Site icon Vistara News

ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವಕ್ಕೆ ಸಿದ್ಧತೆ; ಅನುಮತಿಗೆ 3 ದಿನಗಳ ಡೆಡ್ ಲೈನ್

ಗಣೇಶೋತ್ಸವಕ್ಕೆ

ಬೆಂಗಳೂರು: ನಗರದ ವಿವಾದಿತ ಚಾಮರಾಜಪೇಟೆ ಮೈದಾನದಲ್ಲಿ ಸರ್ಕಾರದಿಂದ ಸ್ವಾತಂತ್ರ್ಯ ದಿನಾಚರಣೆ ಬಳಿಕ ಅದ್ಧೂರಿ ಗಣೇಶೋತ್ಸವ ನಡೆಸಲು ಚಾಮರಾಜಪೇಟೆ ನಾಗರಿಕರ ವೇದಿಕೆ ಒಕ್ಕೂಟ ಹಾಗೂ ವಿವಿಧ ಹಿಂದೂಪರ ಸಂಘಟನೆಗಳು ಸಿದ್ಧತೆ ನಡೆಸುತ್ತಿವೆ. ಇದಕ್ಕೆ ಅನುಮತಿ ನೀಡುವಂತೆ ಸಂಘಟನೆಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ಮೂರು ದಿನ ಗಡುವು ನೀಡಿ, ಉತ್ಸವಕ್ಕೆ ದಿನಾಂಕ ಫಿಕ್ಸ್ ಮಾಡಿವೆ.

ಚಾಮರಾಜಪೇಟೆ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಹಿಂದು ಸಂಘಟನೆಗಳು ಪಟ್ಟು ಹಿಡಿದಿದ್ದು, ಮೈದಾನದಲ್ಲಿ ಗಣೇಶೋತ್ಸವಕ್ಕೆ ಅನುಮತಿ ನೀಡಲು ಸರ್ಕಾರಕ್ಕೆ 3 ದಿನಗಳ ಡೆಡ್ ಲೈನ್ ನೀಡಿವೆ. ಶಾಸಕ ಜಮೀರ್ ಅಹ್ಮದ್ ಗಣೇಶ ಪೂಜೆ ಮಾಡಿದರೂ ನಮಗೆ ಅಡ್ಡಿ ಇಲ್ಲ. ಒಟ್ಟಿನಲ್ಲಿ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಆಗಲೇಬೇಕು ಎಂದು ಪಟ್ಟು ಹಿಡಿದು, ಉತ್ಸವದ ಮೆರವಣಿಗೆಗೆ ರೂಟ್‌ ಮ್ಯಾಪ್ ಕೂಡ ಪ್ರಕಟಿಸಿವೆ.

ಇದನ್ನೂ ಓದಿ | BBMP Election | ಆಗಸ್ಟ್ 25ರಂದು ಮತದಾರರ ಪಟ್ಟಿ ಕರಡು ಪ್ರತಿ ಪ್ರಕಟ

ಪಾದರಾಯನಪುರದಿಂದ ಟೌನ್ ಹಾಲ್‌ವರೆಗೆ ಬೃಹತ್ ಮೆರವಣಿಗೆ
ಬೆಂಗಳೂರು ಮಹಾನಗರ ಗಣೇಶೋತ್ಸವ ಸಮಿತಿ ಸಹಯೋಗದಲ್ಲಿ ಸಂಘಟನೆಗಳು ಅದ್ಧೂರಿ ಗಣೇಶೋತ್ಸವಕ್ಕೆ ಸ್ಥಳ ಮತ್ತು ದಿನಾಂಕ ನಿಗದಿ ಮಾಡಿ, ಭರ್ಜರಿ ಪೋಸ್ಟರ್ ಕೂಡ ಬಿಡುಗಡೆ ಮಾಡಿವೆ. ಆಗಸ್ಟ್ 31ರಿಂದ ಸೆಪ್ಟೆಂಬರ್ 10ರವರೆಗೆ ಅದ್ಧೂರಿ ವಿನಾಯಕ ಮಹೋತ್ಸವ ನಡೆಯಲಿದ್ದು, ಒಟ್ಟು 11 ದಿನಗಳು ಉತ್ಸವ ನಡೆಸಲಾಗುತ್ತದೆ.

ಆ.31ರ ಬೆಳಗ್ಗೆ 9 ಗಂಟೆಗೆ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದ್ದು, ಆ.10ರಂದು ಚಾಮರಾಜಪೇಟೆಯಲ್ಲಿ ಗಣೇಶನ ಅದ್ಧೂರಿ ಮೆರವಣಿಗೆ ನಡೆಯಲಿದೆ. ಪಾದರಾಯನಪುರದಿಂದ ಈ ಬಾರಿ ಗಣೇಶೋತ್ಸವದ ರ‍್ಯಾಲಿ ಆರಂಭವಾಗಲಿದ್ದು, ಚಾಮರಾಜಪೇಟೆ ಕ್ಷೇತ್ರದ ಎಲ್ಲ ವಾರ್ಡ್‌ಗಳಲ್ಲೂ ವಿಘ್ನ ನಿವಾರಕನ ಮೆರವಣಿಗೆ ನಡೆಯಲಿದೆ. ಪಾದರಾಯನಪುರದಿಂದ, ಮೈಸೂರು ಬ್ಯಾಂಕ್ ಸರ್ಕಲ್‌ವರೆಗೆ ರ‍್ಯಾಲಿ ನಡೆಸಲು ಸಮಿತಿ ನಿರ್ಧರಿಸಿದೆ.

ಇದನ್ನೂ ಓದಿ | Ganesha Festival | ಪರಿಸರ ಸ್ನೇಹಿ ಆಚರಣೆಗೆ ಸಿದ್ಧತೆ, ಬಿಬಿಎಂಪಿಯಿಂದ ಹಲವು ನಿರ್ಬಂಧ

Exit mobile version