ಬೆಂಗಳೂರು: ಪ್ರವೀಣ್ ನೆಟ್ಟಾರು (Praveen Nettaru) ವಿಚಾರದಲ್ಲಿ ಕಾರ್ಯಕರ್ತರು ಸರ್ಕಾರದ ವಿರುದ್ಧ ತಿರುಗಿ ಬೀಳುವಂತೆ ಮಾಡಿದ್ದೇ ಬಿಜೆಪಿ ಮುಖಂಡರು. ಶಿವಮೊಗ್ಗದ ಹರ್ಷ ಕೊಲೆಯ ಅಪರಾಧಿಗಳನ್ನು ನಡು ರಸ್ತೆಯಲ್ಲಿ ಎನ್‌ಕೌಂಟರ್ ಮಾಡಿಸಿದ್ದರೆ ಈ ಬರ್ಬರ ಹತ್ಯೆ ನಡೆಯುತ್ತಿರಲಿಲ್ಲ ಎಂದು ಚಿಂತಕ, ಯುವ ಬ್ರಿಗೇಡ್ ಸಂಸ್ಥಾಪಕ ಚಿಂತಕ ಚಕ್ರವರ್ತಿ ಸೂಲಿಬೆಲೆ ಗುಡುಗಿದ್ದಾರೆ.
ಹಿಂದೂ ಸಮಾಜ ಸಾಮಾನ್ಯವಾದ ಸಮಾಜವಲ್ಲ. ಬಾಬಾ ಸಾಹೇಬರ ಸಂವಿಧಾನಕ್ಕೆ ಬೆಲೆ ಕೊಟ್ಟು ಸುಮ್ಮನಿದ್ದೇವೆ. ಮುಸಲ್ಮಾನರು ಇದನ್ನು ಮನಗಾಣಬೇಕು. ನಾವು ಜಾಗೃತರಾಗಿಲ್ಲ ಎಂದರೆ ಕಷ್ಟದ ದಿನಗಳು ಎದುರಾಗಲಿವೆ ಎಂದು ಅವರು ಹೇಳಿದ್ದಾರೆ.
ಪ್ರವೀಣ್ ನೆಟ್ಟಾರು ಬರ್ಬರ ಹತ್ಯೆಯನ್ನು ಖಂಡಿಸಿ,ಅಪರಾಧಿಗಳನ್ನು ತಕ್ಷಣ ಬಂಧಿಸಿ ಶಿಕ್ಷಿಸಲು ಆಗ್ರಹಿಸಿ ನಗರದ ಟೌನ್ ಹಾಲ್‌ನಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ನಗರ ಜಿಲ್ಲಾಧಿಕಾರಿಗಳ ಮೂಲಕ ಸಿಎಂಗೆ ಮನವಿ ಪತ್ರ ಸಲ್ಲಿಸಿದ ವಿವಿಧ ಹಿಂದೂ ಸಂಘಟನೆಗಳ ಸದಸ್ಯರು ಬಳಿಕ ಟೌನ್ ಹಾಲ್ ವರೆಗೂ ಮೆರವಣಿಗೆ ಮೂಲಕ ಬಂದರು. ಸಾವಿರಾರು ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಚಕ್ರವರ್ತಿ ಸೂಲಿಬೆಲೆ ಸಮಾಜ ದ್ರೋಹಿಗಳಿಗೆ ಹೇಗೆ ಪಾಕಿಸ್ತಾನ ಟರ್ಕಿ ಫಂಡ್ ಮಾಡುತ್ತಿವೆ ಎಂದು ಈಗಾಗಲೇ ತಿಳಿದಿವೆ. ಈ ವಿಚಾರಗಳಲ್ಲಿ ಕರ್ನಾಟಕ ಸರ್ಕಾರ ದೀರ್ಘ ನಿದ್ದೆಯಲ್ಲಿದೆ. ಒಬ್ಬ ಹಿಂದೂ ರಕ್ತ ಹರಿಯದುದಂತೆ ನಾವು ನೋಡಿಕೊಳ್ಳಬೇಕು. ಈಗ ಹಿಂದೂ ಕಾರ್ಯಕರ್ತರು ಪೋಸ್ಟ್ ಹಾಕಲು ಹೆದರುವಂತಾಗಿದೆ. ತಲೆ ಕಡಿಯುವ ಭಯವಿದೆ. ಹೀಗೆ ಆದರೆ ಸಿದ್ದರಾಮಯ್ಯ ಸರ್ಕಾರ ಉರುಳಿಸಿದ ಹಾಗೆ ನಿಮ್ಮ ಸರ್ಕಾರದ ಉರಿಲಿಸಲಾಗುವುದು ಎಂದು ಬೊಮ್ಮಾಯಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
700 ಕ್ಕೂ ಹೆಚ್ಚು ಕೇಸ್ ತೆಗೆದು ಹಾಕಲಾಗಿದೆ
ಸಿದ್ದರಾಮಯ್ಯ ಅವಧಿಯಲ್ಲಿ 23 ಜನ ಹಿಂದೂ ಕಾರ್ಯಕರ್ತರ ಹತ್ಯೆ ಮಾಡಲಾಗಿದೆ. 700 ಕ್ಕೂ ಹೆಚ್ಚು ಜನರ ಮೇಲಿನ ಕೇಸ್ ತೆಗೆದು ಹಾಕಲಾಗಿತ್ತು ಎಂದು ಆರೋಪಿಸಿದ ಅವರು. ಹಿಂದೂಗಳು ತಮ್ಮ ರಕ್ಷಣೆ ಮಾಡಿಕೊಳ್ಳಲು ತಾವೇ ಮುಂದಾಗಬೇಕು. ಸರ್ಕಾರ ನಮ್ಮ ರಕ್ಷಣೆಗೆ ನಿಲ್ಲುತ್ತಿಲ್ಲ. ಪೊಲೀಸರು ಕಳ್ಳರ ರೀತಿಯಲ್ಲಿ ನಿನ್ನೆ ಲಾಠಿ ಚಾರ್ಜ್ ಮಾಡಿದ್ದಾರೆ. ಮುಫ್ತಿಯಲ್ಲಿ ಹಿಂದಿನಿಂದ ಹೊಡೆದಿದ್ದಾರೆ ಎಂದು ಪೊಲೀಸರ ವಿರುದ್ಧ ಕೆಂಡ ಕಾರಿದರು.
ಇಸ್ಲಾಮಿನ ಗಲಾಟೆ ಇವತ್ತು ಶುರುವಾಗಿದ್ದು ಅಲ್ಲ ನಿಲ್ಲುವುದೂ ಇಲ್ಲ. ಹಿಂದೂ ಕಾರ್ಯಕರ್ತರ ಹತ್ಯೆ ಆಗುವಾಗ ಬಿಜೆಪಿ ಮುಖಂಡರು ನೋಡಿಕೊಂಡು ಸುಮ್ಮನಿದ್ದರು. ಆದರೆ ತಮ್ಮ ಪಕ್ಷದ ಕಾರ್ಯಕರ್ತನ ಹತ್ಯೆ ಆದಾಗ ರಾಜೀನಾಮೆ ಸಲ್ಲಿಸಲು ಮುಂದಾಗಿದ್ದಾರೆ ಎಂದು ಸೂಲಿಬೆಲೆ ದೂರಿದರು.
ಬಿಜೆಪಿ ಸರ್ಕಾರ ಬಂದ ಮೇಲೆ ಹಿಂದೂ ಕಾರ್ಯಕರ್ತರ ಹತ್ಯೆಯಾಗುತ್ತಿದೆ. ಹರ್ಷ, ಚಂದ್ರು ಹತ್ಯೆಯ ಬಳಿಕ ಈಗ ಪ್ರವೀಣ್ ಹತ್ಯೆಯಾಗಿದೆ. ಇಲ್ಲಿವರೆಗೆ ಒಟ್ಟು 35 ಹಿಂದೂ ಕಾರ್ಯಕರ್ತರ ಹತ್ಯೆಯಾಗಿದೆ ಎಂದು ಹಿಂದೂ ಸಂಘಟನೆಗಳ ಮುಖಂಡ ಮೋಹನ್ ಗೌಡ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಹಿಂದೂ ಮುಖಂಡ ಮನೋಹರ ಅಯ್ಯರ್, ಪಾಟಾಪಟ್ ಶ್ರೀನಿವಾಸ, ನಟ ಪ್ರಶಾಂತ್ ಸಂಬರಗಿ ಮತ್ತಿತರರು ಮಾತನಾಡಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ | ವಿಸ್ತಾರ TOP 10 NEWS | ಪ್ರವೀಣ್ ಹತ್ಯಾರೋಪಿಗಳ ಸೆರೆಯಿಂದ VR ಬಿಡುಗಡೆವರೆಗಿನ ಪ್ರಮುಖ ಸುದ್ದಿಗಳಿವು