ್ಯನ ಜಯಂತಿಯನ್ನು ಆಚರಿಸಬೇಕು. ಎಲ್ಲ ವಿವಿಗಳಲ್ಲಿ ನಾರಾಯಣ ಗುರು ಅಧ್ಯಯನ ಪೀಠ ಸ್ಥಾಪಿಸಬೇಕು.
– ಸರ್ಕಾರಿ ಗೋಮಾಳದಲ್ಲಿ ಸರ್ಕಾರ ಈಚಲು, ತೆಂಗು, ತಾಳೆ ಮರ ನೆಡಬೇಕು.
– ಸೇಂದಿ ಇಳಿಸುವವರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಬೇಕು‌.

ಇದನ್ನೂ ಓದಿ | KR Market Flyover | ಪ್ರಚಾರದ ಗೀಳಿಗೆ ಬಿದ್ದು ಹುಚ್ಚಾಟ ಮೆರೆದ ಆ್ಯಂಕರ್ ಅರುಣ್‌, ಅವನಿಗೆ Attention seeking syndrome!

Exit mobile version