ನೆಟ್ಟಾರು(ಸುಳ್ಯ ತಾಲೂಕು ದ.ಕ.): ʻʻನಾನು ಸಾಮಾನ್ಯ ಪ್ರಜೆಯಾಗಿ ಮಾತನಾಡುತ್ತಿದ್ದೇನೆ. ಪ್ರವೀಣ್ ಕುಟುಂಬಕ್ಕೆ ಬಂದ ಪರಿಸ್ಥಿತಿ ಶತ್ರುಗಳಿಗೂ ಬರಬಾರದುʼʼ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ದುಷ್ಕರ್ಮಿಗಳಿಂದ ಕೊಲೆಯಾದ ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಅವರ ಮನೆಗೆ ಭೇಟಿ ನೀಡುವ ಮುನ್ನ ಮಾತನಾಡಿದ ಅವರು, ʻʻಪ್ರವೀಣ್ ಮದುವೆಯಾಗಿ ಕೆಲವು ವರ್ಷವಾಗಿದೆ. ಮನೆಯಲ್ಲಿ ದೀಪ ಹಚ್ಚುವವರು ಇಲ್ಲದ ದಾರುಣ ಸ್ಥಿತಿ ಇದೆ. ನಾನು ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಈ ಮನೆಯವರಿಗೆ ಧೈರ್ಯ ತುಂಬಲು ಬಂದಿದ್ದೇನೆʼʼ ಎಂದು ಹೇಳಿದರು.
ಬಿಜೆಪಿ ಪದಾಧಿಕಾರಿಗಳ ರಾಜೀನಾಮೆಗೆ ಪ್ರತಿಕ್ರಿಯಿಸಿದ ವಿಜಯೇಂದ್ರ ಅವರು, ಇಂತಹ ಬೆಳವಣಿಗೆ ಸಹಜ. ಒಬ್ಬ ಕಾರ್ಯಕರ್ತನನ್ನು ಉಳಿಸಿಕೊಳ್ಳಲು ಆಗದ ಹಿನ್ನೆಲೆಯಲ್ಲಿ ಇಂತಹ ಸಂದರ್ಭದಲ್ಲಿ ಆಕ್ರೋಶ ಹೊರಹಾಕುತ್ತಾರೆ. ಪದಾಧಿಕಾರಿಗಳ ನೋವು ನನಗೂ ಅರ್ಥವಾಗುತ್ತದೆʼʼ ಎಂದರು.
ಬಿ.ವೈ. ವಿಜಯೇಂದ್ರ ಅವರ ಜತೆ ಹಲವು ಬಿಜೆಪಿ ನಾಯಕರು ಇದ್ದಾರೆ.
ಇದನ್ನೂ ಓದಿ| Praveen Nettarru: ಗೃಹ ಸಚಿವರ ಮೇಲೆ ಮಾತ್ರವಲ್ಲ ಇಡೀ ರಾಜ್ಯ ಬಿಜೆಪಿ ಮೇಲೆ ಬೇಸರವಿದೆ ಎಂದ ಸಿ.ಟಿ. ರವಿ